ETV Bharat / bharat

ಪ್ರಿಪೇಯ್ಡ್ ಮೀಟರ್​ಗಳನ್ನು ತೆಗೆದು SDO ಕಚೇರಿಗೆ ನೀಡಿದ ರೈತರು

author img

By

Published : Apr 4, 2022, 3:24 PM IST

ಕೇಂದ್ರ ಸರ್ಕಾರದ ಆದೇಶದಂತೆ ಪಂಜಾಬ್​ನಲ್ಲಿ ಪ್ರಿಪೇಯ್ಡ್​​​ ಮೀಟರ್​ಗಳನ್ನು ಅಳವಡಿಸಲಾಗುತ್ತಿದೆ. ಆದ್ರೆ ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದು, ಅಳವಡಿಸಲಾದ ಮೀಟರ್​ಗಳನ್ನು ತೆಗೆದು ಎಸ್​ಡಿಒ ಕಚೇರಿಗೆ ನೀಡುತ್ತಿದ್ದಾರೆ.

work of installing prepaid meters in Punjab has been continued
ಪ್ರಿಪೇಯ್ಡ್ ಮೀಟರ್​ಗಳನ್ನು ತೆಗೆದು SDO ಕಚೇರಿಗೆ ನೀಡಿದ ರೈತರು

ಪಟಿಯಾಲ: ರಾಜ್ಯದಲ್ಲಿ ಪ್ರಿಪೇಯ್ಡ್ ಮೀಟರ್‌ಗಳನ್ನು ಅಳವಡಿಸಿ, ಇಲ್ಲವೇ ಹಣವನ್ನು ಕಳೆದುಕೊಳ್ತಿರಾ ಎಂದು ಕೇಂದ್ರ ಸರ್ಕಾರ ಪಂಜಾಬ್‌ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶದ ಮೇರೆಗೆ ಪಂಜಾಬ್‌ನಲ್ಲಿ ಪ್ರಿಪೇಯ್ಡ್ ಮೀಟರ್‌ಗಳನ್ನು ಅಳವಡಿಸುವ ಕಾರ್ಯ ಮುಂದುವರೆದಿದೆ. ವಿದ್ಯುತ್ ಇಲಾಖೆ ಇದುವರೆಗೆ ಪಂಜಾಬ್‌ನ ಹಲವು ಹಳ್ಳಿಗಳಲ್ಲಿ ಈ ಮೀಟರ್‌ಗಳನ್ನು ಅಳವಡಿಸಿದೆ.

ಪ್ರಿಪೇಯ್ಡ್ ಮೀಟರ್‌ಗಳನ್ನು ಅಳವಡಿಸದಂತೆ ರೈತರ ಆಗ್ರಹ

ಒಂದೆಡೆ ವಿದ್ಯುತ್ ಇಲಾಖೆಯ ನೌಕರರು ಈ ಮೀಟರ್‌ಗಳನ್ನು ಅಳವಡಿಸುತ್ತಿದ್ದರೇ, ಮತ್ತೊಂದೆಡೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡರು ಮತ್ತು ಕಾರ್ಯಕರ್ತರು ಗ್ರಾಮಗಳಿಂದ ಈ ಮೀಟರ್‌ಗಳನ್ನು ತೆಗೆದು ವಿದ್ಯುತ್​ ಇಲಾಖೆಗೆ ವಾಪಸ್​ ನೀಡುತ್ತಿದ್ದಾರೆ. ಈ ರೀತಿಯ ಘಟನೆ ಇತ್ತೀಚೆಗೆ ಪಟಿಯಾಲಾದ ಗ್ರಾಮಗಳಾದ ಧಕ್ದರ್ಬಾ, ರಾಜ್‌ಗಢ, ಬೀಬಿಪುರ ಇತ್ಯಾದಿಗಳಿಂದ ಕಂಡುಬಂದಿದೆ.

ವಾಸ್ತವವಾಗಿ ಇಲ್ಲಿನ ನೀರಿನ ಟ್ಯಾಂಕ್​ಗಳ ಮೇಲೆ ಪ್ರಿಪೇಯ್ಡ್ ಮೀಟರ್​ನನ್ನು ಅಳವಡಿಸಲಾಗಿತ್ತು. ಆದ್ರೆ ಸ್ಥಳಕ್ಕಾಗಮಿಸಿದ ಭಾರತೀಯ ಕಿಸಾನ್ ಯೂನಿಯನ್ ಮುಖಂಡರು ಹಾಗೂ ಕಾರ್ಯಕರ್ತರು ಮೀಟರ್ ತೆಗೆದು ಎಸ್​ಡಿಒಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ರೈತ ಸಂಘ ಕೂಡ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಪಂಜಾಬ್‌ನಲ್ಲಿ ಪ್ರಿಪೇಯ್ಡ್ ಮೀಟರ್‌ಗಳನ್ನು ಯಾವುದೇ ಕಾರಣಕ್ಕೂ ಅಳವಡಿಸಲು ಬಿಡುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಗ್ರ್ಯಾಮಿ ಪ್ರಶಸ್ತಿ ಪಡೆದ ಭಾರತೀಯ-ಅಮೆರಿಕನ್ ಗಾಯಕಿ ಫಲ್ಗುಣಿ ಶಾ

ಯಾವುದೇ ಗ್ರಾಮ ಅಥವಾ ಪಟ್ಟಣದಲ್ಲಿ ಈ ಮೀಟರ್‌ಗಳನ್ನು ಅಳವಡಿಸಿದರೆ ಅದನ್ನು ವಿರೋಧಿಸಬೇಕು. ಅಲ್ಲದೇ ಈ ಮೀಟರ್‌ಗಳನ್ನು ಅಳವಡಿಸುವುದನ್ನು ನಿಲ್ಲಿಸಬೇಕು. ಇದರಿಂದ ಪಂಜಾಬ್ ಲೂಟಿಯಾಗುವುದಿಲ್ಲ ಎಂದು ರೈತ ಮುಖಂಡರು ಪಂಜಾಬ್‌ನ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.