ETV Bharat / bharat

ಇಂದು ಸಿಂಘು ಗಡಿಯಲ್ಲಿ ನಡೆಯಬೇಕಿದ್ದ ರೈತರ ಜಂಟಿ ಸಭೆ ನಾಳೆಗೆ ಮುಂದೂಡಿಕೆ - ಕೃಷಿ ಕಾಯ್ದೆಗಳು ವಾಪಸ್

ಇಂದು ಸಿಂಘು ಗಡಿಯಲ್ಲಿ ನಡೆಯಬೇಕಿದ್ದ ರೈತರ ಜಂಟಿ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ.

farmers joint meeting postponed for tomorrow at singhu border
ಇಂದು ಸಿಂಘು ಗಡಿಯಲ್ಲಿ ನಡೆಯಬೇಕಿದ್ದ ರೈತರ ಜಂಟಿ ಸಭೆ ನಾಳೆಗೆ ಮುಂದೂಡಿಕೆ
author img

By

Published : Nov 20, 2021, 12:28 PM IST

ಸೋನಿಪತ್​​(ಹರಿಯಾಣ): ಅನ್ನದಾತರ ಬೃಹತ್​ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೊನೆಗೂ ಮೂರು ಕೃಷಿ ಕಾನೂನುಗಳನ್ನು ರದ್ದು (Repeal of three farm laws) ಮಾಡುವುದಾಗಿ ನಿನ್ನೆ ಘೋಷಿಸಿದೆ. ಇದು ರೈತರ ಯಶಸ್ಸು ಎಂದು ಭಾರತೀಯ ಕಿಸಾನ್​ ಯೂನಿಯನ್​ ರಾಷ್ಟ್ರೀಯ ವಕ್ತಾರ​ (National spokesperson of Bhartiya Kisan Union) ರಾಕೇಶ್ ಟಿಕಾಯತ್​ (Rakesh Tikait) ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ರೈತ ಚಳವಳಿ ತಕ್ಷಣವೇ ಕೊನೆಗೊಳ್ಳುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದರು.

ಎಲ್ಲ ರೈತ ಸಂಘಟನೆಗಳ ಮುಖಂಡರು ಶನಿವಾರವೇ ಚಳವಳಿ ಅಂತ್ಯಗೊಳಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ರೈತ ಮುಖಂಡರಿಂದ ಬಂದಿತ್ತು. ಆದರೆ, ಇಂದು ಸಿಂಘು ಗಡಿಯಲ್ಲಿ ನಡೆಯಬೇಕಿದ್ದ ರೈತರ ಜಂಟಿ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ಸಭೆ ಮುಂದೂಡಿಕೆಯಾಗಿದೆ ಎಂದು ಯುನೈಟೆಡ್ ಕಿಸಾನ್ ಮೋರ್ಚಾದ ಮುಖಂಡ ಡಾ. ದರ್ಶನ್​​ ಪಾಲ್ ಈಟಿವಿ ಭಾರತ ವರದಿಗಾರರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಮಾಹಿತಿ ಪ್ರಕಾರ ಸಿಂಘು ಗಡಿಯಲ್ಲಿ ರೈತ ಮುಖಂಡರು ಸಭೆ ನಡೆಸಿ ನ.29ರಂದು ದೆಹಲಿಗೆ ತೆರಳಲಿದ್ದಾರೆ. ಕನಿಷ್ಠ ಬೆಂಬಲ ಬೆಲೆ (MSP) ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ವಿಚಾರವೇ ನಾಳೆ ಸಭೆಯ ಪ್ರಮುಖ ವಿಷಯವಾಗಿದೆ.

ಇದನ್ನೂ ಓದಿ: ಮೂರು ಕೃಷಿ ಕಾನೂನುಗಳು ರದ್ದು: ಪ್ರಧಾನಿಗೆ ಹಿಂದಿಯಲ್ಲೇ ಪ್ರಿಯಾಂಕಾ ಕೌಂಟರ್​ ಅಟ್ಯಾಕ್​

ಶುಕ್ರವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದ ಕೇಂದ್ರದ ಮಹತ್ವಾಕಾಂಕ್ಷಿ ಮೂರು ಕೃಷಿ ಕಾನೂನುಗಳನ್ನು ವಾಪಸ್​ ಪಡೆಯುವುದಾಗಿ ಘೋಷಣೆ (PM Narendra Modi announces to repeal all three farm laws) ಮಾಡಿದ್ದರು. ಇದೇ ವೇಳೆ ರೈತ ಸಮುದಾಯದ ಕ್ಷಮೆಯನ್ನೂ ಕೋರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.