ಜೈಪುರ್(ರಾಜಸ್ಥಾನ): ರಾಜಸ್ಥಾನ ವಿಧಾನಸಭೆಯಲ್ಲಿ ಕಾಮಲ್ವೆಲ್ತ್ ಸಂಸದೀಯ ಸಂಘ ಆಯೋಜನೆ ಮಾಡಿದ್ದ ಸೆಮಿನಾರ್ನಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಶೀಘ್ರದಲ್ಲೇ ಕೇಂದ್ರದಿಂದ ಫ್ಲೆಕ್ಸ್ ಎಂಜಿನ್ ಪಾಲಿಸಿ ಜಾರಿಗೆ ತರಲಾಗುವುದು ಎಂದರು.
ಗೋಧಿ ಮತ್ತು ಭತ್ತ ಉತ್ಪಾದನೆ ಮಾಡುವುದರ ಜೊತೆಗೆ ರೈತರು ಇನ್ಮುಂದೆ ಪೆಟ್ರೋಲ್ ಮತ್ತು ಡೀಸೆಲ್ ಕೂಡ ತಯಾರು ಮಾಡಬಹುದು ಎಂದು ತಿಳಿಸಿರುವ ಕೇಂದ್ರ ಸಚಿವರು, ಗೋಧಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆ ಮಾಡಲು ಅವಕಾಶವಿದೆ ಎಂದು ತಿಳಿಸಿದರು.
ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡ ಕುಸಿತ: ಅಣ್ಣ-ತಮ್ಮ ದುರ್ಮರಣ, ಮೂವರ ರಕ್ಷಣೆ
ಕೇಂದ್ರ ಸರ್ಕಾರದಿಂದ ಫ್ಲೆಕ್ಸ್ ಎಂಜಿನಿ ಪಾಲಿಸಿ ಜಾರಿಯಾಗುವುದರಿಂದ ಚಾಲಕರು ತಮ್ಮ ವಾಹನಗಳಿಗೆ ಪೆಟ್ರೋಲ್ ಅಥವಾ ಶೇ. 100ರಷ್ಟು ಎಥೆನಾಲ್ ಇಂಧನ ಆಯ್ಕೆ ಮಾಡಿಕೊಳ್ಳಬಹುದು. ಈಗಾಗಲೇ ಅಮೆರಿಕ, ಬ್ರೆಜಿಲ್ ಮತ್ತು ಕೆನಡಾದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ ಎಂಬ ಮಾಹಿತಿ ಹಂಚಿಕೊಂಡರು.
ರಾಜಸ್ಥಾನ, ಕರ್ನಾಟಕ, ಗುಜರಾತ್, ತೆಲಂಗಾಣ, ಛತ್ತೀಸ್ಗಢ, ಒಡಿಶಾ ಮತ್ತು ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಆದರೆ ಇನ್ಮುಂದೆ ಶೇ. 50ರಷ್ಟು ಸೂಪರ್ ನೀರಾವರಿ ವ್ಯವಸ್ಥೆಯಿಂದ ಈ ಸಮಸ್ಯೆ ಬಗೆಹರಿಸಲು ಸಾಧ್ಯವಿದ್ದು, ರೈತರು ಹೆಚ್ಚಿನ ಬೆಳೆ ಬೆಳೆಯಬಹುದು ಎಂದರು.