ಅಲ್ವಾರ್(ರಾಜಸ್ಥಾನ) : ಕೇಂದ್ರದ ವಿರುದ್ಧ ರೈತರ ಧರಣಿ ಅಬಾಧಿತವಾಗಿ ಮುಂದುವರೆದಿದೆ. ಈ ನಡುವೆ ಆಕ್ರೋಶಗೊಂಡ ರೈತರು ಷಹಜಹಾನ್ಪುರ ಗಡಿಯಲ್ಲಿ ಮಾಡಿದ ಕಾರ್ಯ ಸರ್ಕಾರಕ್ಕೆ ಮತ್ತೊಂದು ಸವಾಲಾಗಿದೆ.
ರೈತ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಷಹಜಹಾನ್ಪುರ ಗಡಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಹುತಾತ್ಮರ ಸ್ಮಾರಕವನ್ನು ಅನುಮತಿಯಿಲ್ಲದೆ ರಾತ್ರೋರಾತ್ರಿ ನಿರ್ಮಿಸಲಾಗಿದೆ.
ಈ ಹಿಂದೆ ಸರ್ಕಾರದ ಅನುಮತಿಯೊಂದಿಗೆ ಹುತಾತ್ಮ ರೈತರ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ಪ್ರತಿಭಟನಾನಿರತರು ಹೇಳಿದ್ದರು. ಆದರೆ, ರಾತ್ರೋರಾತ್ರಿ ಅನುಮತಿಯಿಲ್ಲದೆ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಈ ಸ್ಮಾರಕ ನಿರ್ಮಾಣಕ್ಕೆ ದೇಶಾದ್ಯಂತ ವಿವಿಧ ರಾಜ್ಯಗಳಿಂದ ಮಣ್ಣು ಮತ್ತು ಚಿತಾಭಸ್ಮ ಸಂಗ್ರಹಿಸಲಾಗಿದೆ.
ನಾವು ಹುತಾತ್ಮರ ಸ್ಮಾರಕ ಮಾಡಿದ್ದೇವೆ. ಸರ್ಕಾರ ಧೈರ್ಯವಿದ್ದರೆ ಹುತಾತ್ಮರು ಸ್ಮಾರಕವನ್ನು ತೆಗೆದು ಹಾಕಲಿ ಎಂದು ಸವಾಲೆಸೆದರು.
ಇದನ್ನೂ ಓದಿ: ಮತದಾರರ ಪಟ್ಟಿಯಿಂದ ಶಶಿಕಲಾ ಹೆಸರೇ ನಾಪತ್ತೆ