ETV Bharat / bharat

ಮೇಕೆಗಳ ಕದ್ದ ಶಂಕೆ ಮೇಲೆ ಜಗಳ ಮಾಡಿದ ರೈತನಿಗೆ ಗುಂಡಿಕ್ಕಿ ಕೊಲೆ - ಸಿಂಗಲ್ ಬ್ಯಾರೆಲ್​ ಗನ್‌ನಿಂದ ಗುಂಡು ಹಾರಿಸಿ ಕೊಲೆ

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಮೇಕೆಗಳನ್ನು ಕದ್ದ ಶಂಕೆ ಮೇಲೆ ಜಗಳವಾಡಿದ ರೈತನಿಗೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ.

farmer-shot-dead-in-tn-in-dispute-over-missing-goats
ಮೇಕೆಗಳ ಕದ್ದ ಶಂಕೆ ಮೇರೆಗೆ ಜಗಳವಾಡಿದ ರೈತನಿಗೆ ಗುಂಡಿಕ್ಕಿ ಕೊಲೆ
author img

By

Published : Oct 9, 2022, 3:19 PM IST

ಕೊಯಮತ್ತೂರು (ತಮಿಳುನಾಡು): ಮೇಕೆಗಳ ನಾಪತ್ತೆ ವಿಷಯವಾಗಿ ನಡೆದ ಜಗಳದಲ್ಲಿ ರೈತನಿಗೆ ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ. ಚಿನ್ನಸ್ವಾಮಿ ಎಂಬುವರು ಕೊಲೆಯಾದ ರೈತ.

ಇಲ್ಲಿನ ಮೆಟ್ಟುಪಾಳ್ಯಂ ಬಳಿ ರೈತ ಚಿನ್ನಸ್ವಾಮಿ (58) ಮೇಲೆ ಸಿಂಗಲ್ ಬ್ಯಾರೆಲ್​ ಗನ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಕೊಲೆ ಆರೋಪಿಯನ್ನು ರಂಜಿತ್ ಕುಮಾರ್ ಎಂದು ಗುರುತಿಸಲಾಗಿದೆ.

ನಡೆದಿದ್ದು ಏನು?: ಶನಿವಾರ ಸಂಜೆ ಚಿನ್ನಸ್ವಾಮಿ ಅವರಿಗೆ ಸೇರಿದ ಕೆಲವು ಮೇಕೆಗಳು ನಾಪತ್ತೆಯಾಗಿದ್ದವು. ಮಂಧರೈಕ್ಕಾಡು ಪ್ರದೇಶದಲ್ಲಿನ ಅವರ ಜಮೀನಿಂದ ಮೇಕೆಗಳು ಕಾಣೆಯಾಗಿದ್ದವು. ಈ ಬಗ್ಗೆ ಪೊಲೀಸರಿಗೂ ಚಿನ್ನಸ್ವಾಮಿ ದೂರು ನೀಡಿದ್ದರು.

ಇದರ ನಡುವೆ ಸಂಬಂಧಿಕರೊಬ್ಬರು 28 ವರ್ಷದ ರಂಜಿತ್ ಕುಮಾರ್ ಎಂಬುವವರ ಕಡೆಗೆ ಬೆರಳು ಮಾಡಿ ತೋರಿಸಿದ್ದಾರೆ. ಗ್ರಾಮದಲ್ಲಿ ಈ ರಂಜಿತ್ ಕುಮಾರ್ ಮೇಕೆಗಳ ಕಳ್ಳತನ ಮಾಡಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಂಬಂಧಿಕರು ಹೇಳಿದ್ದಾರೆ. ಹೀಗಾಗಿಯೇ ರಂಜಿತ್ ತಮ್ಮ ಮನೆಯಿಂದ ಹಾದು ಹೋಗುತ್ತಿರುವುದನ್ನು ಗಮನಿಸಿದ ಚಿನ್ನಸಾಮಿ, ಅವರೊಂದಿಗೆ ಜಗಳವಾಡಿದ್ದಾರೆ.

ಈ ವೇಳೆ ತಾನು ಯಾವುದೇ ಮೇಕೆಗಳನ್ನು ಕದ್ದಿಲ್ಲ ಎಂದು ರಂಜಿತ್ ಹೇಳಿದ್ದರೂ ಚಿನ್ನಸಾಮಿ ಆತನಿಗೆ ಥಳಿಸಿದ್ದಾರೆ. ಆಗ ರಂಜಿತ್ ಸ್ಥಳದಿಂದ ಹೊರಟು ಮಧ್ಯರಾತ್ರಿಯ ಸುಮಾರಿಗೆ ಸಿಂಗಲ್ ಬ್ಯಾರೆಲ್​ ನಾಡ ಗನ್‌ನೊಂದಿಗೆ ಹಿಂತಿರುಗಿ ಚಿನ್ನಸ್ವಾಮಿಯ ಮೇಲೆ ಗುಂಡು ಹಾರಿಸಿದ್ದಾರೆ. ಇದರ ಪರಿಣಾಮ ಚಿನ್ನಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸದ್ಯ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಆರೋಪಿ ರಂಜಿತ್ ಕುಮಾರ್​ನನ್ನು ಬಂಧಿಸಿ, ಕೊಲೆ ಬಳಸಿದ ಗನ್​ ವಶಪಡಿಸಿಕೊಂಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಕಾಂಗ್ರೆಸ್​ನ ಬುಡಕಟ್ಟು ಸಮುದಾಯದ ಶಾಸಕನ ಮೇಲೆ ಹಲ್ಲೆ: ರಾತ್ರೋರಾತ್ರಿ ಬೆಂಬಲಿಗರಿಂದ ಭಾರೀ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.