ETV Bharat / bharat

500 ಕೆಜಿ ಈರುಳ್ಳಿಗೆ ಸಿಕ್ಕಿದ್ದು ಬರೇ 2 ರೂಪಾಯಿ ಚೆಕ್!​ ಬೆಲೆ ಕುಸಿತದಿಂದ ತತ್ತರಿಸಿದ ರೈತ

author img

By

Published : Feb 23, 2023, 3:16 PM IST

Updated : Feb 23, 2023, 3:30 PM IST

ಬೆಲೆ ಕುಸಿತ: ರೈತನೊಬ್ಬ 5 ಕ್ವಿಂಟಲ್ ಈರುಳ್ಳಿ ಮಾರಾಟ ಮಾಡಿ ಕೇವಲ 2 ರೂಪಾಯಿ ಚೆಕ್​ನೊಂದಿಗೆ ಅತೀವ ನಿರಾಶೆಯಿಂದ ಮನೆಗೆ ಮರಳಿದ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

Farmer received two rupees check
ರೈತನಿಗೆ ಸಿಕ್ಕಿದ 2 ರುಪಾಯಿ ಚೆಕ್​

ಸೋಲಾಪುರ (ಮಹಾರಾಷ್ಟ್ರ): ಇಲ್ಲಿನ ಬಾರ್ಶಿ ಎಂಬಲ್ಲಿನ ರೈತನೋರ್ವ ಸೋಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 500 ಕೆಜಿ ಈರುಳ್ಳಿಯನ್ನು ಫೆಬ್ರವರಿ 17 ರಂದು ಮಾರಾಟ ಮಾಡಿದ್ದಾನೆ. ಆದರೆ ಅದಕ್ಕೆ ಪ್ರತಿಯಾಗಿ ಆತನಿಗೆ ಮಾರುಕಟ್ಟೆ ವ್ಯಾಪಾರಿಯಿಂದ ಸಿಕ್ಕಿದ್ದು ಬರೇ 2 ರೂಪಾಯಿಯ ಚೆಕ್!.​

58 ವರ್ಷದ ರೈತ ರಾಜೇಂದ್ರ ತುಕಾರಾಂ ಚವ್ಹಾಣ ಅವರು ತಮ್ಮ ತೋಟದಲ್ಲಿ ಬೆಳೆದ ಐದು ಕ್ವಿಂಟಲ್ ಈರುಳ್ಳಿಯನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಲು ತಂದಿದ್ದರು. ಮಾರುಕಟ್ಟೆಯ ಸೂರ್ಯ ಟ್ರೇಡರ್ಸ್​ನ ವ್ಯಾಪಾರಿ ಈರುಳ್ಳಿಯನ್ನು ತೂಕಕ್ಕೆ ಹಾಕಿದ್ದು, ಬೆಲೆ ಕುಸಿತದ ಕಾರಣಕ್ಕೆ ಕೆಜಿಗೆ 1 ರೂ.ನಂತೆ ಲೆಕ್ಕ ಹಾಕಿದ್ದಾನೆ. ಈರುಳ್ಳಿ ತಂದ ವಾಹನ ಬಾಡಿಗೆ, ಸಾಗಾಣಿಕೆ ಖರ್ಚು, ಸುಂಕದ ಹಣ ಕಡಿತಗೊಳಿಸಿ ಕೊನೆಗೆ ರೈತನಿಗೆ ಕೊಟ್ಟಿದ್ದು 2 ರೂಪಾಯಿ. ಈ ಹಣದ ಸ್ಲಿಪ್​ ಬರೆದು 2 ರೂಪಾಯಿ ಚೆಕ್​ ನೀಡಿದ್ದಾನೆ. ಆ ಚೆಕ್​ನಲ್ಲಿ ಮಾರ್ಚ್ 8, 2023 ಎಂದು ದಿನಾಂಕ ನಮೂದಾಗಿದೆ. ರೈತ ತೀವ್ರ ಹತಾಶೆ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾನೆ.

  • ते बघा निर्लज्ज व्यापार्याला दोन रूपयांचा चेक देताना लाज कशी वाटली नाही. व्यापारी शेतकर्यांना सांगतो १५ दिवसाने हा चेक वटेल. pic.twitter.com/415yjz98O7

    — Raju Shetti (@rajushetti) February 22, 2023 " class="align-text-top noRightClick twitterSection" data=" ">

ಸ್ವಾಭಿಮಾನಿ ಶೆಟ್ಕರ್​ ಸಂಘಟನೆಯ ಮುಖಂಡ ಹಾಗೂ ಮಾಜಿ ಸಂಸದ ರಾಜು ಶೆಟ್ಟಿ ಎಂಬವರು ಟ್ವಿಟರ್​ನಲ್ಲಿ ಇದಕ್ಕೆ ಪ್ರತಿಕ್ರಿಯಿಸಿ, "ರಾಜೇಂದ್ರ ಚವ್ಹಾಣ ಸೇರಿದಂತೆ ಅನೇಕ ರೈತರು ಕಷ್ಟಪಟ್ಟು ದುಡಿದು ಬೆಳೆಯಿಂದ ಆದಾಯ ಪಡೆಯುತ್ತಿದ್ದಾರೆ. ಅದೇ ಆದಾಯದಲ್ಲಿ ಜೀವನ ನಡೆಸುತ್ತಾರೆ. ಆದರೆ ರೈತರ ಬೆವರಿಗೆ ಈ ರೀತಿ ಬೆಲೆ ದೊರೆತರೆ ಹೇಗೆ?. ಬೆಲೆ ಕುಸಿತದಿಂದಾಗಿ 10 ಮೂಟೆ ಈರುಳ್ಳಿಗೆ 2 ರೂಪಾಯಿಯಷ್ಟೇ ರೈತನ ಕೈ ಸೇರಿದೆ. ರೈತರಿಗೆ ನ್ಯಾಯ ಸಿಗದಿದ್ದರೆ ಮುಂಬೈನಲ್ಲಿ ಸಚಿವಾಲಯದ ಮುಂದೆ ಆತ್ಮಾಹುತಿ ಮಾಡಿಕೊಳ್ಳುತ್ತೇವೆ" ಎಂದು ಎಚ್ಚರಿಕೆ ನೀಡಿದರು.

"ಸರ್ಕಾರಕ್ಕೆ ನಾಚಿಕೆಯಾಗಬೇಕು. ಹೀಗಾದರೆ ರೈತರು ಬದುಕುವುದು ಹೇಗೆ?, ಒಂದೆಡೆ ವಿದ್ಯುತ್​ ಸಂಪರ್ಕ ಕಡಿತದಿಂದ ಬೆಳೆಗಳು ನಾಶವಾಗಿವೆ. ರಾಜೇಂದ್ರ ತುಕಾರಾಂ ಚವ್ಹಾಣ ಸೋಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 10 ಮೂಟೆ ಈರುಳ್ಳಿ ಮಾರಿದಾಗ ಎಷ್ಟು ಹಣ ಸಿಕ್ಕಿ ನೋಡಿ?. 512 ಕೆಜಿ ಈರುಳ್ಳಿ ಮಾರಾಟ ಮಾಡಿದ್ದಕ್ಕೆ ಕೇವಲ 2 ರೂಪಾಯಿ ಸಿಕ್ಕಿದೆ" ಎಂದು ಟ್ವೀಟ್​ ಮಾಡಿದ್ದಾರೆ.

ರಾಜೇಂದ್ರ ಚವ್ಹಾಣ ಈ ಬಗ್ಗೆ ಮಾತನಾಡಿ, "ಸೋಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಫೆ.17ರಂದು ಒಟ್ಟು 10 ಮೂಟೆ ಈರುಳ್ಳಿ ತೆಗೆದುಕೊಂಡು ಹೋಗಿದ್ದೆ. 8 ಮೂಟೆ 402 ಕೆಜಿ, 2 ಮೂಟೆ 110 ಕೆಜಿ ತೂಕವಿತ್ತು. ಬೆಲೆ ಕುಸಿತದಿಂದ ಕ್ವಿಂಟಲ್​ಗೆ 100 ರೂ. ನಂತೆ ಒಟ್ಟು ಮೊತ್ತ 512 ರೂ. ಆಗಿದೆ. ಸಾಗಾಣಿಕೆ, ಸುಂಕ, ವಾಹನದ ಬಾಡಿಗೆ ಸೇರಿ ಒಟ್ಟು 509 ರೂ. ಆಗಿತ್ತು. 512 ರೂ. ನಿಂದ 509 ರೂಪಾಯಿ ಕಡಿತಗೊಳಿಸಿದಾಗ ಬಾಕಿ ಕೇವಲ 2 ರೂ. ಉಳಿಯಿತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಯಮಗಳ ಪ್ರಕಾರ ಸೂರ್ಯ ಟ್ರೇಡರ್ಸ್ ಅಂಗಡಿ ಮಾಲೀಕ ರೈತ ರಾಜೇಂದ್ರ ಚವ್ಹಾಣ ಹೆಸರಿನಲ್ಲಿ ಸಾಮಾಜಿಕ ನಗರ ಸಹಕಾರಿ ಬ್ಯಾಂಕ್​ನ ಎರಡು ರೂಪಾಯಿ ಚೆಕ್ ನೀಡಿದ್ದಾನೆ. ಚೆಕ್ ದಿನಾಂಕ ಮಾರ್ಚ್ 8, 2023 ಎಂದಿದ್ದು, ಆ ಎರಡು ರೂಪಾಯಿಗೆ ಮತ್ತೆ ಸೋಲಾಪುರದ ಮಾರುಕಟ್ಟೆಗೆ ನಾನು ಹೋಗಬೇಕಾಯಿತು" ಎಂದು ತಿಳಿಸಿದರು.

ಸೋಲಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸೂರ್ಯ ಟ್ರೇಡರ್ಸ್ ಮಾಲೀಕ ನಾಸೀರ್ ಖಲೀಫ ದೂರವಾಣಿ ಮೂಲಕ ಮಾಹಿತಿ ನೀಡಿ, "ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದೆ. ಹೀಗಾಗಿ ದರ ಕುಸಿದಿದೆ. ಉತ್ತಮ ಗುಣಮಟ್ಟದ ಈರುಳ್ಳಿಗೆ ಇಂದಿಗೂ ಉತ್ತಮ ಬೆಲೆ ಇದೆ. ಫೆಬ್ರವರಿ 17 ರಂದು ಕೂಡ ಉತ್ತಮ ಗುಣಮಟ್ಟದ ಈರುಳ್ಳಿಗೆ ಉತ್ತಮ ಬೆಲೆ ಇತ್ತು. ವಿವಿಧ ರೀತಿಯ ಈರುಳ್ಳಿಗಳಿವೆ. ಕೆಟ್ಟ ಈರುಳ್ಳಿಗೆ ಕಡಿಮೆ ಬೆಲೆ" ಎಂದರು.

ಇದನ್ನೂ ಓದಿ: ತಪ್ಪಾದ ಔಷಧಿ ಸಿಂಪಡಣೆ: ಕಣ್ಣೆದುರೇ ಕಮರಿದ 4 ಎಕರೆ ದ್ರಾಕ್ಷಿ ಬೆಳೆ, ಆತ್ಮಹತ್ಯೆಗೆ ಶರಣಾದ ರೈತ

Last Updated : Feb 23, 2023, 3:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.