ETV Bharat / bharat

12 ವರ್ಷಗಳ ಹಿಂದೆ ಕಾಣೆಯಾಗಿದ್ದವ ಪತ್ತೆ: ಗಂಡ ಸತ್ತ ಎಂದು ಬೇರೆ ಮದುವೆಯಾದ ಹೆಂಡತಿ, ಮಗನ ನೋಡಲು ತಾಯಿ ಕಾತರ! - ಗಂಡ ಸತ್ತ ಎಂದು ಬೇರೆ ಮದುವೆಯಾದ ಹೆಂಡತಿ

ಸತ್ತನೆಂದು ಪರಿಗಣಿಸಿ ಅಂತಿಮ ವಿಧಿವಿಧಾನಗಳನ್ನು ನಡೆಸಿದ ಕುಟುಂಬ ಸದಸ್ಯರಿಗೆ ಈಗ ಅವನು ಜೀವಂತವಾಗಿದ್ದಾನೆ ಎಂಬ ಸುದ್ದಿ ತಿಳಿದು ಮೂಕ ವಿಸ್ಮಿತರಾಗಿದ್ದಾರೆ.

12 ವರ್ಷಗಳ ಹಿಂದೆ ಸತ್ತಿದ್ದಾನೆ ಎಂದು ನಂಬಲಾಗಿದ್ದ ಮಗ ಈಗ ಜೀವಂತ

author img

By

Published : Dec 16, 2021, 10:35 PM IST

ಬಕ್ಸರ್: 12 ವರ್ಷಗಳ ಹಿಂದೆ ಸತ್ತಿದ್ದಾನೆ ಎಂದು ನಂಬಲಾಗಿದ್ದ ಮಗ ಈಗ ಜೀವಂತವಾಗಿದ್ದಾನೆ. ಆತನನ್ನು ಸತ್ತನೆಂದು ಪರಿಗಣಿಸಿ ಅಂತಿಮ ವಿಧಿವಿಧಾನಗಳನ್ನು ನಡೆಸಿದ ಕುಟುಂಬ ಸದಸ್ಯರಿಗೆ ಈಗ ಅವನು ಜೀವಂತವಾಗಿದ್ದಾನೆ ಎಂಬ ಸುದ್ದಿ ತಿಳಿದು ಮೂಕ ವಿಸ್ಮಿತರಾಗಿದ್ದಾರೆ. ಆದರೆ, ಆತ ಬಾರ್ಡರ್​ ಪ್ರವೇಶಿಸಿದ್ದರಿಂದ ಪಾಕಿಸ್ತಾನದ ಜೈಲಿನಲ್ಲಿ ಇರಿಸಲಾಗಿದೆ.

ಯುವಕ ಮೃತಪಟ್ಟಿರುವ ವಿಷಯ ತಿಳಿದ ಆತನ ಪತ್ನಿ ಮತ್ತೆ ಮದುವೆಯಾಗಿ ಮಕ್ಕಳೊಂದಿಗೆ ತೆರಳಿದ್ದಾಳೆ. ಯುವಕ ಜೀವಂತವಾಗಿರುವ ಮತ್ತು ಪಾಕಿಸ್ತಾನದಲ್ಲಿ ಇರುವ ಸುದ್ದಿ ತಿಳಿದ ನಂತರ, ಆಕೆಯ ತಾಯಿ ಸಾಯುವ ಮೊದಲು ಅವನ ಮುಖವನ್ನು ಒಮ್ಮೆಯಾದರೂ ನೋಡಬೇಕು ಎಂದು ಹಾತೊರೆಯುತ್ತಿದ್ದಾಳೆ.

ಪತ್ತೆಯಾಗಿದ್ದು ಹೇಗೆ?

ಪಾಕಿಸ್ತಾನಿ ಜೈಲಿನಲ್ಲಿರುವ ವ್ಯಕ್ತಿಯನ್ನು ಬಕ್ಸರ್ ಜಿಲ್ಲೆಯ ಚೌಸಾ ನಗರ ಪಂಚಾಯತ್ ವ್ಯಾಪ್ತಿಯ ಖಿಲಾಫತ್‌ಪುರದ ಬಸ್ತಿ ನಿವಾಸಿ ಛವಿ ಮುಸಾಹರ್ ಎಂದು ಗುರುತಿಸಲಾಗಿದೆ. ಮುಫಾಸಿಲ್ ಪೊಲೀಸ್ ಠಾಣೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ವ್ಯಕ್ತಿಯ ಗುರುತಿನ ಪತ್ರವನ್ನು ತಲುಪಿಸಿದ್ದು, ಪೊಲೀಸರು ಬಸ್ತಿಗೆ ತಲುಪಿ ಛವಿಯ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದಾರೆ. ಹಾಗೆ ಆತನ ಚಿತ್ರವನ್ನು ಕುಟುಂಬ ಸದಸ್ಯರಿಗೆ ತೋರಿಸಿದಾಗ ತಮ್ಮ ಮಗ ಇವನೇ ಎಂದು ಪತ್ತೆ ಮಾಡಿದ್ದಾರೆ.

ಕುಟುಂಬ ಸದಸ್ಯರು ಹೇಳೋದೇನು?

ಈಟಿವಿ ಭಾರತ ಜೊತೆ ಮಾತನಾಡಿರುವ ಛವಿ ಮುಷಾರ್ ಅವರ ಕುಟುಂಬ ಸದಸ್ಯರು, 12 ವರ್ಷಗಳ ಹಿಂದೆ ನಾಪತ್ತೆಯಾಗುವ ಮೊದಲು, ಆತ ತಮ್ಮ ತಾಯಿ, ಸಹೋದರ, ಹೆಂಡತಿ ಮತ್ತು ಅವರ ಮಗುವಿನೊಂದಿಗೆ ಇಲ್ಲಿ ವಾಸಿಸುತ್ತಿದ್ದರು. ಆದರೆ, ಒಂದು ದಿನ ಇದ್ದಕ್ಕಿದ್ದಂತೆ ಬಸ್ತಿಯಿಂದ ನಾಪತ್ತೆಯಾಗಿದ್ದ. ಆರಂಭದಲ್ಲಿ, ಅವನು ಮತ್ತೆ ಬರುತ್ತಾನೆ ಎಂದು ನಾವು ಭಾವಿಸಿದ್ದೆವು. ಏಕೆಂದರೆ ಅವನು ಆಗಾಗ್ಗೆ ಹೀಗೆ ಹೋಗಿ ಬರುತ್ತಿದ್ದ ಎಂದಿದ್ದಾರೆ.

ಆದರೆ, ಈ ಬಾರಿ ಅವರು ಬಹಳ ಸಮಯದವರೆಗೆ ಹಿಂತಿರುಗಲಿಲ್ಲ. ಪರಿಣಾಮ ನಾವು ಆತನನ್ನು ಎಲ್ಲ ಕಡೆ ಹುಡುಕಿದೆವು. ಆದರೆ, ಯಾವುದೇ ಮಾಹಿತಿ ಸಿಗದ ಕಾರಣ ಸತ್ತಿದ್ದಾನೆ ಎಂದು ಪರಿಗಣಿಸಿ ಅಂತ್ಯಕ್ರಿಯೆಯನ್ನೂ ಮಾಡಿದೆವು. ಎರಡು ವರ್ಷಗಳ ನಂತರ ಅವನ ಹೆಂಡತಿಯೂ ಮತ್ತೆ ಮದುವೆಯಾಗಿ ಹೋದಳು ಎಂದು ವಿವರಿಸಿದರು.

ಮುಫಾಸಿಲ್ ಎಸ್‌ಎಚ್‌ಒ ಅಮಿತ್ ಕುಮಾರ್ ಈ ಬಗ್ಗೆ ಮಾತನಾಡಿ, ವ್ಯಕ್ತಿಯ ಗುರುತನ್ನು ಪತ್ತೆ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಪತ್ರ ಬಂದಿದೆ. ನಾವು ಅದರಂತೆ ಬಸ್ತಿ ತಲುಪಿ ಕುಟುಂಬ ಸದಸ್ಯರನ್ನು ಸಂಪರ್ಕಿಸಿದ್ದೇವೆ. ಚಿತ್ರವನ್ನು ನೋಡಿದ ನಂತರ ಅವರು ಗುರುತಿಸಿದ್ದಾರೆ. ಈ ಬಗ್ಗೆ ವರದಿಯನ್ನು ಸಚಿವಾಲಯಕ್ಕೆ ಕಳುಹಿಸಲಾಗಿದೆ ಮತ್ತು ಉಳಿದ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದುಕೊಳ್ಳಬೇಕು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.