ETV Bharat / bharat

ಕೋವಿಡ್​​ ಭೀತಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ಇಬ್ಬರು ಸಾವು! - ಮಧುರೈನಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಕೊರೊನಾ ಭೀತಿಯಿಂದ ಮಧುರೈನಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Family commits suicide due to covid fear in madurai
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ಇಬ್ಬರು ಸಾವು
author img

By

Published : Jan 10, 2022, 12:18 PM IST

ಮಧುರೈ: ಕೊರೊನಾ ಭೀತಿ ಹಿನ್ನೆಲೆ ಮಧುರೈನಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ

ಜೋತಿಕಾ (23) ಹಾಗೂ ರಿತೀಶ್ (3) ಮೃತರು. ಮೂಲಗಳ ಪ್ರಕಾರ ನಾಗರಾಜ್ ಎಂಬುವವರು ಮಧುರೈ ಪೂರ್ವದ ಸಕ್ಕಿಮಂಗಲಂನ ಕಲ್ಮೇಡು ಎಂಜಿಆರ್ ನಗರದಲ್ಲಿ ಪತ್ನಿ ಲಕ್ಷ್ಮಿ (41), ಮಗ ಸಿಬಿರಾಜ್ (13), ವಿವಾಹಿತ ಪುತ್ರಿ ಜೋತಿಕಾ ಮತ್ತು ಆಕೆಯ ಮಗ ರಿತೀಶ್ ನೊಂದಿಗೆ ವಾಸವಿದ್ದರು.

ಮಧುರೈನಲ್ಲಿ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಆದರೆ, 2021ರ ಡಿಸೆಂಬರ್‌ನಲ್ಲಿ ಯಾವುದೋ ಕಾಯಿಲೆಯಿಂದ ನಾಗರಾಜ್ ಸಾವನ್ನಪ್ಪಿದ್ದರು. ಅವರ ಸಂಪಾದನೆಯ ಮೇಲೆ ಅವಲಂಬಿತವಾಗಿದ್ದ ಕುಟುಂಬ ಅವರ ಸಾವಿನಿಂದ ಆಘಾತಕ್ಕೊಳಗಾಗಿದ್ದರು. ಜತೆಗೆ ವಿವಾಹಿತರಾಗಿದ್ದ ಜೋತಿಕಾ ಪತಿಯಿಂದ ಬೇರ್ಪಟ್ಟು ಪೋಷಕರೊಂದಿಗೆ ವಾಸವಿದ್ದರು.

ಈ ನಡುವೆ ಜೋತಿಕಾ ಅವರಿಗೆ ಜ.08 ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಕುಟುಂಬವು ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿ ವಿಷ ಸೇವಿಸಿದ್ದಾರೆ ಎನ್ನಲಾಗ್ತಿದೆ.

ಈ ವೇಳೆ, ಜೋತಿಕಾ ಹಾಗೂ ರಿತೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಮಧುರೈ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಚಾರ ತಿಳಿದ ಸಿಲೈಮಾನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪೊಲೀಸರು ಮಾಸ್ಕ್ ಹಾಕೋ ಎಂದಿದ್ದಕ್ಕೆ​ ಗುಂಡು ಹಾರಿಸಿದ ಭೂಪ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.