ಹೈದರಾಬಾದ್ : ಭಾರತದ ಸ್ಥಳೀಯ ಕೋವಿಡ್ -19 ಲಸಿಕೆ 'ಕೋವ್ಯಾಕ್ಸಿನ್' (COVAXINTM) ಅನ್ನು, ಭಾರತ್ ಬಯೋಟೆಕ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್ಸ್ಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್‌ನ ಬಿಎಸ್‌ಎಲ್ -3 (ಬಯೋ-ಸೇಫ್ಟಿ ಲೆವೆಲ್- 3) ಉನ್ನತ ಮಟ್ಟದ ಕಂಟೈನ್ಮೆಂಟ್ನಲ್ಲಿ ತಯಾರಿಸಲಾಗುತ್ತಿದೆ. ಕೋವ್ಯಾಕ್ಸಿನ್ನ ಹಂತ 1 ಮತ್ತು 2 ರ ಕ್ಲಿನಿಕಲ್ ಟ್ರಯಲ್ ಮಧ್ಯಂತರ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ದೇಶಾದ್ಯಂತ 25ಕ್ಕೂ ಹೆಚ್ಚು ಕೇಂದ್ರಗಳಲ್ಲಿ 26 ಸಾವಿರ ಸ್ವಯಂ ಸೇವಕರ ಮೇಲೆ 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತ್ ಬಯೋಟೆಕ್, ಡಿಸಿಜಿಐ ಅನುಮೋದನೆ ಪಡೆದುಕೊಂಡಿದೆ.
ಇದನ್ನೂ ಓದಿ: ಕೋವಾಕ್ಸಿನ್ನ ಮೂರನೇ ಹಂತದ ಮಾನವ ಪ್ರಯೋಗ ಆರಂಭ
ನ್ಯಾಷನಲ್ ಇನ್ಸ್ಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಲಿಮಿಟೆಡ್ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸಿದೆ. SARS-CoV-2 ಸ್ಟ್ರೈನ್ ಅನ್ನು ಪುಣೆಯ ಎನ್ಐವಿಯಲ್ಲಿ ಪ್ರತ್ಯೇಕಿಸಿ ಭಾರತ್ ಬಯೋಟೆಕ್ಗೆ ವರ್ಗಾಯಿಸಲಾಗಿದೆ. ಹೈದರಾಬಾದ್‌ನ ಜೀನೋಮ್ ವ್ಯಾಲಿಯಲ್ಲಿರುವ ಭಾರತ್ ಬಯೋಟೆಕ್‌ನ ಬಿಎಸ್‌ಎಲ್ -3 (ಬಯೋ-ಸೇಫ್ಟಿ ಲೆವೆಲ್ 3) ಹೈ ಕಂಟೈನ್‌ಮೆಂಟ್ ಸೌಲಭ್ಯದಲ್ಲಿ ಲಸಿಕೆ ಅಭಿವೃದ್ಧಿಪಡಿಸಿ, ತಯಾರಿಸಲಾಗುತ್ತಿದೆ. ಭಾರತ್ ಬಯೋಟೆಕ್, ಬಿಎಸ್ಎಲ್ 3 (ಬಯೋ-ಸೇಫ್ಟಿ ಲೆವೆಲ್- 3) ಉತ್ಪಾದನಾ ಸೌಲಭ್ಯವನ್ನು ಹೊಂದಿರುವ ವಿಶ್ವದ ಏಕೈಕ ಲಸಿಕೆ ಕಂಪನಿಯಾಗಿದೆ.