ETV Bharat / bharat

ತೂತುಕುಡಿ ಗುಂಡಿನ ದಾಳಿ ಕುರಿತ ವರದಿ ಲೀಕ್​: ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಪೊಲೀಸರು - Senior Journalist R Ilangovan

ನಾಗರಿಕರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿ ಸಂಬಂಧಿಸಿದ ಆಯೋಗದ ವರದಿಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸುವ ಮುನ್ನವೇ ಪ್ರಕಟಿಸಿದ್ದಕ್ಕಾಗಿ ಪತ್ರಕರ್ತರೊಬ್ಬರ ಮೇಲೆ ಅಧಿಕೃತ ರಹಸ್ಯ ಕಾಯಿದೆಯಡಿ ಪ್ರಕರಣ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

Etv Bharatexpose-of-judicial-panel-report-on-police-firing-on-anti-sterlite-protestors-cops-invoke-osa-against-scribe
ತೂತುಕುಡಿಯಲ್ಲಿ ಪೊಲೀಸರು ನಡೆಸಿದ್ದ ಗುಂಡಿನ ದಾಳಿ ಕುರಿತ ಆಯೋಗದ ವರದಿ ಬಹಿರಂಗ: ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಪೊಲೀಸರು
author img

By ETV Bharat Karnataka Team

Published : Nov 17, 2023, 11:01 PM IST

ಚೆನ್ನೈ(ತಮಿಳುನಾಡು): ತನಿಖಾ ಆಯೋಗದ ವರದಿಯ ಪ್ರಮುಖ ಭಾಗಗಳನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸುವ ಮುನ್ನವೇ ಪ್ರಕಟಿಸಿದ್ದಕ್ಕಾಗಿ ಆಂಗ್ಲ ನಿಯತಕಾಲಿಕದ ಹಿರಿಯ ಪತ್ರಕರ್ತ ಆರ್ ಇಳಂಗೋವನ್ ವಿರುದ್ಧ 1923ರ ಅಧಿಕೃತ ರಹಸ್ಯ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ಸಮಿತಿಯ ವರದಿಯ ಬಹಿರಂಗಗೊಂಡಿರುವುದರಿಂದ ಡಿಎಂಕೆ ಸರ್ಕಾರವು ಅದನ್ನು ಸದನದಲ್ಲಿ ಮಂಡಿಸಲು ಮತ್ತು ಅದನ್ನು ಸಾರ್ವಜನಿಕಗೊಳಿಸಲು ಏಕೆ ವಿಳಂಬ ಮಾಡುತ್ತಿದೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಮೇಲ್ವಿಚಾರಣೆಯಲ್ಲಿ ಪೊಲೀಸ್ ಗುಂಡಿನ ದಾಳಿ ನಡೆದಿದ್ದು, ಪೊಲೀಸ್ ಗುಂಡಿನ ದಾಳಿಯ ನಂತರ ಹಿಂದಿನ ಸರ್ಕಾರವು ಸಮಿತಿಯನ್ನು ರಚಿಸಿತ್ತು. ಸ್ಟೆರ್ಲೈಟ್​ನ ತಾಮ್ರದ ಸ್ಮೆಲ್ಟರ್ ಸ್ಥಾವರವನ್ನು ಸಹ ಮುಚ್ಚಲಾಗಿತ್ತು.

ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಗೆಲುವಿನೊಂದಿಗೆ ಮುಖ್ಯಮಂತ್ರಿಯಾಗಿ ಎಂ ಕೆ ಸ್ಟಾಲಿನ್ ಅಧಿಕಾರ ವಹಿಸಿಕೊಂಡ ನಂತರ ಸಮಿತಿಯು ಮೇ 15, 2021 ರಂದು ತನ್ನ ಮಧ್ಯಂತರ ವರದಿ ಸಲ್ಲಿಸಿತ್ತು. ಐದು ಸಂಪುಟಗಳು ಮತ್ತು 3000 ಪುಟಗಳಲ್ಲಿರುವ ಅಂತಿಮ ವರದಿಯನ್ನು ಮೇ 18, 2022 ರಂದು ಸಲ್ಲಿಸಲಾಗಿತ್ತು. ವರದಿಯ ವಿಷಯಗಳನ್ನು ನಿಯತಕಾಲಿಕವೊಂದು ಪ್ರಕಟಿಸಿದ ನಂತರ, ಅಕ್ಟೋಬರ್ 18, 2023 ರಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿನ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ಆರುಮುಗಸ್ವಾಮಿ ತನಿಖಾ ಆಯೋಗದೊಂದಿದ ತನಿಖೆಗೆ ಆಗಬೇಕು ಎಂದು ಎಐಎಡಿಎಂಕೆ ಆಗ್ರಹಿಸಿದ್ದು, ಇದಕ್ಕೆ ಡಿಎಂಕೆ ಅಸಮಾಧಾನ ವ್ಯಕ್ತಪಡಿಸಿದೆ.

ಅರುಣಾ ಜಗದೀಸನ್ ಸಮಿತಿಯು ಒಟ್ಟು 17 ಪೊಲೀಸ್ ಅಧಿಕಾರಿಗಳು ಮತ್ತು ಅಂದಿನ ಜಿಲ್ಲಾಧಿಕಾರಿ ಎನ್ ವೆಂಕಟೇಶ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರೂ, ಸರ್ಕಾರ ಮಾತ್ರ ಡಿವೈಎಸ್​ಪಿ ಸೇರಿದಂತೆ ನಾಲ್ವರು ಪೊಲೀಸರನ್ನು ಮಾತ್ರ ಅಮಾನತುಗೊಳಿಸಿತ್ತು. 17 ಉನ್ನತ ಪೊಲೀಸ್ ಅಧಿಕಾರಿಗಳಲ್ಲಿ ಆಗಿನ ಐಜಿ ಶೈಲೇಶ್ ಕುಮಾರ್ ಯಾದವ್, ಅಂದಿನ ಡಿಐಜಿ ಕಪಿಲ್ ಕುಮಾರ್ ಸಿ ಸರತ್ಕರ್, ತೂತುಕುಡಿ ಎಸ್​ಪಿ ಮಹೇಂದ್ರನ್ ಮತ್ತು ತಿರುನಲ್ವೇಲಿ ಎಸ್​ಪಿ ಅರುಣ್ ಶಕ್ತಿ ಕುಮಾರ್ ಸೇರಿದ್ದಾರೆ.

ಎಐಎಡಿಎಂಕೆಗೆ ನಿಷ್ಠರಾಗಿರುವ ವಕೀಲ ವಿ.ಮಣಿಕಂದನ್ ಅವರು ಹಿರಿಯ ಪತ್ರಕರ್ತನ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಏಪ್ರಿಲ್ 18ರಂದು ಖುದ್ದಾಗಿ ಹಾಜರಾಗುವಂತೆ ನಿಯತಕಾಲಿಕದ ಸಂಪಾದಕರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು.

"ಪೊಲೀಸ್ ಇನ್ಸ್‌ಪೆಕ್ಟರ್ ನನ್ನನ್ನು ಪ್ರಶ್ನಿಸಲು ನಿಯತಕಾಲಿಕದ ಕಚೇರಿಗೆ ಬಂದರು. ಆದರೆ, ಆ ಸಮಯದಲ್ಲಿ ನಾನು ಅಲ್ಲಿ ಇಲ್ಲದ ಕಾರಣ, ಅವರನ್ನು ನಮ್ಮ ಪ್ರಕಾಶನದ ಕಾನೂನು ವಿಭಾಗಕ್ಕೆ ಕರೆದೊಯ್ಯಲಾಯಿತು. ನಂತರ, ಪೊಲೀಸರಿಗೆ ವಿವರಣೆಯನ್ನು ಕಳುಹಿಸಲಾಯಿತು. ಆದರೆ, ಇನ್ನೂ ಪ್ರಕರಣವು ಮುಂದುವರೆದಿದೆ" ಎಂದು ಈಟಿವಿ ಭಾರತಕ್ಕೆ ಇಳಂಗೋವನ್ ತಿಳಿಸಿದ್ದಾರೆ.

ಇದನ್ನೂ ಓದಿ: ಚಿತ್ರನಟಿ ಜಯಪ್ರದಾ ವಿರುದ್ಧ ನಾಲ್ಕನೇ ಬಾರಿಗೆ ಜಾಮೀನು ರಹಿತ ವಾರಂಟ್

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.