ETV Bharat / bharat

ಮೊಹಾಲಿಯ ಗುಪ್ತಚರ ಇಲಾಖೆ ಕಚೇರಿ ಮೇಲೆ ರಾಕೆಟ್​ ಲಾಂಚರ್​ನಿಂದ ದಾಳಿ ಶಂಕೆ; ಗಾಜುಗಳು ಪುಡಿಪುಡಿ

ಪಂಜಾಬ್​ನ ಮೊಹಾಲಿಯಲ್ಲಿರುವ ರಾಜ್ಯ ಗುಪ್ತಚರ ಇಲಾಖೆ ಕಚೇರಿ ಮೇಲೆ ರಾಕೆಟ್​ ಲಾಂಚರ್‌ನಿಂದ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದ್ದು, ಕಟ್ಟಡದ ಗಾಜುಗಳು ಹಾನಿಗೊಳಗಾಗಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Explosion in Intelligence office in Mohali, Rocket attack on Intelligence office in Mohali, Punjab rocket launch news, Mohali crime news, ಮೊಹಾಲಿಯಲ್ಲಿ ಗುಪ್ತಚರ ಕಚೇರಿಯಲ್ಲಿ ಸ್ಫೋಟ, ಮೊಹಾಲಿಯಲ್ಲಿ ಗುಪ್ತಚರ ಕಚೇರಿ ಮೇಲೆ ರಾಕೆಟ್ ದಾಳಿ, ಪಂಜಾಬ್ ರಾಕೆಟ್ ದಾಳಿ ಸುದ್ದಿ, ಮೊಹಾಲಿ ಅಪರಾಧ ಸುದ್ದಿ,
ಗುಪ್ತಚರ ಇಲಾಖೆಯ ಕಚೇರಿ ಮೇಲೆ ರಾಕೆಟ್​ ಲಾಂಚರ್​ನಿಂದ ದಾಳಿ
author img

By

Published : May 10, 2022, 8:14 AM IST

ಮೊಹಾಲಿ(ಪಂಜಾಬ್): ಸೋಮವಾರ ರಾತ್ರಿ ನಗರದಲ್ಲಿರುವ ರಾಜ್ಯ ಗುಪ್ತಚರ ವಿಭಾಗದ ಕೇಂದ್ರ ಕಚೇರಿಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಪರಾರಿಯಾಗಿದ್ದಾರೆ. ಇದರಿಂದಾಗಿ ಕಟ್ಟಡದ ಗಾಜುಗಳು ಒಡೆದಿವೆ. ಯಾವುದೇ ಪ್ರಾಣ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಮೊಹಾಲಿಯ ಸೆಕ್ಟರ್ 77 ರಲ್ಲಿರುವ ಪಂಜಾಬ್ ಪೊಲೀಸ್ ಇಂಟೆಲಿಜೆನ್ಸ್ ಕಟ್ಟಡದಲ್ಲಿ ರಾತ್ರಿ 7:45ಕ್ಕೆ ಘಟನೆ ನಡೆದಿದೆ. ಮೊದಲಿಗೆ ಇದೊಂದು ಭಯೋತ್ಪಾದಕ ದಾಳಿ ಎಂದೇ ಹೇಳಲಾಗಿತ್ತು. ಆದ್ರೆ ಮೊಹಾಲಿ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಭಯೋತ್ಪಾದಕರ ಕೃತ್ಯ ಅಲ್ಲ ಎಂದು ಸ್ಪಷ್ಟಪಡಿಸಿದರು. ಸ್ಫೋಟದ ನಂತರ ವಿಧಿ ವಿಜ್ಞಾನ ತಜ್ಞರ ತಂಡ ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿತು. ಕಟ್ಟಡದ ಸುತ್ತಮುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

Explosion in Intelligence office in Mohali, Rocket attack on Intelligence office in Mohali, Punjab rocket launch news, Mohali crime news, ಮೊಹಾಲಿಯಲ್ಲಿ ಗುಪ್ತಚರ ಕಚೇರಿಯಲ್ಲಿ ಸ್ಫೋಟ, ಮೊಹಾಲಿಯಲ್ಲಿ ಗುಪ್ತಚರ ಕಚೇರಿ ಮೇಲೆ ರಾಕೆಟ್ ದಾಳಿ, ಪಂಜಾಬ್ ರಾಕೆಟ್ ದಾಳಿ ಸುದ್ದಿ, ಮೊಹಾಲಿ ಅಪರಾಧ ಸುದ್ದಿ,

ಪಂಜಾಬ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ಘಟನೆಗಳು ನಡೆಯುತ್ತಿವೆ. ಇತ್ತೀಚೆಗೆ ಕರ್ನಾಲ್ ಬಳಿಕ ತರ್ನ್ ತರನ್ ಜಿಲ್ಲೆಯಲ್ಲಿ ಲೋಹದ ಕಪ್ಪು ಪೆಟ್ಟಿಗೆಯಲ್ಲಿ ಆರ್​​ಡಿಎಕ್ಸ್​​ ಪ್ಯಾಕ್ ದೊರೆತಿತ್ತು. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು 2.5 ಕೆಜಿ ಆರ್‌ಡಿಎಕ್ಸ್‌ ವಶಪಡಿಕೊಂಡಿದ್ದರು. ಇದಾದ ಬಳಿಕ ನಿನ್ನೆ ರಾತ್ರಿ ದಾಳಿ ನಡೆದಿದೆ.

ಗುಪ್ತಚರ ಕಚೇರಿಯ ಮೂರನೇ ಮಹಡಿಗೆ ರಾಕೆಟ್ ಚಾಲಿತ ಗ್ರೆನೇಡ್ ಎಸೆಯಲಾಗಿದೆ ಎನ್ನಲಾಗ್ತಿದೆ. ಹೀಗಾಗಿ, ಸ್ಫೋಟ ಸಂಭವಿಸಿದ್ದು, ರಭಸಕ್ಕೆ ಕಟ್ಟಡದ ಕಿಟಕಿಗಳು ಒಡೆದಿವೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಹಿರಿಯ ಪೊಲೀಸ್​ ಅಧಿಕಾರಿ ನಿರಾಕರಿಸಿದ್ದಾರೆ. ಪಂಜಾಬ್ ಸಿಎಂ ಈಗಾಗಲೇ ಡಿಜಿಪಿಯಿಂದ ವಿಸ್ತೃತ ವರದಿ ಕೇಳಿದ್ದಾರೆ.

ಇದನ್ನೂ ಓದಿ: ಪಂಜಾಬ್​​ನಲ್ಲಿ ಉಗ್ರರ ಭಾರಿ ಸಂಚು ವಿಫಲ: ಆರ್​​ಡಿಎಕ್ಸ್​​ ಬಾಕ್ಸ್​ ಪೊಲೀಸರ ವಶಕ್ಕೆ

ರಾಜಕೀಯ ಪ್ರತಿಕ್ರಿಯೆಗಳು: ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪ್ರತಿಕ್ರಿಯಿಸಿ, ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಮನವಿ ಮಾಡುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಟ್ವೀಟ್ ಮೂಲಕ ಟೀಕಿಸಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಮುಖ್ಯಮಂತ್ರಿಗಳು ತಕ್ಷಣ ಗಮನಹರಿಸಬೇಕು ಎಂದು ಪಂಜಾಬ್ ಬಿಜೆಪಿ ಅಧ್ಯಕ್ಷ ಒತ್ತಾಯಿಸಿದ್ದಾರೆ. ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್, ಘಟನೆಯು ಕಾನೂನು ಸುವ್ಯವಸ್ಥೆಯ ವೈಫಲ್ಯವನ್ನು ತೆರೆದಿಟ್ಟಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.