ETV Bharat / bharat

ಸಾಬೂನು ಗೋದಾಮುವಿನಲ್ಲಿ ಸ್ಫೋಟ, ನೆಲಸಮ.. ನಾಲ್ವರು ಸಾವು, ನಾಲ್ವರಿಗೆ ಗಂಭೀರ ಗಾಯ

ಉತ್ತರಪ್ರದೇಶದ ಮೀರತ್‌ನ ಎರಡು ಅಂತಸ್ತಿನ ಗೋದಾಮಿನಲ್ಲಿ ಮಂಗಳವಾರ ಬೆಳಗ್ಗೆ ಹಠಾತ್ ಸ್ಫೋಟ ಸಂಭವಿಸಿದೆ.

Explosion in building in Meerut  Four killed in Explosion in building  Uttara Pradesh crime news  ಸಾಬೂನು ಗೋದಾಮುವಿನಲ್ಲಿ ಸ್ಫೋಟ  ನಾಲ್ವರು ಸಾವು  ಎರಡು ಅಂತಸ್ತಿನ ಗೋದಾಮು  ಮಂಗಳವಾರ ಬೆಳಗ್ಗೆ ಹಠಾತ್ ಸ್ಫೋಟ ಸಂಭವಿಸಿ  ಸ್ಫೋಟ ಸಂಭವಿಸಿ ಗೋದಾಮುವೊಂದು ಸಂಪೂರ್ಣ ನೆಲಸಮ  ಲೋಹಿಯಾನಗರ ಪೊಲೀಸ್ ಠಾಣೆ ವ್ಯಾಪ್ತಿ  ದುರಂತದಲ್ಲಿ ನಾಲ್ವರು ಸ್ಥಳದಲ್ಲೇ ಮೃತ
ಸಾಬೂನು ಗೋದಾಮುವಿನಲ್ಲಿ ಸ್ಫೋಟ
author img

By PTI

Published : Oct 17, 2023, 1:06 PM IST

ಮೀರತ್(ಉತ್ತರಪ್ರದೇಶ): ಸ್ಫೋಟ ಸಂಭವಿಸಿ ಗೋದಾಮುವೊಂದು ಸಂಪೂರ್ಣ ನೆಲಸಮವಾಗಿರುವ ಘಟನೆ ಜಿಲ್ಲೆಯ ಲೋಹಿಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗಾಯಾಳುಗಳನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಗೋದಾಮು ನೆಲಸಮ: ಮಂಗಳವಾರ ಬೆಳಗ್ಗೆ ಇಲ್ಲಿ ಏಕಾಏಕಿ ಭಾರಿ ಸ್ಫೋಟ ಸಂಭವಿಸಿ ಇಡೀ ಗೋದಾಮು ಧ್ವಂಸಗೊಂಡಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಸಮೀಪದ ಹಲವು ಮನೆಗಳು ಸಹ ತಲ್ಲಣಿಸಿವೆ.​ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಫೋಟದ ಬಗ್ಗೆ ಮಾಹಿತಿ ಪಡೆದ ಎಸ್‌ಎಸ್‌ಪಿ ಮತ್ತು ಡಿಎಂ ಕೂಡ ಭಾರಿ ಪೊಲೀಸ್ ಪಡೆಯೊಂದಿಗೆ ಸ್ಥಳಕ್ಕೆ ತಲುಪಿದ್ದರು. ಪಟಾಕಿ ಸಿಡಿಸಿದ್ದರಿಂದ ಗೋದಾಮುವಿನಲ್ಲಿ ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಪೊಲೀಸರು ಮಾಧ್ಯಮದವರಿಗೂ ದೂರ ಇರುವಂತೆ ಸೂಚನೆ ನೀಡಿದ್ದಾರೆ.

ಸ್ಫೋಟದ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದು ಹೀಗೆ: ಈ ಬಗ್ಗೆ ಜಿಲ್ಲಾಧಿಕಾರಿ ದೀಪಕ್ ಮೀನಾ ಮಾತನಾಡಿ, ಲೋಹಿಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಬೂನು ಮತ್ತು ಮಾರ್ಜಕದ ಗೋದಾಮು ಇದೆ. ಗೋದಾಮಿನಲ್ಲಿ ಕೆಲವು ರಾಸಾಯನಿಕ ವಸ್ತುಗಳಿವೆ. ಹೀಗಾಗಿ ಗೋದಾಮಿನಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಘಜಿಯಾಬಾದ್‌ನಿಂದ ಎನ್‌ಡಿಆರ್‌ಎಫ್ ತಂಡಗಳನ್ನು ಸ್ಥಳಕ್ಕೆ ಕರೆಸಲಾಗಿದೆ. ಗೋದಾಮಿ ಕುಸಿತ ಹಿನ್ನೆಲೆ ಇನ್ನೂ ಕೆಲವರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ. ಈ ಸ್ಫೋಟದಿಂದಾಗಿ ಸಮೀಪದ ಮನೆಗಳಿಗೂ ಹಾನಿಯಾಗಿದೆ. ಗೋದಾಮಿನ ಪಕ್ಕದ ಶಾಲೆಯ ಗೋಡೆಗಳಿಗೂ ಸಾಕಷ್ಟು ನಷ್ಟ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದರು.

ಪಟಾಕಿ ತಯಾರಿಕೆಗೆ ಯಾವುದೇ ಪುರಾವೆ ಇಲ್ಲ: ಈ ಸ್ಫೋಟದಿಂದಾಗಿ ಅಲ್ಲಿ ಹಾದು ಹೋಗಿರುವ 33 ಕೆವಿ ಮಾರ್ಗದ ಪಿಲ್ಲರ್‌ಗಳೂ ಮುರಿದು ಬಿದ್ದಿವೆ. ಇದಲ್ಲದೇ ಗೋದಾಮು ಸಂಪೂರ್ಣ ನೆಲಸಮವಾಗಿದೆ. ಗೋದಾಮಿನ ಸುತ್ತಲೂ ಸೋಪಿನ ತುಂಡುಗಳು, ಸಾಬೂನು ತಯಾರಿಸುವ ಯಂತ್ರವೂ ಕಂಡು ಬಂದಿದೆ. ಇಲ್ಲಿ ಸಾಬೂನು ತಯಾರಿಕೆ ಮತ್ತು ಪ್ಯಾಕೇಜಿಂಗ್ ಮಾತ್ರ ಮಾಡಲಾಗುತ್ತಿತ್ತು. ಇಲ್ಲಿ ಪಟಾಕಿ ತಯಾರಿಸಿದ್ದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮೃತರಿಗೆ ಸಂತಾಪ ಸೂಚಿಸಿದ ಸಿಎಂ ಯೋಗಿ: ಮೀರತ್ ಅಪಘಾತದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಗಮನಕ್ಕೆ ಬಂದಿದೆ. ಮೃತರ ಕುಟುಂಬಗಳಿಗೆ ಸಿಎಂ ಸಾಂತ್ವನ ಹೇಳಿದ್ದಾರೆ. ಕೂಡಲೇ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಅಲ್ಲದೆ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.

ಓದಿ: ಪ್ರಿಯಕರನೊಂದಿಗೆ ಸೇರಿ ಅತ್ತೆಯ ಹತ್ಯೆ, ಮೊಬೈಲ್​ ಚಾಟಿಂಗ್​ನಿಂದ ಸಂಚು ಬಯಲು: ಸೊಸೆ ಸಹಿತ ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.