ETV Bharat / bharat

ವಯನಾಡ್​ಗೆ ಉಪಚುನಾವಣೆ, ರಾಹುಲ್​ ದೆಹಲಿ ಬಂಗಲೆ ಖಾಲಿ?: ಕೋರ್ಟ್​ ಆದೇಶ - ಅನರ್ಹತೆ ಪರಿಣಾಮಗಳೇನು? - ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬಗ್ಗೆ ಕೋರ್ಟ್​ ಆದೇಶ ಮತ್ತು ಲೋಕಸಭೆಯಿಂದ ಅನರ್ಹತೆ ಪರಿಣಾಮಗಳೇನು ಎಂಬ ಕುರಿತ ವಿವರವಾದ ಮಾಹಿತಿ ಇಲ್ಲದೆ...

explained-why-rahul-gandhi-stands-disqualified-and-whats-the-way-forward
ವಯನಾಡ್​ಗೆ ಉಪಚುನಾವಣೆ, ರಾಹುಲ್​ ದೆಹಲಿ ಬಂಗಲೆ ಖಾಲಿ?: ಕೋರ್ಟ್​ ಆದೇಶ - ಅನರ್ಹತೆ ಪರಿಣಾಮಗಳೇನು?
author img

By

Published : Mar 24, 2023, 8:55 PM IST

ನವದೆಹಲಿ: ಮೋದಿ ಉಪನಾಮದ ಬಗ್ಗೆ ವಿವಾದಿತ ಹೇಳಿಕೆ ಕುರಿತ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಲೋಕಸಭೆಯಿಂದ ಅನರ್ಹಗೊಂಡ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ''ನಾನು ಭಾರತದ ಧ್ವನಿಗಾಗಿ ಹೋರಾಡುತ್ತಿದ್ದೇನೆ. ಯಾವುದೇ ಬೆಲೆ ತೆರಲು ಸಿದ್ಧನಾಗಿದ್ದೇನೆ'' ಎಂದು ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದಾರೆ.

2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್​ ಗಾಂಧಿ ಗಾಂಧಿ ಅವರನ್ನು ಸೂರತ್‌ನ ನ್ಯಾಯಾಲಯವು ಗುರುವಾರ ದೋಷಿ ಎಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಈ ತೀರ್ಪು ಬೆನ್ನಲ್ಲೇ ಶುಕ್ರವಾರ ಲೋಕಸಭೆಯ ಕಾರ್ಯದರ್ಶಿ, ಕೇರಳದ ವಯನಾಡ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ರಾಹುಲ್​ ಗಾಂಧಿ ಅವರನ್ನು ಅನರ್ಹಗೊಳಿಸುವ ಅಧಿಸೂಚನೆ ಹೊರಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸಂಸದ ಸ್ಥಾನದಿಂದ ಅನರ್ಹ!

ಕೋರ್ಟ್​ ಆದೇಶ - ಅನರ್ಹತೆ ಪರಿಣಾಮಗಳು.... ಕೆಳ ಹಂತದ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಹುಲ್​ ಗಾಂಧಿ ಉನ್ನತ ನ್ಯಾಯಾಲಯದ ಮೊರೆ ಹೋದರೆ, ಇಲ್ಲಿ ನ್ಯಾಯಾಲಯವು ಅವರ ದೋಷಾರೋಪಣೆಯನ್ನು ತಡೆ ಹಿಡಿದರೆ ರಾಹುಲ್​ ಅವರಿಗೆ ನೆಮ್ಮದಿ ಸಿಗಲಿದೆ. ಇಲ್ಲವಾದಲ್ಲಿ ನ್ಯಾಯಾಲಯದ ಆದೇಶದ ಕಾರಣ ಒಟ್ಟು ಎಂಟು ವರ್ಷಗಳವರೆಗೆ ರಾಹುಲ್​ ಗಾಂಧಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ಎರಡು ವರ್ಷಗಳ ಜೈಲು ಶಿಕ್ಷೆಯ ಅವಧಿ ಮತ್ತು ಜೈಲಿನಿಂದ ಬಿಡುಗಡೆಯಾದ ದಿನಾಂಕದಿಂದ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸಲು ಅರ್ಹವಾಗಲ್ಲ.

ವಯನಾಡ್​ಗೆ ಉಪಚುನಾವಣೆ?: ಜೊತೆಗೆ ಇದೀಗ ಅನರ್ಹ ಆದೇಶದಿಂದಾಗಿ ದೆಹಲಿಯಲ್ಲಿರುವ ಅಧಿಕೃತ ಬಂಗಲೆಯನ್ನು ಒಂದು ತಿಂಗಳೊಳಗೆ ರಾಹುಲ್​ ಗಾಂಧಿ ಖಾಲಿ ಮಾಡಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ಸದ್ಯಕ್ಕೆ ರಾಹುಲ್ ಅನರ್ಹತೆಯಿಂದ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವು ತೆರವಾಗಲಿದೆ. ಪ್ರಸ್ತುತ ಲೋಕಸಭೆಯ ಅವಧಿಯು 2024ರ ಜೂನ್‌ನಲ್ಲಿ ಕೊನೆಗೊಳ್ಳುತ್ತದೆ.

ಚುನಾವಣಾ ಆಯೋಗವು 2024ರಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ಇದೆ. ಆದ್ದರಿಂದ ಆ ಸ್ಥಾನವನ್ನು ತುಂಬಲು ''ತಾಂತ್ರಿಕ''ವಾಗಿ ಉಪಚುನಾವಣೆ ನಡೆಸಬಹುದಾಗಿದೆ. ಇದೇ ವೇಳೆ ರಾಹುಲ್​ ಗಾಂಧಿ ತಮ್ಮ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯವು 30 ದಿನಗಳ ಕಾಲವಕಾಶ ನೀಡಿದೆ. ಹೀಗಾಗಿ ಈ ಅವಧಿ ಮುಗಿಯವರೆಗೆ ಚುನಾವಣಾ ಆಯೋಗವು ಕಾಯುವ ಸಾಧ್ಯತೆಯಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ಮುಂದಿನ ನಡೆ ಏನಾಗಬಹುದು?: ಸೂರತ್‌ನ ನ್ಯಾಯಾಲಯದ ಪ್ರಶ್ನಿಸಿ ರಾಹುಲ್ ಗಾಂಧಿ ಉನ್ನತ ನ್ಯಾಯಾಲಯಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಕೆಳ ಹಂತದ ತೀರ್ಪನ್ನು ಪ್ರಶ್ನಿಸಬಹುದು ಮತ್ತು ಶಿಕ್ಷೆಯ ಆದೇಶಕ್ಕೆ ತಡೆ ಕೋರಬಹುದು. ಈಗಾಗಲೇ ಜಾಮೀನು ಮತ್ತು 30 ದಿನಗಳ ಕಾಲಾವಕಾಶ ನೀಡಲಾಗಿದೆ. ಅಲ್ಲದೇ, ರಾಷ್ಟ್ರಪತಿಗಳಿಗೆ ಮನವಿ ಕೂಡ ಮಾಡಬಹುದು. ಚುನಾವಣಾ ಆಯೋಗದ ಸಮಾಲೋಚನೆಯೊಂದಿಗೆ ಸಂಸದರನ್ನು ಅನರ್ಹಗೊಳಿಸುವ ಹಕ್ಕು ರಾಷ್ಟ್ರಪತಿಗಳಿಗೆ ಮಾತ್ರ ಇದೆ ಎಂದು ಕಾಂಗ್ರೆಸ್ ನಾಯಕರು ವಾದಿಸುತ್ತಿದ್ದು, ಇದೇ ವಿಷಯವನ್ನು ರಾಷ್ಟ್ರಪತಿಗಳ ಬಳಿ ರಾಹುಲ್​ ಪ್ರಸ್ತಾಪಿಸಬಹುದು.

ಕಾಂಗ್ರೆಸ್​ ಪ್ರಮುಖರ ಸಭೆ: ಏತನ್ಮಧ್ಯೆ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದ ನಂತರ ಕಾಂಗ್ರೆಸ್ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಅನೇಕ ವರಿಷ್ಠರು ಮಹತ್ವದ ಸಭೆ ನಡೆಸಿದ್ದಾರೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂಜೆ 6 ಗಂಟೆಗೆ ಸಭೆ ಸೇರಿದ ಉನ್ನತ ನಾಯಕರು ರಾಹುಲ್​ ಅನರ್ಹತೆಯು ವಿಷಯದ ಬಗ್ಗೆಯೇ ಸುದೀರ್ಘವಾಗಿ ಚರ್ಚಿಸಿದ್ದಾರೆ.

ಈ ಸಭೆಯಲ್ಲಿ ಖರ್ಗೆ ಮತ್ತು ಸೋನಿಯಾ ಅವರೊಂದಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ವಾದ್ರಾ, ಕೆಸಿ ವೇಣುಗೋಪಾಲ್, ಜೈರಾಮ್ ರಮೇಶ್, ರಾಜೀವ್ ಶುಕ್ಲಾ ಮತ್ತು ತಾರಿಕ್ ಅನ್ವರ್ ಪಾಲ್ಗೊಂಡಿದ್ದರು. ಅಲ್ಲದೇ, ಹಿರಿಯ ನಾಯಕರಾದ ಪಿ ಚಿದಂಬರಂ, ಆನಂದ್ ಶರ್ಮಾ, ಅಂಬಿಕಾ ಸೋನಿ, ಮುಕುಲ್ ವಾಸ್ನಿಕ್, ಸಲ್ಮಾನ್ ಖುರ್ಷಿದ್ ಮತ್ತು ಪವನ್ ಕುಮಾರ್ ಬನ್ಸಾಲ್ ಸೇರಿದಂತೆ ಉಪಸ್ಥಿತರಿದ್ದರು.

ಇದನ್ನೂ ಓದಿ: ಅನರ್ಹ ಜನಪ್ರತಿನಿಧಿ ಪಟ್ಟಿಗೆ ಸೇರಿದ ರಾಹುಲ್ ಗಾಂಧಿ: ಚುನಾಯಿತ ಸ್ಥಾನ ಕಳೆದುಕೊಂಡ ರಾಜಕಾರಣಿಗಳು ಎಷ್ಟು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.