ಚೆನ್ನೈ (ತಮಿಳುನಾಡು): ಕೋವಿಡ್ ಸಾಂಕ್ರಾಮಿಕ ರೋಗ ಮುಗಿದ ನಂತರ ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿ.ಕೆ.ಶಶಿಕಲಾ ಅವರು ಸಕ್ರಿಯ ರಾಜಕೀಯಕ್ಕೆ ಮರಳುವ ಬಗ್ಗೆ ಇದೀಗ ಸುಳಿವು ನೀಡಿದ್ದಾರೆ.
ಫೋನ್ ಕರೆಯ ಸತ್ಯಾಸತ್ಯತೆಯನ್ನು ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ ದಿನಕರನ್ ಅವರ ಆಪ್ತ ಸಹಾಯಕ ಜನಾರ್ಧನ್ ಖಚಿತಪಡಿಸಿದ್ದಾರೆ.
"ಚಿಂತಿಸಬೇಡಿ, ಕೊರೊನಾ ಸಾಂಕ್ರಾಮಿಕ ರೋಗ ಕೊನೆಗೊಂಡ ನಂತರ ನಾನು ಬರುತ್ತೇನೆ" ಎಂದು ಫೋನ್ ಕರೆ ಸಮಯದಲ್ಲಿ ಶಶಿಕಲಾ ಹೇಳುತ್ತಾರೆ. "ನಾವು ನಿಮ್ಮ ಹಿಂದೆ ಇರುತ್ತೇವೆ ಅಮ್ಮ" ಎಂದು ಮುಖಂಡ ಉತ್ತರಿಸುತ್ತಾರೆ.
ಮಾರ್ಚ್ನಲ್ಲಿ ಶಶಿಕಲಾ ರಾಜಕೀಯದಿಂದ ದೂರವಿರುವುದಾಗಿ ಹೇಳಿಕೆ ನೀಡಿದ್ದರು.
ಆದಯಕ್ಕೂ ಮೀರಿದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ 4 ವರ್ಷಗಳ ಜೈಲು ಶಿಕ್ಷೆಯ ನಂತರ ಫೆಬ್ರವರಿಯಲ್ಲಿ ನಗರಕ್ಕೆ ಮರಳಿದ ನಂತರ ಶಶಿಕಲಾ ಚೆನ್ನೈನಲ್ಲಿ ತಂಗಿದ್ದರು. ಮಾಜಿ ಎಐಎಡಿಎಂಕೆ ಉಚ್ಛಾಟಿತ ನಾಯಕಿ ಜನವರಿ 31 ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಅಲ್ಲಿ ಅವರು ಕೋವಿಡ್-19 ಸೋಂಕಿನ ಚಿಕಿತ್ಸೆಗೆ ಒಳಗಾಗಿದ್ದರು. ಜನವರಿ 27 ರಂದು ಅವರನ್ನು ನ್ಯಾಯಾಂಗ ಬಂಧನದಿಂದ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.