Exclusive: ಕೂನೂರು ಹೆಲಿಕಾಪ್ಟರ್ ದುರಂತದ ಕೊನೆ ಕ್ಷಣದ ವಿಡಿಯೋ - Helicopter Crash last moment
ತಮಿಳುನಾಡಿನ ಕೂನೂರು ಎಂಬಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನವಾಗುವುದಕ್ಕೂ ಮುನ್ನ ಸೆರೆಯಾದ ವಿಡಿಯೋ ಇಲ್ಲಿದೆ.
ತಮಿಳುನಾಡಿನ ಕೂನೂರು ಬಳಿ ನಿನ್ನೆ ನಡೆದ ಭೀಕರ ಹೆಲಿಕಾಪ್ಟರ್ ಪತನದಲ್ಲಿ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಹುತಾತ್ಮರಾಗಿದ್ದಾರೆ. ನತದೃಷ್ಟ ಹೆಲಿಕಾಪ್ಟರ್ ಪತನಕ್ಕೂ ಮುನ್ನ ಸೆರೆಯಾದ ವಿಡಿಯೋ ಇದು.
ಕೊನೆ ಕ್ಷಣದ ವಿಡಿಯೋದಲ್ಲಿ ಇರುವುದೇನು?:
ನೀಲಗಿರಿ ಪರ್ವತದಲ್ಲಿರುವ ರೈಲ್ವೆ ಹಳಿಯಲ್ಲಿ ಓಡಾಡುತ್ತಿದ್ದ ಪ್ರವಾಸಿಗರಿಗೆ ಸೇನಾ ಹೆಲಿಕಾಪ್ಟರ್ ಹಾರಾಡುತ್ತಿರುವುದು ಕಂಡುಬಂದಿದೆ. ಇದನ್ನು ಅವರು ವಿಡಿಯೋ ಮಾಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಹೆಲಿಕಾಪ್ಟರ್ ಮಂಜಿನಲ್ಲಿ ಕಣ್ಮರೆಯಾಯಿತು. ಹೆಲಿಕಾಪ್ಟರ್ ಮರೆಯಾದ ಕೆಲವೇ ಸೆಕೆಂಡುಗಳ ನಂತರ ರೋಟರ್ ಶಬ್ದವೂ ಕಡಿಮೆಯಾಗಿದೆ. ಇದೇ ಸಂದರ್ಭದಲ್ಲಿ ದೊಡ್ಡ ಶಬ್ದವೊಂದು ಕೇಳಿಸಿದ್ದು, ಪ್ರವಾಸಿಗರು ಹಿಂದಿರುಗಿ ನೋಡುತ್ತಾರೆ. ಇದೇ ವೇಳೆ ಹೆಲಿಕಾಪ್ಟರ್ ಬಿದ್ದಿದೆಯೇ?, ಏನಾಯ್ತು? ಎಂದು ಪ್ರವಾಸಿಗರ ತಂಡದಲ್ಲಿದ್ದವರೊಬ್ಬರು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರ ನೀಡಿದ ವ್ಯಕ್ತಿಯೋರ್ವ 'ಹೌದು' ಎಂದು ಹೇಳುತ್ತಾನೆ. ಈ ವೇಳೆ ಪ್ರವಾಸಿಗರು ಅಚ್ಚರಿಗೊಳ್ತಾರೆ.