ETV Bharat / bharat

ವಿಕ್ರಾಂತ್ ಹಡಗು ಹಗರಣ: ಬಿಜೆಪಿ ನಾಯಕ ಮತ್ತು ಅವರ ಮಗನ ವಿರುದ್ಧ ಮಾಜಿ ಸೈನಿಕರಿಂದ ದೂರು - ಮಹಾರಾಷ್ಟ್ರದಲ್ಲಿ ವಿಕ್ರಾಂತ್​ ಹಗರಣ

ಐಎನ್​ಎಸ್​ ವಿಕ್ರಾಂತ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸೋಮಯ್ಯ ಮತ್ತು ಅವರ ಮಗ ನೀಲ್​ ವಿರುದ್ಧ ಮಾಜಿ ಸೈನಿಕರೊಬ್ಬರು ದೂರು ನೀಡಿದ್ದಾರೆ.

Ex servicemen lodge complaint against Somaiya, complaint against Somaiya and his son over Vikrant matter, Vikrant issue in Maharashtra, Maharashtra news, ಸೋಮಯ್ಯ ವಿರುದ್ಧ ಮಾಜಿ ಸೈನಿಕ ದೂರು, ವಿಕ್ರಾಂತ್​ ಹಗರಣ ಹಿನ್ನೆಲೆ ಸೋಮಯ್ಯ ಮತ್ತು ಆತನ ಮಗನ ಮೇಲೆ ದೂರು, ಮಹಾರಾಷ್ಟ್ರದಲ್ಲಿ ವಿಕ್ರಾಂತ್​ ಹಗರಣ, ಮಹಾರಾಷ್ಟ್ರ ಸುದ್ದಿ,
ತಂದೆ, ಮಗನ ವಿರುದ್ಧ ಮಾಜಿ ಸೈನಿಕರಿಂದ ದೂರು
author img

By

Published : Apr 7, 2022, 10:37 AM IST

ಮುಂಬೈ(ಮಹಾರಾಷ್ಟ್ರ): ಐಎನ್‌ಎಸ್ ವಿಕ್ರಾಂತ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಕಿರೀತ್ ಸೋಮಯ್ಯ ಮತ್ತು ಅವರ ಮಗ ನೀಲ್ ಸೇರಿದಂತೆ ಇತರರ ವಿರುದ್ಧ ಮಾಜಿ ಯೋಧರೊಬ್ಬರು ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಂಚನೆ ದೂರಿನ ಮೇರೆಗೆ ಸೋಮಯ್ಯ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಕ್ರಾಂತ್ ಹಡಗಿನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಆರೋಪಿಸಿದ್ದರು. ಮಾಜಿ ಸೈನಿಕ ಬಾಬನ್ ಭೋಸಲೆ ನಿನ್ನೆ ತಡರಾತ್ರಿ ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ವಂಚನೆಯ ಬಗ್ಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಕಿರೀತ್​ ಸೋಮಯ್ಯ ಮತ್ತು ಅವರ ಮಗ ನಿಲ್ ವಿರುದ್ಧ ಸೆಕ್ಷನ್ 420, 406 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಓದಿ: ಅಣೆಕಟ್ಟು ನಾಡಿನಲ್ಲಿ ನೀರಿಗಾಗಿ ಹಾಹಾಕಾರ.. ಬಿಂದಿಗೆ ನೀರಿಗಾಗಿ ಪ್ರಾಣವನ್ನೇ ಪಣಕ್ಕಿಡುವ ನಾರಿಯರು!

ಏನಿದು ವಿವಾದ: ಶಿವಸೇನೆ ನಾಯಕ, ಸಂಸದ ಸಂಜಯ್​ ರಾವತ್​ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮಂಗಳವಾರದಂದು ಜಪ್ತಿ ಮಾಡಿಕೊಂಡಿದೆ. 1,034 ಕೋಟಿ ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಯು ಸಂಜಯ್​ ರಾವತ್ ಆಸ್ತಿಯನ್ನು ಜಪ್ತಿ ಮಾಡಿದೆ. ‘ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳಲಿ, ನನ್ನನ್ನು ಶೂಟ್ ಮಾಡಲಿ ಅಥವಾ ಜೈಲಿಗೆ ಕಳುಹಿಸಲಿ. ಇದಕ್ಕೆ ನಾನು ಹೆದರುವುದಿಲ್ಲ. ಸತ್ಯಕ್ಕೆ ಜಯ ಸಿಗುತ್ತದೆ’ ಎಂದು ಸಂಜಯ್​ ರಾವತ್​ ಪ್ರತಿಕ್ರಿಯಿಸಿದ್ದರು.

ನಿನ್ನೆ ಸಂಜಯ್ ರಾವತ್ ದೊಡ್ಡ ಆರೋಪವೊಂದನ್ನು ಮಾಡಿದ್ದರು. ಬಿಜೆಪಿ ನಾಯಕ ಕಿರೀತ್ ಸೋಮಯ್ಯ ವಿರುದ್ಧ ಐಎನ್‌ಎಸ್ ವಿಕ್ರಾಂತ್ ಹಡಗು ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಐಎನ್‌ಎಸ್ ವಿಕ್ರಾಂತ್ ಹಡಗನ್ನು (ವಿಮಾನವಾಹಕ ನೌಕೆ) ಉಳಿಸಲು ಸಂಗ್ರಹಿಸಿದ ಹಣ ರಾಜ್ಯಪಾಲರ ಕಚೇರಿಗೆ ತಲುಪಿಲ್ಲ ಎಂದು ರಾವತ್ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.

ಓದಿ: ಬಿಜೆಪಿ ನಾಯಕ ಸೋಮಯ್ಯ ವಿರುದ್ಧ ಶಿವಸೇನೆ ನಾಯಕ​ ರಾವತ್ ಗಂಭೀರ ಆರೋಪ

ಆರ್‌ಟಿಐನಿಂದ ಈ ಬಗ್ಗೆ ಮಾಹಿತಿ ಬಂದಿದೆ. ಇದು ಬಿಜೆಪಿ ನಾಯಕ ಸೋಮಯ್ಯ ಅವರ ದೇಶದ್ರೋಹ ಪ್ರಕರಣವಾಗಿದೆ ಎಂದು ಕಿಡಿ ಕಾರಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಸಂಜಯ್​ ರಾವತ್ ಕೇಂದ್ರೀಯ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಐಎನ್‌ಎಸ್ ವಿಕ್ರಾಂತ್ ಹಡಗಿನ ರಕ್ಷಣೆಗಾಗಿ ಸಂಗ್ರಹಿಸಿದ ಹಣ ರಾಜ್ಯಪಾಲರ ಕಚೇರಿಗೆ ತಲುಪಿಲ್ಲ ಎಂಬುದು ಆರ್‌ಟಿಐ ಅಡಿಯಲ್ಲಿ ಬೆಳಕಿಗೆ ಬಂದಿದೆ ಎಂದು ಆರೋಪಿಸಿದ್ದರು.

ಆರ್‌ಟಿಐ ಕಾರ್ಯಕರ್ತ ವೀರೇಂದ್ರ ಉಪಾಧ್ಯಾಯ ಅವರು ರಾಜ್ಯಪಾಲರ ಕಚೇರಿಯಿಂದ ಮಾಹಿತಿ ಕೇಳಿದ್ದರು. ರಾಜ್ಯಪಾಲರ ಕಚೇರಿಗೆ ಅಂತಹ ಯಾವುದೇ ಮಾಹಿತಿ ಬಂದಿಲ್ಲ. ಕಳೆದ ತಿಂಗಳು ಈ ಮಾಹಿತಿ ಬಂದಿದೆ ಎಂದರು. ಸೋಮಯ್ಯ ಸಿಎ ಆಗಿರುವುದರಿಂದ ಅಂತಹ ಹಣವನ್ನು ಹೇಗೆ ಅರಗಿಸಿಕೊಳ್ಳಬೇಕು ಎಂಬುದು ಅವರಿಗೆ ತಿಳಿದಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.