ಪಾಟ್ನಾ: ಜನತಾದಳ (ಯುನೈಟೆಡ್) ಮಾಜಿ ಶಾಸಕರೊಬ್ಬರ ಮಗನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದು ಪರಾರಿಯಾದ ಘಟನೆ ಬಿಹಾರದ ಚಪ್ರಾದಲ್ಲಿ ನಡೆದಿದೆ. ಮೃತನನ್ನು ಪ್ರಿನ್ಸ್ ಕುಮಾರ್ ರೈ ಎಂದು ಗುರುತಿಸಲಾಗಿದ್ದು, ಮಾಜಿ ಶಾಸಕ ದಿ. ರಾಮ್ ಪ್ರವೇಶ್ ರಾಯ್ ಅವರ ಪುತ್ರ ಎಂದು ತಿಳಿದು ಬಂದಿದೆ.
ಪ್ರಿನ್ಸ್ ರೈ ಭಗವಾನ್ ಬಜಾರ್ ಎಂಬ ಪ್ರದೇಶದಲ್ಲಿ ಜಿಲ್ಲಾ ಕೌನ್ಸಿಲರ್ ಅಧ್ಯಕ್ಷರ ನಿವಾಸದ ಬಳಿ ಟೈರ್ ಅಂಗಡಿಯೊಂದನ್ನು ಹೊಂದಿದ್ದರು. ಬುಧವಾರ ರಾತ್ರಿ ಪ್ರಿನ್ಸ್ ತನ್ನ ಅಂಗಡಿಯಿಂದ ಮನೆಗೆ ತೆರಳುತ್ತಿದ್ದಾಗ ಅಪರಿಚಿತ ದಾಳಿಕೋರರ ಗುಂಪು ಆತನನ್ನು ತಡೆದು ಮೂರು ಬಾರಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬುಧವಾರ ರಾತ್ರಿ 10 ಗಂಟೆಗೆ ಈ ಘಟನೆ ನಡೆದಿದೆ.
ರಾತ್ರಿ ಅವರು ತಮ್ಮ ಅಂಗಡಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ದಾಳಿಕೋರರು ಗುಂಡಿಕ್ಕಿ ಪರಾರಿಯಾಗಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ದಾಳಿಕೋರರನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.
ಓದಿ: 10 ಜನರನ್ನ ಕೊಂದು ಇಡೀ ಊರನ್ನೇ ಸುಟ್ಟು ಹಾಕಿದ ದಾಳಿಕೋರರು!!
ಮೃತ ವ್ಯಕ್ತಿಯ ಸಂಬಂಧಿಕರಿಂದ ಹೇಳಿಕೆಗಳನ್ನು ಪಡೆಯಲಾಗಿದೆ. ತನಿಖೆಯೂ ಸಹ ನಡೆಯುತ್ತಿದೆ. ಶೀಘ್ರದಲ್ಲೇ ದಾಳಿಕೋರರನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಭಗವಾನ್‌ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಹೆಚ್ಒ) ರಮೇಶ್ ಕುಮಾರ್ ಯಾದವ್ ಹೇಳಿದ್ದಾರೆ.