ETV Bharat / bharat

ಬಿಜೆಪಿ ಮುಖಂಡನ ಕಾರಲ್ಲಿ EVM: ಇಸಿ ವೈಖರಿ, ಬಿಜೆಪಿ ನಿಯತ್ತು, ಪ್ರಜಾಪ್ರಭುತ್ವ ಕೆಟ್ಟೋಗಿದೆ: ರಾಗಾ ಗರಂ - ಅಸ್ಸೊಂ ವಿಧಾನಸಭಾ ಚುನಾವಣೆ

ಅಸ್ಸೋಂನಲ್ಲಿ ನಡೆದ ಎರಡನೇ ಹಂತದ ಮತದಾನದ ಮುಕ್ತಾಯದ ನಂತರ, ಕೆಲವು ಸ್ಥಳೀಯರು ಗುರುವಾರ ರಾತ್ರಿ 10.30ಕ್ಕೆ ಕರಿಮ್‌ಗಂಜ್‌ನ ಕನಿಸೈಲ್ ಪ್ರದೇಶದಲ್ಲಿ ಬಿಳಿ ಬೊಲೆರೊ ಕಾರೊಂದನ್ನು ಅನುಮಾನಾಸ್ಪದವಾಗಿ ಓಡಾಡುವುದನ್ನು ಪತ್ತೆಹಚ್ಚಿದ್ದಾರೆ. ಕಾರು ಚಾಲಕನನ್ನು ಪ್ರಶ್ನಿಸಲು ಸ್ಥಳೀಯರು ಹೋದಾಗ ಆತ ಓಡಿಹೋದನೆಂದು ಆರೋಪಿಸಲಾಗಿದೆ. ಹುಡುಕಾಟದ ಸಮಯದಲ್ಲಿ ಕಾರಿನೊಳಗೆ ಇವಿಎಂ ಪತ್ತೆಯಾಗಿದೆ.

Rahul Gandhi
Rahul Gandhi
author img

By

Published : Apr 2, 2021, 1:09 PM IST

ನವದೆಹಲಿ: ಅಸ್ಸೊಂ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದ ಕೆಲವೇ ಗಂಟೆಗಳ ನಂತರ ಬಿಜೆಪಿ ಶಾಸಕರ ಖಾಸಗಿ ವಾಹನದಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು (ಇವಿಎಂ) ಸಾಗಿಸಲಾಗುತ್ತಿದೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಬಿಜೆಪಿ ಹಾಗೂ ಚುನಾವಣೆ ಆಯೋಗದ ವಿರುದ್ಧ ಹರಿಹಾಯ್ದಿದ್ದಾರೆ.

ಎಎಸ್ 10 ಬಿ 0022 ನೋಂದಣಿ ಸಂಖ್ಯೆ ಹೊಂದಿರುವ ವಾಹನದ ಹಿಂಭಾಗದ ಆಸನದ ಮೇಲೆ ಇವಿಎಂ ಕಂಡು ಬಂದಿದೆ. ಅಸ್ಸೊಂ ಶಾಸಕ ಮತ್ತು ಪಥರ್ಕಂಡಿಯ ಬಿಜೆಪಿ ಅಭ್ಯರ್ಥಿ ಕೃಷ್ಣೇಂಡು ಪಾಲ್ ಅವರಿಗೆ ಈ ವಾಹನ ಸೇರಿದೆ ಎನ್ನಲಾಗುತ್ತಿದೆ.

  • Every time there is an election videos of private vehicles caught transporting EVM’s show up. Unsurprisingly they have the following things in common:

    1. The vehicles usually belong to BJP candidates or their associates. ....

    1/3 https://t.co/s8W9Oc0UcV

    — Priyanka Gandhi Vadra (@priyankagandhi) April 2, 2021 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಚುನಾವಣೆ ಆಯೋಗ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಬಿಜೆಪಿಯ ನಿಯತ್ತು ಕೆಟ್ಟು ಹೋಗಿದೆ, ಪ್ರಜಾಪ್ರಭುತ್ವ ದುಃಸ್ಥಿತಿಯಲ್ಲಿದೆ (ಇಸಿ ಕಿ ಗಾಡಿ ಖರಾಬ್​, ಭಾಜಪಾ ಕಿ ನಿಯತ್​ ಖರಾಬ್​, ಲೋಕತಂತ್ರ ಕೀ ಹಾಲತ್​ ಖರಾಬ್​) ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ಅಸ್ಸೋಂ ಮೂಲದ ಪತ್ರಕರ್ತ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್ಲೋಡ್​ ಮಾಡಿದ ಕೂಡಲೇ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪ್ರತಿಪಕ್ಷಗಳು ಮತದಾನದ ನಡೆದ ರಾಜ್ಯಗಳಲ್ಲಿ ಇವಿಎಂಗಳ ನಿರ್ವಹಣೆ ಕುರಿತು ಪ್ರಶ್ನೆಗಳನ್ನು ಎತ್ತಿದವು.

ಇದನ್ನೂ ಓದಿ: ಕೊರೊನಾ ಲಸಿಕೆ ಹಾಕಿಸಿಕೊಂಡ ಬಿಗ್​ ಬಿ ಅಮಿತಾಬ್​ ಬಚ್ಚನ್​ ಮತ್ತು ಕುಟುಂಬ

ಕಾಂಗ್ರೆಸ್​ನ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ವೈರಲ್ ವಿಡಿಯೋ ಹಂಚಿಕೊಂಡಿದ್ದು, ನಿರ್ಣಾಯಕವಾಗಿ ಮತ್ತು ಪಕ್ಷಪಾತ ಮಾಡದೇ ಕಾರ್ಯನಿರ್ವಹಿಸುವಂತೆ ಚುನಾವಣಾ ಆಯೋಗವನ್ನು ಕೋರಿದ್ದಾರೆ. ಇವಿಎಂ ಬಳಕೆಯ ಬಗ್ಗೆ ಗಂಭೀರವಾದ ಮರು ಮೌಲ್ಯಮಾಪನವನ್ನು ಎಲ್ಲ ರಾಷ್ಟ್ರೀಯ ಪಕ್ಷಗಳು ನಡೆಸಬೇಕಾಗಿದೆ ಎಂದು ಒತ್ತಾಯಿಸಿದರು.

ಅಸ್ಸೋಂ ಕರೀಮ್‌ಗಂಜ್‌ನಲ್ಲಿ ಏನಾಯಿತು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.