ಅಮೃತಸರ: ರಾಜಕೀಯವಾಗಿ ಪಂಜಾಬ್‌ನಲ್ಲಿ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರ ನಡುವಿನ ಜಗಳ ಸಾಮಾನ್ಯ. ಆದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಮೃತಸರ ಪೂರ್ವ ಕ್ಷೇತ್ರದ ಸ್ಥಾನವು ಪ್ರಮುಖ ಸ್ಥಾನವಾಗಿತ್ತು. ಏಕೆಂದರೆ ಇಬ್ಬರು ನಾಯಕರ ಮುಖಾಮುಖಿಯಿಂದಾಗಿ ಈ ಸ್ಥಾನ ಪಂಜಾಬ್‌ನ 117 ಸ್ಥಾನಗಳಲ್ಲಿ ಸೂಪರ್ ಹಾಟ್ ಸೀಟ್ ಎಂದು ಪರಿಗಣಿಸಲಾಗಿದೆ.
ಅಮೃತಸರ ಪೂರ್ವ ಕ್ಷೇತ್ರದಲ್ಲಿ ಒಂದು ಕಡೆ ಕಾಂಗ್ರೆಸ್‌ನ ಪಂಜಾಬ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಸ್ಪರ್ಧಿಸುತ್ತಿದ್ದರೆ ಮತ್ತೊಂದೆಡೆ ಬಿಕ್ರಮ್‌ಜಿತ್ ಸಿಂಗ್ ಮಜಿಥಿಯಾ ಸ್ಪರ್ಧಿಸಿದ್ದರು. ಮಜಿಥಿಯಾಗೆ ಅಕಾಲಿದಳದಿಂದ ಅಮೃತಸರ ಪೂರ್ವ ಮತ್ತು ಮಜಿತಾ ಕ್ಷೇತ್ರವನ್ನು ನೀಡಲಾಗಿತ್ತು. ಆದರೆ, ಸಿಧು ವಿರುದ್ಧ ನಿಂತು ಚುನಾವಣೆ ಸ್ಪರ್ಧಿಸುವ ಸವಾಲ್ ಅನ್ನು ಸ್ವೀಕರಿಸಿದ ಮಜಿಥಿಯಾ ತಮ್ಮ ಪತ್ನಿಯನ್ನು ಮಜಿತಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸಿದ್ದರು.
ಓದಿ: ದಕ್ಷಿಣ ಕೊರಿಯಾದಲ್ಲಿ ಮುಂದುವರೆದ ಕಾಳ್ಗಿಚ್ಚು: 24 ಸಾವಿರ ಹೆಕ್ಟೇರ್ ಅರಣ್ಯ ನಾಶ
ಅಮೃತಸರ ಪೂರ್ವ ಸ್ಥಾನದಲ್ಲಿ ನವಜೋತ್ ಸಿಂಗ್ ಸಿಧು ಮತ್ತು ಬಿಕ್ರಮ್ ಸಿಂಗ್ ಮಜಿಥಿಯಾ ಮುಖಾಮುಖಿಯಾಗಿದ್ದರಿಂದ ಈ ಸ್ಥಾನ ಸೂಪರ್ ಹಾಟ್ ಆಗಿ ಮಾರ್ಪಟ್ಟಿತ್ತು. ಏಕೆಂದರೆ ಈ ಇಬ್ಬರು ನಾಯಕರು ಪರಸ್ಪರರ ತಮ್ಮ ಆಕ್ರೋಶಗಳನ್ನು ಹೊರ ಹಾಕಿದ್ದರು. ವಿಧಾನಸಭೆಯಲ್ಲಿ ಇಬ್ಬರು ಕಿತ್ತಾಡಿಕೊಂಡಿದ್ದನ್ನು ಜನ ಗಮನಿಸಿದ್ದರು.
ಫೆಬ್ರವರಿ 20 ರಂದು ಅಮೃತಸರ ಪೂರ್ವ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಕಾಲಿದಳದಿಂದ ಬಿಕ್ರಮ್ ಸಿಂಗ್ ಮಜಿಥಿಯಾ ಅವರಿಗೆ ಟಿಕೆಟ್ ಸಿಕ್ಕರೆ, ಮತ್ತೊಂದೆಡೆ ಕಾಂಗ್ರೆಸ್‌ನಿಂದ ನವಜೋತ್ ಸಿಂಗ್ ಸಿಧು ಅವರಿಗೆ ಟಿಕೆಟ್ ನೀಡಲಾಯಿತು. ಆದರೆ, ಈ ಇಬ್ಬರು ನಾಯಕರ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ಜೀವನ್ ಜ್ಯೋತ್ ಕೌರ್ ಸ್ಪರ್ಧಿಸಿದ್ದರು.ನವಜೋತ್ ಸಿಂಗ್ ಸಿಧು 2017 ರಲ್ಲಿ ಈ ಜನಪ್ರಿಯ ಕ್ಷೇತ್ರದಿಂದ ಶಾಸಕರಾಗಿದ್ದರು. ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಭಾರತೀಯ ಜನತಾ ಪಕ್ಷದ ರಾಜೇಶ್ ಕುಮಾರ್ ಹನಿ ಅವರನ್ನು 42,809 ಮತಗಳ ಅಂತರದಿಂದ ಸೋಲಿಸಿದ್ದರು.
ಅಮೃತಸರ ಪೂರ್ವದ ಈ ಸ್ಥಾನವನ್ನು ಸಹ ಸಿಧು ಅವರ ಕುಟುಂಬದ ಸ್ಥಾನ ಎಂದೇ ಪರಿಗಣಿಸಲಾಗಿದೆ. ಏಕೆಂದರೆ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಅವರು ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಆದರೆ, ಈ ಬಾರಿ ಮಜಿತಾ ಬದಲಿಗೆ ಬಿಕ್ರಮಜಿತ್ ಸಿಂಗ್ ಮಜಿಥಿಯಾ ಅವರು, ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಸಿಧು ಸವಾಲನ್ನು ಸ್ವೀಕರಿಸಿದ್ದರು.
ಓದಿ: ಭಾರತದ ಕ್ಷಿಪಣಿ ತನ್ನ ಭೂ ಪ್ರದೇಶದೊಳಗೆ ಬಿದ್ದಿದೆ: ಪಾಕ್ ಆರೋಪ
ಅಮೃತಸರದ ಕ್ಷೇತ್ರದಲ್ಲಿ ನವಜೋತ್ ಸಿಂಗ್ ಸಿಧು ಮತ್ತು ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಸ್ಪರ್ಧೆ ಎಂದೇ ನಂಬಲಾಗಿತ್ತು. ಆದರೆ ಮತಗಳ ಎಣಿಕೆ ಕೊನೆಯ ಸುತ್ತಿಗೆ ತಲುಪುತ್ತಿದ್ದಂತೆ ಈ ಇಬ್ಬರು ನಾಯಕರಿಗೆ ಅಚ್ಚರಿ ಮೂಡಿತ್ತು. ಹೌದು, ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎಂಬಂತೆ 6,750 ಅಂತರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜೀವನ್ ಜೋತ್ ಕೌರ್ ವಿಜಯದ ನಗೆ ಬೀರಿದ್ದರು.
ಸದ್ಯ ಈ ಕ್ಷೇತ್ರದ ಮತ ಎಣಿಕೆಗೂ ಮುನ್ನವೇ ಈ ಸ್ಥಾನದ ಬಗ್ಗೆ ಬಿರುಸಿನ ಚರ್ಚೆ ನಡೆದಿದ್ದು, ಈ ಇಬ್ಬರು ನಾಯಕರಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಆಗ ಚರ್ಚೆಯಾಗುತ್ತಿತ್ತು. ಆದ್ರೆ ಈ ಸ್ಥಾನವನ್ನು ಆಮ್ ಆದ್ಮಿ ಪಕ್ಷ ಗೆದ್ದು ಅಚ್ಚರಿ ಮೂಡಿಸಿದೆ.