ನವದೆಹಲಿ: ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ತಾಲಿಬಾನ್ ರಕ್ತದೋಕುಳಿ ನಡೆಸಿದ್ದು, ಅನೇಕ ಅಮಾಯಕರ ಪ್ರಾಣ ಬಲಿ ಪಡೆದುಕೊಳ್ಳುತ್ತಿದೆ. ನಿನ್ನೆಯಷ್ಟೇ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 85ಕ್ಕೂ ಅಧಿಕ ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿದ್ದಾರೆ.
-
Our overall assessment is that the vast majority of Indians who wish to return have been evacuated. Some more are likely to be in Afghanistan. I don't have the exact number for that: MEA Spokesperson Arindam Bagchi on evacuation from Afghanistan pic.twitter.com/33Z4hIcaRg
— ANI (@ANI) August 27, 2021 " class="align-text-top noRightClick twitterSection" data="
">Our overall assessment is that the vast majority of Indians who wish to return have been evacuated. Some more are likely to be in Afghanistan. I don't have the exact number for that: MEA Spokesperson Arindam Bagchi on evacuation from Afghanistan pic.twitter.com/33Z4hIcaRg
— ANI (@ANI) August 27, 2021Our overall assessment is that the vast majority of Indians who wish to return have been evacuated. Some more are likely to be in Afghanistan. I don't have the exact number for that: MEA Spokesperson Arindam Bagchi on evacuation from Afghanistan pic.twitter.com/33Z4hIcaRg
— ANI (@ANI) August 27, 2021
ಬಾಂಬ್ ಸ್ಫೋಟ ನಡೆಯುತ್ತಿದ್ದಂತೆ ಬೇರೆ ಬೇರೆ ದೇಶಗಳು ಸ್ಥಳಾಂತರ ಕಾರ್ಯ ಚುರುಕುಗೊಳಿಸಿವೆ. ಇದೇ ವಿಚಾರವಾಗಿ ಮಾತನಾಡಿರುವ ಭಾರತದ ವಿದೇಶಾಂಗ ಇಲಾಖೆ, ಅಫ್ಘಾನಿಸ್ತಾನದಲ್ಲಿ ಭಾರತದ ಯಾವುದೇ ನಾಗರಿಕರು ಉಳಿದುಕೊಂಡಿಲ್ಲ ಎಂದು ಹೇಳಿದೆ.
-
We've evacuated over 550 people in 6 separate flights, either from Kabul or Dushanbe. Of these, over 260 were Indians. GoI also facilitated evacuation of Indian nationals through other agencies. We were in touch with various countries, like US,Tajikistan: MEA spox Arindam Bagchi pic.twitter.com/OmpM47p6ob
— ANI (@ANI) August 27, 2021 " class="align-text-top noRightClick twitterSection" data="
">We've evacuated over 550 people in 6 separate flights, either from Kabul or Dushanbe. Of these, over 260 were Indians. GoI also facilitated evacuation of Indian nationals through other agencies. We were in touch with various countries, like US,Tajikistan: MEA spox Arindam Bagchi pic.twitter.com/OmpM47p6ob
— ANI (@ANI) August 27, 2021We've evacuated over 550 people in 6 separate flights, either from Kabul or Dushanbe. Of these, over 260 were Indians. GoI also facilitated evacuation of Indian nationals through other agencies. We were in touch with various countries, like US,Tajikistan: MEA spox Arindam Bagchi pic.twitter.com/OmpM47p6ob
— ANI (@ANI) August 27, 2021
ಇದನ್ನೂ ಓದಿರಿ: ಪೊಲೀಸ್ ಪೇದೆ ಆಗಿರುವ ಬಿಗ್ ಬಿ ಬಾಡಿಗಾರ್ಡ್ ವಾರ್ಷಿಕ ವೇತನ 1.5 ಕೋಟಿ ರೂ: ತನಿಖೆಗೆ ಆದೇಶ
ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿದ್ದು, ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ನಮ್ಮ ಯಾವುದೇ ಪ್ರಜೆ ಅಲ್ಲಿ ಉಳಿದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಭಾರತಕ್ಕೆ ಬಂದ ಕೊನೆ ವಿಮಾನದಲ್ಲಿ 40 ಜನರು ಆಗಮಿಸಿದ್ದು, ಅಲ್ಲಿ ಅರಾಜಕತೆ ಉಂಟಾಗಲು ಆರಂಭಗೊಂಡಾಗಿನಿಂದಲೂ ನಾವು ನಮ್ಮ ಪ್ರಜೆಗಳನ್ನ ಕರೆತರುವ ಕೆಲಸದಲ್ಲಿ ಮಗ್ನರಾಗಿದ್ದೆವು ಎಂದಿದ್ದಾರೆ.
ಇಲ್ಲಿಯವರೆಗೆ 550 ಜನರ ಕರೆತರಲಾಗಿದ್ದು, ಇದರಲ್ಲಿ 260 ಜನರು ಭಾರತೀಯರು ಹಾಗೂ ಉಳಿದವರು ಇತರ ದೇಶದ ನಾಗರಿಕರು ಆಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಟ್ರಂಪ್ ಪ್ರತಿಕ್ರಿಯೆ
ಕಾಬೂಲ್ ಏರ್ಪೋರ್ಟ್ನಲ್ಲಿ ಸಂಭವಿಸಿರುವ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಒಂದು ವೇಳೆ ನಾನು ಅಧ್ಯಕ್ಷನಾಗಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.