ETV Bharat / bharat

ಎಲೆಕ್ಟ್ರಿಕ್ ಬೈಕ್​ಗಳಲ್ಲಿ ಬೆಂಕಿ ಅವಘಡಗಳ ಬಗ್ಗೆ ಕೇಂದ್ರ ಸಾರಿಗೆ ಕಾರ್ಯದರ್ಶಿ ಹೇಳಿದ್ದೇನು?

author img

By

Published : May 1, 2022, 5:05 PM IST

ದೇಶದ ಹಲವು ಭಾಗಗಳಲ್ಲಿ ಎಲೆಕ್ಟ್ರಿಕ್ ಬೈಕ್​ಗಳಲ್ಲಿ ಬೆಂಕಿ ಅವಘಡದ ವರದಿಗಳು ಹೆಚ್ಚಾಗಿವೆ. ಅಲ್ಲದೇ, ಹಲವು ಸುಟ್ಟು ಹೋಗಿ ವಾಹನ ಸವಾರರು ಸಹ ಗಾಯಗೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದಾರೆ.

EV fire incidents will be probed
ಎಲೆಕ್ಟ್ರಿಕ್ ಬೈಕ್​ಗಳಲ್ಲಿ ಬೆಂಕಿ ಅವಘಡದ ಬಗ್ಗೆ ತನಿಖೆ

ನವದೆಹಲಿ: ಎಲೆಕ್ಟ್ರಿಕ್ ಬೈಕ್​ಗಳು ಬೆಂಕಿಗಾಹುತಿ ಆಗುತ್ತಿರುವ ಘಟನೆಗಳು ದೇಶದ ಹಲವು ಭಾಗಗಳಲ್ಲಿ ವರದಿಯಾಗುತ್ತಲೇ ಇವೆ. ಇದರ ನಡುವೆ ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಕಾರ್ಯದರ್ಶಿ ಗಿರಿಧರ್ ಅರಮನೆ ಪ್ರತಿಕ್ರಿಯೆ ನೀಡಿದ್ದು, ಪ್ರತಿಯೊಂದು ಘಟನೆ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಎಲೆಕ್ಟ್ರಿಕ್​​ ಬೈಕ್​ಗಳ ದುರಂತಗಳ ಬಗ್ಗೆ ಮಾತನಾಡಿರುವ ಅವರು, ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉದ್ಯಮವನ್ನು ನಮ್ಮ ಕಲ್ಪನೆಗೂ ಮೀರಿ ಬೆಳೆಸಲು ಇಲಾಖೆ ಬದ್ಧವಾಗಿದೆ. ಬೈಕ್​ಗಳಲ್ಲಿ ಸಂಭವಿಸಿದ ಬೆಂಕಿ ಅವಘಡಗಳ ಬಗ್ಗೆ ಪ್ರತ್ಯೇಕವಾಗಿ ಪ್ರತಿಯೊಂದರ ಬಗ್ಗೆಯೂ ತನಿಖೆ ನಡೆಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹೈ ಪ್ರೊಫೈಲ್ ಬ್ಯಾಟರಿಯ ಬೈಕ್​ಗಳಲ್ಲೇ ಅಗ್ನಿ ಅನಾಹುತಗಳು ಸಂಭವಿಸುತ್ತಿದ್ದು, ಎಲೆಕ್ಟ್ರಿಕ್ ವಾಹನಗಳಲ್ಲಿ ಮುಂಚೂಣಿಯಲ್ಲಿ ಇರಬೇಕೆಂಬ ಭಾರತದ ಪ್ರಯತ್ನಕ್ಕೆ ಇದು ಹಿನ್ನಡೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ತಯಾರಕರು ಅಗತ್ಯವಾದ ಸುರಕ್ಷತಾ ಕ್ರಮಗಳು ಮತ್ತು ಗುಣಮಟ್ಟದ ವ್ಯವಸ್ಥೆಗಳನ್ನು ತ್ವರಿತವಾಗಿ ಸ್ಥಾಪಿಸಿದರೆ, ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭದ್ರಾವತಿ: ಚಾರ್ಜ್​ಗೆ​ ಇಟ್ಟಿದ್ದ ಎಲೆಕ್ಟ್ರಿಕ್ ಬೈಕ್ ಸುಟ್ಟು ಭಸ್ಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.