ನವದೆಹಲಿ: ಕೊರೊನಾ ವೈರಸ್ 2ನೇ ಅಲೆ ಹಾವಳಿ ಹೆಚ್ಚಾಗಿದ್ದರಿಂದ ಭಾರತದಿಂದ ಯುರೋಪ್ ರಾಷ್ಟ್ರಗಳ ಪ್ರವಾಸಕ್ಕೆ ತೆರಳಲು ಹಾಕಲಾಗಿದ್ದ ನಿರ್ಬಂಧಗಳನ್ನ ಈಗ ಸಡಿಲಗೊಳಿಸಲಾಗುತ್ತಿದೆ. ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರು ಇನ್ನು ಮುಂದೆ ಯುರೋಪ್ನ 9 ರಾಷ್ಟ್ರಗಳಿಗೆ ಯಾವುದೇ ತೊಂದರೆ, ತಕರಾರಿಲ್ಲದೆ ಪ್ರಯಾಣ ಬೆಳೆಸಬಹುದು.
ಆಸ್ಟ್ರಿಯಾ, ಜರ್ಮನಿ, ಗ್ರೀಸ್, ಐಸ್ಲ್ಯಾಂಡ್, ಐರ್ಲೆಂಡ್, ಸ್ಪೇನ್, ಸ್ಲೊವೇನಿಯಾ, ಸ್ವಿಟ್ಜರ್ಲೆಂಡ್ ಹಾಗೂ ಎಸ್ಟೋನಿಯಾ ದೇಶಗಳಿಗೆ ಭಾರತದಿಂದ ಇನ್ನು ಮುಂದೆ ಪ್ರವಾಸ ಕೈಗೊಳ್ಳಬಹುದು. ಆದರೆ ಇಲ್ಲಿರುವ ಷರತ್ತು ಇಷ್ಟೇ. ಇದಕ್ಕಾಗಿ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡಿರಬೇಕು. ಭಾರತದಲ್ಲಿ ಕೊರೊನಾ ವೈರಸ್ ಮಿನಿಮೀರಿದ್ದರ ಪರಿಣಾಮವಾಗಿ ಈ ಮೇಲಿನ ಎಲ್ಲ ರಾಷ್ಟ್ರಗಳು ಭಾರತದಿಂದ ಬರುವವರಿಗೆ ನಿರ್ಬಂಧ ವಿಧಿಸಿದ್ದವು.
ಇದನ್ನೂ ಓದಿರಿ: ತಿಂಗಳ ಹಿಂದಷ್ಟೇ ಸಪ್ತಪದಿ ತುಳಿದ ವೈದ್ಯ ಜೋಡಿ 'ವೈದ್ಯರ ದಿನವೇ' ಆತ್ಮಹತ್ಯೆಗೆ ಶರಣು!
ಆದರೆ ಈಗ ಭಾರತದಲ್ಲಿ ಕೊರೊನಾ ಅಟ್ಟಹಾಸ ಕಡಿಮೆಯಾಗುತ್ತಿದೆ. ಇದರ ಪರಿಣಾಮವಾಗಿ ಐರೋಪ್ಯ ಒಕ್ಕೂಟವು ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಡಿಜಿಟಲ್ ಕೋವಿಡ್ ಪ್ರಮಾಣ ಪತ್ರ ಅಥವಾ ಗ್ರೀನ್ ಪಾಸ್ ವಿತರಣೆ ಮಾಡುವ ಕಾರ್ಯಕ್ರಮವನ್ನು ರೂಪಿಸಿದೆ.
ಕೋವಿಶೀಲ್ಡ್ ಲಸಿಕೆ ಪಡೆದುಕೊಂಡರೂ ಯುರೋಪಿಯನ್ ಒಕ್ಕೂಟ ಸೇರಿದಂತೆ ಇತರೆ ರಾಷ್ಟ್ರಗಳಿಗೆ ತೆರಳಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿರಲಿಲ್ಲ. ಹೀಗಾಗಿ ಅನೇಕ ಭಾರತೀಯ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದರು. ಈ ವಿಚಾರವನ್ನು ಸೀರಂ ಇನ್ಸ್ಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಪೂನಾವಾಲ್ಲಾ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು. ಜತೆಗೆ ಆದಷ್ಟು ಬೇಗ ತೊಂದರೆ ನಿವಾರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.