ETV Bharat / bharat

Weekly Horoscope: ಈ ವಾರ ನಿಮಗೆ ಎದುರಾಗುವ ಸವಾಲುಗಳೇನು, ಯಾರಿಗೆಲ್ಲ ಶುಭ ಸುದ್ದಿ? - ಈ ವಾರದ ರಾಶಿ ಭವಿಷ್ಯ

ಈ ವಾರದ ನಿಮ್ಮ ರಾಶಿ ಭವಿಷ್ಯ ಹೀಗಿದೆ.

Weekly Horoscope
ಈ ವಾರದ ರಾಶಿ ಭವಿಷ್ಯ
author img

By

Published : Dec 5, 2021, 8:15 AM IST

ಮೇಷ: ಈ ವಾರದಲ್ಲಿ ನೀವು ಅತ್ಯುತ್ತಮ ಸುದ್ದಿಯನ್ನು ಪಡೆಯಲಿದ್ದೀರಿ. ನೀವು ಕೆಲಸ ಹುಡುಕುತ್ತಿದ್ದರೆ ಅದರಲ್ಲಿ ಯಶಸ್ಸು ಗಳಿಸುತ್ತೀರಿ. ಉದ್ಯೋಗದಲ್ಲಿರುವವರಿಗೆ ಒಳ್ಳೆಯ ಸ್ಥಳಕ್ಕೆ ವರ್ಗಾವಣೆ ಆಗುವ ಸಾಧ್ಯತೆಯಿದೆ. ನಿಮಗೆ ಬಡ್ತಿ ಸಿಗಬಹುದು ಮತ್ತು ನಿಮ್ಮ ಸಂಬಳ ಹೆಚ್ಚಾಗಬಹುದು. ನೀವು ಯಾವುದಾದರೂ ಸುಂದರ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬಹುದು ಮತ್ತು ಖಾಸಗಿ ಕ್ಷಣಗಳನ್ನು ನೀವು ಆನಂದಿಸಬಹುದು. ನೀವು ಸಮುದ್ರ ಅಥವಾ ನದಿಯ ದಡಕ್ಕೆ ಭೇಟಿ ನೀಡಬಹುದು. ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಕೆಲವು ಅಮೂಲ್ಯ ಕ್ಷಣಗಳನ್ನು ಕಳೆಯಲಿದ್ದೀರಿ. ಪ್ರೇಮಿಗಳಿಗೆ ಇದು ಸಕಾಲ. ವಿದೇಶದಲ್ಲಿ ವ್ಯಾಪಾರೋದ್ಯಮಿಗಳು ಲಾಭ ಗಳಿಸಲಿದ್ದಾರೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳಿಂದ ನೀವು ಬೆಂಬಲ ಪಡೆಯಲಿದ್ದೀರಿ. ನೀವು ಕೆಲವು ಹೊಸ ಜನರೊಂದಿಗೆ ಗೆಳೆತನ ಮಾಡಲಿದ್ದೀರಿ. ದುಬಾರಿ ವಾಚು ಅಥವಾ ಬ್ರಾಂಡೆಡ್‌ ಬಟ್ಟೆ ಖರೀದಿಸಲು ನೀವು ಹಣ ಖರ್ಚು ಮಾಡಲಿದ್ದೀರಿ.

ವೃಷಭ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ನಿಮಗೆ ಯಾವುದಾದರೂ ವಿಚಾರದ ಕುರಿತು ಚಿಂತೆ ಕಾಡಲಿದ್ದು ಇದು ನಿಮ್ಮ ಆರೋಗ್ಯವನ್ನು ಬಾಧಿಸಲಿದೆ. ಹೀಗಾಗಿ ಇಂತಹ ವಿಷಯಗಳಿಂದ ದೂರವಿರಿ. ನಿಮ್ಮ ಸ್ವಾಸ್ತ್ಯವನ್ನು ಕಾಪಾಡಲು ಸರಿಯಾದ ಆಹಾರವನ್ನು ಸೇವಿಸಿ ಮತ್ತು ವ್ಯಾಯಾಮ ಮಾಡಿ. ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಒಂದಷ್ಟು ಒತ್ತಡವನ್ನು ಎದುರಿಸಬಹುದು ಮತ್ತು ನಿಮ್ಮ ಜೀವನ ಸಂಗಾತಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ನಿಮ್ಮ ಜೀವನ ಸಂಗಾತಿಗೆ ಸರಿಯಾದ ಗಮನ ನೀಡಿ. ಪ್ರೇಮಿಗಳು ಒಂದಷ್ಟು ಸವಾಲುಗಳನ್ನು ಎದುರಿಸಬಹುದು. ಆದರೆ ನೀವು ಇದನ್ನು ಧೈರ್ಯದಿಂದ ನಿಭಾಯಿಸಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ತಮ್ಮ ಕೆಲಸ ಕಾರ್ಯಗಳಲ್ಲಿ ಸಂಪೂರ್ಣ ನಂಬಿಕೆ ಇರಲಿದೆ. ವ್ಯಾಪಾರೋದ್ಯಮಿಗಳಿಗೂ ಇದು ಸಕಾಲ. ಆದರೆ ವಾರದ ಆರಂಭದಲ್ಲಿ ಏನೂ ಹೊಸತನ್ನು ಪ್ರಾರಂಭಿಸಬಾರದು. ವಾರದ ಮಧ್ಯದ ದಿನಗಳು ಇದಕ್ಕೆ ಉತ್ತಮ. ವಾರದ ಮಧ್ಯ ಭಾಗವು ಪ್ರವಾಸಕ್ಕೆ ಹೋಗಲು ಅನುಕೂಲಕರ.

ಮಿಥುನ: ಇದು ನಿಮ್ಮ ಪಾಲಿಗೆ ಅತ್ಯಂತ ಫಲದಾಯಕ ವಾರ ಎನಿಸಲಿದೆ. ನಿಮ್ಮ ಕೆಲಸಕ್ಕೆ ನೀವು ಸಂಪೂರ್ಣ ಗಮನ ನೀಡಲಿದ್ದು ಇದು ನಿಮ್ಮ ದಕ್ಷತೆಯನ್ನು ವೃದ್ಧಿಸಲಿದೆ ಹಾಗೂ ನಿಮ್ಮ ಕೆಲಸಕ್ಕೆ ಪ್ರಶಂಸೆ ದೊರೆಯಲಿದೆ. ನಿಮ್ಮ ವಿರೋಧಿಗಳು ನಿಮಗೆ ಹಾನಿ ಉಂಟು ಮಾಡಲು ಸಾಧ್ಯವಾಗದು. ಬದಲಾಗಿ ನೀವು ಅವರಿಂದ ಪರೋಕ್ಷವಾಗಿ ಲಾಭ ಪಡೆಯಲಿದ್ದೀರಿ. ವಿವಾಹಿತ ಜೋಡಿಗಳು ತಮ್ಮ ಒತ್ತಡದಿಂದ ಹೊರ ಬರಲಿದ್ದಾರೆ. ಈ ವಾರದಲ್ಲಿ ನೀವಿಬ್ಬರೂ ಪರಸ್ಪರರನ್ನು ಸಂತುಷ್ಟರನ್ನಾಗಿಸಲು ಯತ್ನಿಸಲಿದ್ದೀರಿ. ಪ್ರೇಮಿಗಳು ತಮ್ಮ ಅನ್ಯೋನ್ಯ ಸಂಬಂಧದಲ್ಲಿ ತೀವ್ರತೆಯನ್ನು ಅನುಭವಿಸಲಿದ್ದಾರೆ. ಆದರೂ ಕೆಲವು ವ್ಯಕ್ತಿಗಳು ನಿಮ್ಮ ಸಂಬಂಧದ ಕುರಿತು ಅತೃಪ್ತಿ ವ್ಯಕ್ತಪಡಿಸಬಹುದು ಮತ್ತು ಅವರು ನಿಮಗೆ ಸವಾಲನ್ನು ಒಡ್ಡಬಹುದು. ವ್ಯಾಪಾರೋದ್ಯಮಿಗಳಿಗೆ ಇದು ಉತ್ತಮ ಕಾಲ. ನಿಮ್ಮ ಕೆಲಸದಲ್ಲಿ ನೀವು ಹೊಸ ಸೂತ್ರವನ್ನು ಅನ್ವಯಿಸಲಿದ್ದೀರಿ ಮತ್ತು ಇದರಲ್ಲಿ ಧನಾತ್ಮಕ ಫಲಿತಾಂಶ ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ ಹಾಗೂ ಇವರಿಗೆ ಸಾಕಷ್ಟು ತೃಪ್ತಿ ದೊರೆಯಲಿದೆ. ಶಿಕ್ಷಣದ ವಿಚಾರದಲ್ಲಿ ಈ ವಾರ ಒಟ್ಟಾರೆ ಭಾಗಶಃ ಒಳ್ಳೆಯ ಫಲ ಲಭಿಸಲಿದೆ.

ಕರ್ಕಾಟಕ: ಈ ವಾರದಲ್ಲಿ ನೀವು ಸಂಬಂಧಗಳ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಲಿದ್ದೀರಿ. ಗಾಢವಾದ ಬದ್ಧತೆಯು ಎಷ್ಟು ಅರ್ಥಗರ್ಭಿತ ಮತ್ತು ಮುರಿಯಲಾರದ ಬಂಧ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಲಿದ್ದೀರಿ. ವಾರದ ಆರಂಭದಲ್ಲಿ, ನಿಮ್ಮ ಕುಟುಂಬದ ಸಂತಸಕ್ಕಾಗಿ ಹಣ ಖರ್ಚು ಮಾಡಲಿದ್ದೀರಿ ಮತ್ತು ನಿಮ್ಮ ಗೆಳೆಯರು ಮತ್ತು ಸಂಬಂಧಿಗಳಿಗಾಗಿ ಹೆಚ್ಚು ಸಮಯ ಮೀಸಲಿಡಲಿದ್ದೀರಿ. ವೃತ್ತಿಯ ವಿಚಾರದಲ್ಲಿ ಹೇಳುವುದಾದರೆ ನಿಮ್ಮ ಕಚೇರಿ ಮತ್ತು ವ್ಯವಹಾರದ ಯೋಜನೆಗಳಲ್ಲಿ ನೀವು ಒಂದಷ್ಟು ಬದಲಾವಣೆಗಳನ್ನು ಮಾಡಬಹುದು. ಇದೆಲ್ಲದರ ಕುರಿತು ನೀವು ಪ್ರಾಯೋಗಿಕ ದೃಷ್ಟಿಕೋನದಿಂದ ಯೋಚಿಸಿದರೆ, ನೀವು ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ವಾರದ ಆರಂಭದಲ್ಲಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಆದರೆ ವಾರದ ಉತ್ತರಾರ್ಧವು ಅವರು ಹೆಚ್ಚು ಪ್ರಯೋಜನಕಾರಿ. ನಿಮ್ಮ ಆರೋಗ್ಯವನ್ನು ಕಾಪಾಡುವುದಕ್ಕಾಗಿ ನೀವು ಒತ್ತಡ ಮತ್ತು ಆತಂಕದಿಂದ ದೂರವಿರಬೇಕು.

ಸಿಂಹ: ಈ ವಾರ ನೀವು ಸಾಕಷ್ಟು ಏರುಪೇರನ್ನು ಕಾಣಲಿದ್ದೀರಿ. ವಾರದ ಆರಂಭದಲ್ಲಿ ನೀವು ಸಾಕಷ್ಟು ಕಾರ್ಯತತ್ಪರರಾಗಲಿದ್ದು, ನಿಮಗೆ ಇದು ಸಾಕಷ್ಟು ಚಿಂತೆಯನ್ನು ತಂದು ಕೊಡಲಿದೆ. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಚೆನ್ನಾಗಿ ಆನಂದಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಹಸ್ತಕ್ಷೇಪವನ್ನು ನೀವು ಹೆಚ್ಚು ಇಷ್ಟಪಡುವುದಿಲ್ಲ. ಆದರೆ ನೀವು ಒಂದಷ್ಟು ತಾಳ್ಮೆಯನ್ನು ತೋರಿಸಬೇಕು. ವಿವಾಹ ಬಂಧನಕ್ಕೆ ಒಳಪಡಲು ಇಚ್ಛಿಸುವವರು ಒಂದಷ್ಟು ಶುಭ ಸುದ್ದಿಯನ್ನು ಪಡೆಯಬಹುದು. ಪ್ರೀತಿಯ ಬಂಧನದಲ್ಲಿರುವವರಿಗೆ, ಅವರ ಪ್ರೇಮ ಸಂಗಾತಿಯು ತಮ್ಮ ಮಾತಿನಲ್ಲಿ ಕರುಣೆ ತೋರಲಿದ್ದಾರೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ ಹಾಗೂ ಖರ್ಚು ತಗ್ಗಲಿದೆ. ಹೀಗಾಗಿ ನಿಮ್ಮ ಹಣಕಾಸಿನ ಸ್ಥಿತಿಯು ದೃಢಗೊಳ್ಳಲಿದೆ. ಯಾವುದಾದರೂ ವಿಷಯದ ಕುರಿತು ಉದ್ಯೋಗಿಗಳಲ್ಲಿ ಗೊಂದಲ ಉಂಟಾಗಬಹುದು. ಇದರಿಂದ ದೂರವಿರಲು ಯತ್ನಿಸಿ. ನೀವು ಯಾವುದಾದರೂ ವ್ಯವಹಾರದಲ್ಲಿ ತೊಡಗಿದ್ದರೆ ಇದು ನಿಮ್ಮ ಆದಾಯವನ್ನು ಹೆಚ್ಚಿಸಲಿದೆ ಹಾಗೂ ನೀವು ಸರ್ಕಾರಿ ಗುತ್ತಿಗೆಗಳಿಂದ ಸಾಕಷ್ಟು ಲಾಭವನ್ನು ಗಳಿಸಬಹುದು. ಈ ವಾರವು ಕಾನೂನಿನ ಕ್ಷೇತ್ರದಲ್ಲಿ ದುಡಿಯುವವರಿಗೆ ಉತ್ತಮ ಫಲ ನೀಡಲಿದೆ.

ಕನ್ಯಾ: ಈ ವಾರದಲ್ಲಿ ನೀವು ವಿವಿಧ ರೀತಿಯ ತೊಂದರೆಗಳನ್ನು ಎದುರಿಸಲಿದ್ದೀರಿ. ವಾರದ ಆರಂಭದಲ್ಲಿ ನಿಮ್ಮ ಮಿತ್ರರೊಂದಿಗೆ ಆನಂದದಾಯಕ ಪ್ರವಾಸಕ್ಕೆ ನೀವು ಹೋಗಲಿದ್ದೀರಿ. ಆದರೆ ವಾರದ ಇತರೆ ದಿನಗಳಲ್ಲಿ ಒಂದಷ್ಟು ತೊಂದರೆಗೆ ಒಳಗಾದಂತೆ ಅಥವಾ ಆಯಾಸಗೊಂಡಂತೆ ನಿಮಗೆ ಭಾಸವಾಗಬಹುದು. ಉದ್ಯೋಗದಲ್ಲಿರುವವರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಏಕೆಂದರೆ ನಿಮ್ಮ ಸಹೋದ್ಯೋಗಿಗಳು ನಿಮ್ಮ ನ್ಯೂನ್ಯತೆಗಳನ್ನು ಕಂಡುಹಿಡಿಯಲು ಯತ್ನಿಸಲಿದ್ದಾರೆ. ಈ ವಾರವು ವ್ಯಾಪಾರೋದ್ಯಮಿಗಳಿಗೆ ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಕೌಟುಂಬಿಕ ಬದುಕು ಚೆನ್ನಾಗಿರಲಿದೆ. ಕುಟುಂಬದ ಸಣ್ಣ ಮಕ್ಕಳು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ನೀವು ಅವರ ಕಾಳಜಿ ವಹಿಸಬೇಕು ಮತ್ತು ಅವರಿಗೆ ಸಹಾಯ ಮಾಡಬೇಕು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನೀವು ಪ್ರೇಮದ ಬದುಕನ್ನು ಆನಂದಿಸಲಿದ್ದೀರಿ. ಗ್ರಹಸ್ಥರಿಗೆ ಇದು ಸಾಮಾನ್ಯ ವಾರವೆನಿಸಲಿದೆ. ವಾರದ ಆರಂಭದಲ್ಲಿ ನೀವು ಪ್ರಯಾಣಿಸಬಾರದು.

ತುಲಾ: ಡಿಸೆಂಬರ್‌ ತಿಂಗಳ ಈ ವಾರದಲ್ಲಿ ನಿಮಗೆ ಒಟ್ಟಾರೆ ಉತ್ತಮ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಕುಟುಂಬದ ಜವಾಬ್ದಾರಿಗಳಲ್ಲಿ ನೀವು ಕಾಲ ಕಳೆಯಲಿದ್ದೀರಿ ಹಾಗೂ ಕಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಾಕಷ್ಟು ಸಮಯವನ್ನು ಖರ್ಚು ಮಾಡಲಿದ್ದೀರಿ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ನೀವು ಸಮಸ್ಯೆ ಎದುರಿಸಲಿದ್ದೀರಿ. ನಿಮ್ಮ ಕೆಲಸದ ವೇಗವನ್ನು ನೀವು ಹೆಚ್ಚಿಸಲಿದ್ದು ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನೀವು ಉತ್ತಮ ಆರೋಗ್ಯವನ್ನು ಅನುಭವಿಸಲಿದ್ದೀರಿ. ನೀವು ಕುಟುಂಬದ ಬೆಂಬಲವನ್ನು ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಇದು ಸಕಾಲ. ಪ್ರೇಮಿಗಳಿಗೂ ಇದು ಸಕಾಲ. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಉತ್ತಮವಾಗಿ ಆನಂದಿಸಲಿದ್ದಾರೆ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟು ನಿಮ್ಮ ಕೆಲಸವನ್ನು ನೀವು ಮುಂದುವರಿಸಬೇಕು ಮತ್ತು ಸವಾಲುಗಳನ್ನು ದಿಟ್ಟತನದಿಂದ ಎದುರಿಸಬೇಕು.

ವೃಶ್ಚಿಕ: ಕುಟುಂಬದಲ್ಲಿ ನೀವು ಒಂದಷ್ಟು ಶುಭ ಸುದ್ದಿ ಪಡೆಯಲಿದ್ದೀರಿ. ನಿಮ್ಮ ಕುಟುಂಬದಲ್ಲಿ ಯಾವುದಾದರೂ ವ್ಯಕ್ತಿಯ ವಿವಾಹ ನಿಶ್ಚಯವಾಗಲಿದೆ. ಇದಕ್ಕಾಗಿ ಇಡೀ ಕುಟುಂಬವು ಪೂರ್ವತಯಾರಿಯನ್ನು ಪ್ರಾರಂಭಿಸಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ಆತ್ಮವಿಶ್ವಾಸವು ವೃದ್ಧಿಸಲಿದೆ. ಇದರಿಂದಾಗಿ ಕೆಲಸದಲ್ಲಿ ಯಶಸ್ಸು ದೊರೆಯಲಿದೆ. ವಾರದ ಮಧ್ಯ ಭಾಗದಲ್ಲಿ ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಸಣ್ಣ ಪ್ರವಾಸಗಳು ದೊಡ್ಡ ಪ್ರಮಾಣದಲ್ಲಿ ನಿಮ್ಮ ನೆರವಿಗೆ ಬರಲಿವೆ. ನೀವು ಹೊಸ ಗೆಳೆಯರನ್ನು ಪಡೆಯಬಹುದು. ನೀವು ಅವರೊಂದಿಗೆ ಸಮಯ ಕಳೆಯುವುದನ್ನು ಇಷ್ಟಪಡಲಿದ್ದೀರಿ. ನೀವು ನಿಮ್ಮ ಹಿರಿಯರ ಆಶೀರ್ವಾದವನ್ನು ಪಡೆಯಲಿದ್ದೀರಿ. ಪ್ರೇಮಿಗಳ ವಿಚಾರದಲ್ಲಿ ಹೇಳುವುದಾದರೆ, ನೀವು ನಿಮ್ಮ ಪ್ರಣಯ ಸಂಗಾತಿಯನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಪರಿಚಯಿಸಬಹುದು. ವಿವಾಹಿತ ಜೋಡಿಗಳು ತಮ್ಮ ವರ್ತನೆಯ ಕುರಿತು ಎಚ್ಚರಿಕೆ ವಹಿಸಬೇಕು. ಈ ವಿಷಯದಲ್ಲಿ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು. ಕುಟುಂಬದಲ್ಲಿ ಸಂತಸ ಮತ್ತು ಪ್ರೇಮ ಇಮ್ಮಡಿಗೊಳ್ಳಲಿದೆ ಹಾಗೂ ನಿಮ್ಮ ಗಳಿಕೆಯಲ್ಲೂ ಹೆಚ್ಚಳ ಉಂಟಾಗಲಿದೆ. ಹೀಗೆ ನಿಮ್ಮ ಬ್ಯಾಂಕಿನ ಮೊತ್ತದಲ್ಲಿಯೂ ಹೆಚ್ಚಳ ಉಂಟಾಗಲಿದೆ.

ಧನು: ಈ ವಾರ ನಿಮಗೆ ಅದ್ಭುತ ಫಲ ದೊರೆಯಲಿದೆ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ ಹಾಗೂ ಆರೋಗ್ಯದಲ್ಲೂ ಸುಧಾರಣೆ ಉಂಟಾಗಲಿದೆ. ಖರ್ಚುವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದ್ದು ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲಿದೆ. ನೀವು ಆಂತರಿಕ ಸಂತಸವನ್ನು ಅನುಭವಿಸಲಿದ್ದು ಇತರರನ್ನೂ ಸಂತಸದಿಂದ ನೋಡಿಕೊಳ್ಳಲಿದ್ದೀರಿ. ಇದು ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತಸವನ್ನು ಹೆಚ್ಚಿಸಬಹುದು. ನಿಮ್ಮ ಮತ್ತು ನಿಮ್ಮ ಬಾಳ ಸಂಗಾತಿಯ ನಡುವೆ ಸಾಕಷ್ಟು ಆಕರ್ಷಣೆ ಮತ್ತು ಅನ್ಯೋನ್ಯತೆ ಇರಲಿದೆ. ಪ್ರೇಮಿಗಳಿಗೆ ಇದು ಸಕಾಲ. ಆದರೂ ನಿಮ್ಮ ಜೀವನ ಸಂಗಾತಿ ಕಾಯಿಲೆಗೆ ಒಳಗಾಗಬಹುದು. ಹೀಗಾಗಿ ನೀವು ಅವರ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಅಲ್ಲದೆ, ನೀವು ನಿಮ್ಮ ವಿರೋಧಿಗಳನ್ನು ಮೀರಿಸಲಿದ್ದೀರಿ. ಉದ್ಯೋಗದಲ್ಲಿರುವವರು ಒಂದಷ್ಟು ಸವಾಲುಗಳನ್ನು ಎದುರಿಸಬಹುದು. ವ್ಯಾಪಾರೋದ್ಯಮಿಗಳು ಮಾರುಕಟ್ಟೆಯ ಒಳನೋಟವನ್ನು ಅರಿತುಕೊಂಡು ಮುಂದುವರಿಯುವ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ಇಡೀ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ಮಕರ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನೀವು ಉತ್ತಮ ಕ್ಷಣಗಳು ಮತ್ತು ಪ್ರೇಮದ ಬದುಕನ್ನು ಆನಂದಿಸಲಿದ್ದೀರಿ. ಹೊಸ ಗೆಳೆಯರನ್ನು ಸಂಪಾದಿಸಲು ನಿಮಗೆ ಅವಕಾಶ ದೊರೆಯಲಿದೆ. ನಿಮ್ಮ ಸಾಮಾಜಿಕ ವರ್ತುಲವು ಬೆಳೆಯಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಹಳೆಯ ಸಮಸ್ಯೆಗಳಿಂದ ನಿಮಗೆ ಮುಕ್ತಿ ದೊರೆಯಲಿದೆ. ಆದರೆ ನಿಮ್ಮ ಆಹಾರದ ಕುರಿತು ನೀವು ಎಚ್ಚರಿಕೆ ವಹಿಸಬೇಕು ಮತ್ತು ನಿರ್ಲಕ್ಷ್ಯ ತೋರಬಾರದು. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನೀವು ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧಿಸಲಿದ್ದೀರಿ. ಪ್ರೇಮಿಗಳಿಗೆ ಇದು ಸಕಾಲ. ನಿಮ್ಮ ಜೀವನ ಸಂಗಾತಿಯ ವೈಯಕ್ತಿಕ ವಿಚಾರದಲ್ಲಿ ನೀವು ಹೆಚ್ಚಿನ ಹಸ್ತಕ್ಷೇಪ ಮಾಡಬಾರದು. ವಿವಾಹಿತ ವ್ಯಕ್ತಿಗಳು ಸಹ ಬದುಕನ್ನು ಚೆನ್ನಾಗಿ ಆನಂದಿಸಲಿದ್ದಾರೆ. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಕುಂಭ: ಇದು ನಿಮ್ಮ ಪಾಲಿಗೆ ಉತ್ತಮ ವಾರ ಎನಿಸಲಿದೆ. ವಾರದ ಆರಂಭದಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ ಹಾಗೂ ಇದೇ ವೇಳೆ ನಿಮ್ಮ ಖರ್ಚುವೆಚ್ಚಗಳಲ್ಲಿ ಕುಸಿತ ಉಂಟಾಗಲಿದೆ. ಹೀಗಾಗಿ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ನೀವು ನಿಮ್ಮ ಕೆಲಸದಲ್ಲಿ ಹೆಚ್ಚು ಶಕ್ತಿ ಪಡೆಯಲಿದ್ದೀರಿ. ಬಾಕಿ ಇರುವ ನಿಮ್ಮ ಯೋಜನೆಗಳು ಕಾರ್ಯಗತಗೊಳ್ಳಬಹುದು. ನಿಮ್ಮಲ್ಲಿ ಕೆಲವರು ವಿದೇಶಕ್ಕೆ ಹೋಗಬಹುದು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಜ್ಞಾನದ ಕುರಿತು ಮೆಚ್ಚುಗೆ ವ್ಯಕ್ತವಾಗಲಿದೆ. ಗ್ರಹಸ್ಥ ಜೀವನದಲ್ಲಿರುವ ಜನರ ಸಂಬಂಧದಲ್ಲಿ ಪ್ರೀತಿ ಮತ್ತು ಅನ್ಯೋನ್ಯತೆಯು ಹೆಚ್ಚಲಿದೆ. ಕುಟುಂಬದಲ್ಲಿ ನೀವು ಹೊಸ ಅತಿಥಿಯನ್ನು ಪಡೆಯಲಿದ್ದೀರಿ. ಈ ವಾರವು ಪ್ರೇಮಿಗಳ ಪಾಲಿಗೆ ಅತ್ಯುತ್ತಮವೆನಿಸಲಿದೆ. ನಿಮ್ಮ ಪ್ರೇಮ ಸಂಗಾತಿಯನ್ನು ಮೆಚ್ಚಿಸುವಲ್ಲಿ ನಿಮ್ಮ ಕಲಾತ್ಮಕ ಪ್ರತಿಭೆಯು ಪ್ರಯೋಜನಕ್ಕೆ ಬರಲಿದೆ ಹಾಗೂ ನೀವು ಅವರಿಗೆ ಒಳ್ಳೆಯ ಉಡುಗೊರೆಯನ್ನು ನೀಡಬಹುದು. ಉದ್ಯೋಗದಲ್ಲಿರುವವರಿಗೆ ಇದು ಸಕಾಲ. ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ದೊರೆಯಲಿದೆ. ಇದು ನಿಮ್ಮ ವರ್ಚಸ್ಸನ್ನು ಬಲಪಡಿಸಲಿದೆ ಹಾಗೂ ಕೆಲಸದಲ್ಲಿ ಉತ್ತಮ ದಕ್ಷತೆ ಒದಗಿಸಲಿದೆ.

ಮೀನ: ಈ ವಾರ ನಿಮಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಕೆಲಸಕ್ಕೆ ನೀವು ಸಂಪೂರ್ಣ ಗಮನ ನೀಡಲಿದ್ದೀರಿ ಹಾಗೂ ನಿಮ್ಮ ಕೆಲಸದಲ್ಲಿ ಯಾರಿಗೂ ನ್ಯೂನ್ಯತೆಯನ್ನು ಕಂಡುಹಿಡಿಯಲು ಆಗದು. ನಿಮ್ಮ ಕೆಲಸವನ್ನು ನೀವು ಸಕಾಲದಲ್ಲಿ ಹಾಗೂ ಅದ್ಭುತವಾಗಿ ಪೂರ್ಣಗೊಳಿಸಲಿದ್ದೀರಿ. ವ್ಯಾಪಾರೋದ್ಯಮಿಗಳು ಒಂದಷ್ಟು ಭರವಸೆಯ ಸುದ್ದಿಯನ್ನು ಪಡೆಯಬಹುದು. ಸಾಮಾಜಿಕ ಮಾಧ್ಯಮ ಅಭಿಯಾನದ ಮೂಲಕ ನೀವು ದೊಡ್ಡ ಮಟ್ಟದ ಲಾಭವನ್ನು ಪಡೆಯಬಹುದು. ಆದರೆ ಗಳಿಕೆಯು ಸಾಧಾರಣ ಮಟ್ಟದಲ್ಲಿರಲಿದೆ. ಖರ್ಚು ವೆಚ್ಚಗಳು ಸಹ ಸಾಧಾರಣ ಮಟ್ಟದಲ್ಲಿಯೇ ಇರಲಿವೆ. ನಿಮ್ಮ ಆರೋಗ್ಯದ ಕುರಿತು ಸಾಕಷ್ಟು ಕಾಳಜಿ ವಹಿಸಿ. ನಿಮ್ಮ ಆಹಾರದ ಕಡೆಗೆ ಹೆಚ್ಚಿನ ಗಮನ ನೀಡಿ. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಕೆಲಸದಲ್ಲಿ ನಿಮಗೆ ಸಹಾಯ ಮಾಡಲಿದ್ದಾರೆ. ನಿಮ್ಮ ಸಹೋದ್ಯೋಗಿಗಳಿಂದ ನೀವು ಕೆಲವೊಂದು ಒಳ್ಳೆಯ ವಿಚಾರಗಳನ್ನು ಕೇಳಲಿದ್ದೀರಿ. ಪ್ರೇಮಿಗಳು ಒಂದಷ್ಟು ಭರವಸೆಯ ಸುದ್ದಿಯನ್ನು ಪಡೆಯಬಹುದು. ವಿವಾಹಿತರು ತಮ್ಮ ಸಂಗಾತಿಯನ್ನು ಸಂಪೂರ್ಣವಾಗಿ ಸಂತಸದಿಂದ ನೋಡಿಕೊಳ್ಳಲಿದ್ದಾರೆ. ವಾರದ ಮಧ್ಯಭಾಗವು ಪ್ರಯಾಣಿಸುವುದಕ್ಕೆ ಅನುಕೂಲಕರ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.