ಇಂದಿನ ಪಂಚಾಂಗ:
ದಿನಾಂಕ : 10-11-2023, ಶುಕ್ರವಾರ
ಸಂವತ್ಸರ : ಶುಭಕೃತ್
ಆಯನ: ದಕ್ಷಿಣಾಯಣ
ಋತು: ಹೇಮಂತ
ಮಾಸ: ಅಶ್ವಿನ್
ಪಕ್ಷ: ಕೃಷ್ಣ
ತಿಥಿ: ದ್ವಾದಶಿ
ನಕ್ಷತ್ರ: ಹಸ್ತ
ಸೂರ್ಯೋದಯ: ಮುಂಜಾನೆ 06:15 ಗಂಟೆಗೆ
ಅಮೃತಕಾಲ: ಬೆಳಗ್ಗೆ 07:41ರಿಂದ 09:08 ಗಂಟೆ ತನಕ
ವರ್ಜ್ಯಂ : ಸಂಜೆ 06:15ರಿಂದ 07:50 ಗಂಟೆವರೆಗೆ
ದುರ್ಮುಹೂರ್ತ: ಬೆಳಗ್ಗೆ 8:39 ರಿಂದ 9:27 ಗಂಟೆ ಹಾಗೂ ಮಧ್ಯಾಹ್ನ 3:03ರಿಂದ 3:51ರ ತನಕ
ರಾಹುಕಾಲ: ಬೆಳಗ್ಗೆ 10:35 ರಿಂದ 12:01 ಗಂಟೆವರೆಗೆ
ಸೂರ್ಯಾಸ್ತ: ಸಂಜೆ 05:48 ಗಂಟೆಗೆ
ಇಂದಿನ ರಾಶಿ ಭವಿಷ್ಯ:
ಮೇಷ : ನೀವು ಇಂದು ಪ್ರತ್ಯೇಕವಾಗಿ ಉಳಿಯಲು ಬಯಸುತ್ತೀರಿ. ನೀವು ಹಾಕುವ ಪ್ರಯತ್ನಗಳಿಗೆ ನೀವು ಇತರರಿಂದ ಪ್ರಶಂಸೆ ಪಡೆಯುತ್ತೀರಿ, ಆದರೆ ನೀವು ನಿಮ್ಮ ಪರಿಣಿತಿಯನ್ನು ನಿಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಕು. ಇಂದು ಬಜೆಟ್ ಕುರಿತು ಕಠಿಣ ನಿಯಂತ್ರಣ ಅನುಕೂಲಕರವಾಗುತ್ತದೆ.
ವೃಷಭ : ನೀವು ಇಂದು ನಿಮ್ಮ ವ್ಯವಹಾರಗಳನ್ನು ನಿಭಾಯಿಸುವಾಗ ಅತ್ಯಂತ ಯೋಜಿತ ಮತ್ತು ಸಮತೋಲಿತ ಮತ್ತು ಪ್ರಾಯೋಗಿಕವಾಗಿರುತ್ತೀರಿ. ನೀವು ಪರಿಸ್ಥಿತಿಗೆ ಅನುಗುಣವಾಗಿ ಅತ್ಯುತ್ತಮ ಕಾರ್ಯತಂತ್ರ, ಕ್ರಿಯಾಯೋಜನೆ ರೂಪಿಸುವಲ್ಲಿ ಸಮರ್ಥರಾಗುತ್ತೀರಿ. ಈ ದಿನ ನೀವು ಸ್ಪೆಷಲಿಸ್ಟ್, ನೈಜ ತಜ್ಞನಂತೆ ಕೆಲಸ ಮಾಡುತ್ತೀರಿ ಮತ್ತು ನೀವು ಏನು ಮಾಡಬೇಕೆಂದಿರುವಿರೋ ಅದನ್ನು ಈಡೇರಿಸುವಲ್ಲಿ ವಿಫಲರಾಗುವುದಿಲ್ಲ.
ಮಿಥುನ : ಇಂದು ಮನೆಯಲ್ಲಿ ಆನಂದ, ಸಂತೋಷ ಮತ್ತು ಹಬ್ಬಗಳ ದಿನವಾಗಿದೆ. ನೀವು ಮಕ್ಕಳೊಂದಿಗೆ ಎಷ್ಟು ಸಾಧ್ಯವೋ ಅಷ್ಟು ಸಮಯ ಕಳೆಯಲು ಪ್ರಯತ್ನಿಸುತ್ತೀರಿ ಮತ್ತು ಗೃಹ ಸುಧಾರಣೆ ಯೋಜನೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತೀರಿ. ಮನೆಯಲ್ಲಿ ಬಾಕಿ ಇರುವ ಸಮಸ್ಯೆಗಳನ್ನು ಅವುಗಳ ಕುರಿತು ಜಾಣ್ಮೆ ವಹಿಸುವುದರಿಂದ ಪರಿಹರಿಸುತ್ತೀರಿ.
ಕರ್ಕಾಟಕ : ಇಂದು ಪ್ರೀತಿಯ ದಿನವಾಗಿದೆ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಶಾಪಿಂಗ್ ಮಾಡುತ್ತೀರಿ. ನೀವು ಅವರ ಎಲ್ಲ ಬಿಲ್ ಗಳನ್ನೂ ಪಾವತಿಸಬೇಕಾಗಬಹುದು ಆದರೆ ಅವರೊಂದಿಗೆ ಇರುವುದು ಅದಕ್ಕೆ ತಕ್ಕುದಾದ ಅರ್ಹತೆ. ನಿಮ್ಮ ಪ್ರಯತ್ನಗಳಿಂದ ನಿಮ್ಮ ಪ್ರಿಯತಮೆ ಅತ್ಯಂತ ಸಂತೋಷಗೊಳ್ಳುತ್ತಾರೆ ಮತ್ತು ಆದ್ದರಿಂದ ಅದನ್ನು ಹತ್ತುಪಟ್ಟು ಹಿಂದಿರುಗಿಸಲು ಬಯಸುತ್ತಾರೆ.
ಸಿಂಹ : ಇಂದು ನಿಮಗೆ ಸೂಕ್ತವಾದ ದಿನವಲ್ಲ. ಇಂದು ವಿಷಯಗಳು ನಿಯಂತ್ರಣ ಮೀರಿ ಹೋಗುತ್ತವೆ. ಆದಾಗ್ಯೂ, ನಿಮ್ಮ ಅತ್ಯುತ್ತಮವಾದುದನ್ನು ನೀಡಿರಿ, ಕಠಿಣ ಪರಿಶ್ರಮ ಎಂದಿಗೂ ಫಲ ನೀಡುತ್ತದೆ. ನೀವು ಇಂದು ನಿಮ್ಮ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ಈ ದಿನ ಸಂತೃಪ್ತಿಕರವಾಗಿ ಪೂರ್ಣಗೊಳ್ಳಬಹುದು.
ಕನ್ಯಾ : ನಿಮ್ಮ ಸುತ್ತಲೂ ಇರುವವರು ನಿಮ್ಮನ್ನು ಶ್ಲಾಘಿಸುತ್ತಾರೆ ಮತ್ತು ಸ್ಫೂರ್ತಿ ಹೊಂದುತ್ತಾರೆ. ನಿಮ್ಮ ಬುದ್ಧಿಶಕ್ತಿ ಮತ್ತು ಹೊಂದಿಕೊಳ್ಳುವಿಕೆ ಬಹಳಷ್ಟು ಮಂದಿಗೆ ಪ್ರೇರೇಪಣೆಯ ಅಂಶವಾಗುತ್ತದೆ. ನಿಮ್ಮ ಪ್ರೀತಿಯ ಜೀವನ ಕುರಿತಂತೆ ನೀವು ಆಶ್ಚರ್ಯದಲ್ಲಿರಬಹುದು. ಪ್ರೀತಿಯಲ್ಲಿರುವವರಿಗೆ ಏನೋ ಮಹತ್ತರವಾದುದು ಕಾಯುತ್ತಿದೆ. ಇಂದು ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತೀರಿ. ನಿಮ್ಮ ಕುಟುಂಬದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಿ ಮತ್ತು ಜವಾಬ್ದಾರಿಗಳು ಅಥವಾ ಆಚರಣೆಗಳಿಗೆ ಬಂದರೆ ಸಂಪೂರ್ಣವಾಗಿ ಭಾಗವಹಿಸಿ.
ತುಲಾ : ನೀವು ಇಂದು ಪ್ರಖರ ದಿನವನ್ನು ಬಯಸಿದರೂ ಮಂದವಾದ ದಿನವಾಗಿದೆ. ಶಾಂತವಾಗಿರಿ ಮತ್ತು ಯಾವುದೇ ಋಣಾತ್ಮಕ ಆಲೋಚನೆಗಳಲ್ಲಿ ತೊಡಗಿಕೊಳ್ಳದಿರಿ. ಒಳ್ಳೆಯ ಹೋರಾಟ ನಡೆಸಿದರೆ ವಿಷಯಗಳು ನಿಮಗೆ ಪೂರಕವಾಗಿ ಕೆಲಸ ಮಾಡುತ್ತವೆ. ಇದು ತೀವ್ರವೆನಿಸಿದರೂ ಶಾಂತ ಮತ್ತು ಸಂತೋಷದ ಸಂಜೆ ನಿಮಗೆ ಕಾದಿದೆ. ನಿಮ್ಮ ವೈಯಕ್ತಿಕ ಜೀವನವು ನಿಮ್ಮ ಪ್ರೀತಿಪಾತ್ರರೊಂದಿಗೆ ಆತ್ಮೀಯ ಚರ್ಚೆಗೆ ಅವಕಾಶ ನೀಡುತ್ತದೆ.
ವೃಶ್ಚಿಕ : ಜೀವನ ಎನ್ನುವುದು ರೋಲರ್-ಕೋಸ್ಟರ್ ಆಗಿದ್ದು ನಿಮ್ಮನ್ನು ಏರಿಳಿತಗಳಿಗೆ ಕೊಂಡೊಯ್ಯುತ್ತದೆ. ಇಂದು ಅಂತಹ ಒಂದು ದಿನ. ನೀವು ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಉಳಿವಿನ ತಂತ್ರಗಳನ್ನು ಕಲಿಯಬಹುದು. ನಿಮ್ಮ ತೀವ್ರ ಆಸಕ್ತಿ ಈರ್ಷ್ಯೆಯನ್ನು ಆಹ್ವಾನಿಸಬಹುದು ಆದರೆ ಯಾವುದೂ ನಿಮ್ಮನ್ನು ಬಾಧಿಸಬಾರದು. ನೀವು ಇಂದು ತಪ್ಪಾದ ಕುದುರೆಯ ಮೇಲೆ ಬಾಜಿ ಕಟ್ಟಿದ್ದೀರಿ, ಆದರೆ ಮನುಷ್ಯರು ಮಾತ್ರ ಕೆಲ ತಪ್ಪುಗಳನ್ನು ಮಾಡುತ್ತಾರೆ.
ಧನು : ನಿಮ್ಮ ದಿನ ಸಂಪೂರ್ಣವಾಗಿ ವ್ಯಾಪಾರ ಪಾಲುದಾರರು ಮತ್ತು ಗ್ರಾಹಕರೊಂದಿಗೆ ಸಭೆಗಳೊಂದಿಗೆ ಕೂಡಿರುತ್ತದೆ. ನಿಮ್ಮ ತಾಳ್ಮೆ ನಿಮಗೆ ಅನುಕೂಲಕರವಾಗಿ ಕೆಲಸ ಮಾಡುತ್ತದೆ ಮತ್ತು ನೀವು ನಿಮಗೆ ನೀಡಲಾಗುವ ಪ್ರತಿ ಸಲಹೆಯನ್ನೂ ಆಲಿಸುತ್ತೀರಿ. ಆದ್ದರಿಂದ, ನೀವು ಇಂದು ಅತ್ಯಂತ ದಕ್ಷ ಹಾಗೂ ಉತ್ಪಾದಕರಾಗಿರುತ್ತೀರಿ.
ಮಕರ : ಇಂದು ನಿಮ್ಮ ಸೂಕ್ತವಾದ ವ್ಯಕ್ತಿಯನ್ನು ಭೇಟಿಯಾಗುವ ಅತ್ಯಂತ ಹೆಚ್ಚಿನ ಸಾಧ್ಯತೆ ಇದೆ. ನೀವು ಅವರಿಗೆ ನಿಮ್ಮ ಪ್ರೀತಿ ಮತ್ತು ಮಮತೆಯನ್ನು ವ್ಯಕ್ತಪಡಿಸುತ್ತೀರಿ. ನೀವು ಕುಟುಂಬ ಹೊಂದುವ ಮಹತ್ವವನ್ನು ಅರ್ಥ ಮಾಡಿಕೊಳ್ಳುತ್ತೀರಿ, ಅದನ್ನು ಇಂದು ಹೆಚ್ಚು ಅಭಿವ್ಯಕ್ತಿಸುತ್ತೀರಿ. ನೀವು ಹತ್ತುಪಟ್ಟು ಹೆಚ್ಚು ಪ್ರೀತಿಯನ್ನು ಪಡೆಯುತ್ತೀರಿ.
ಕುಂಭ : ಇದು ನಿಮ್ಮೊಂದಿಗೆ ಇರುವ ಮತ್ತು ನಿಮ್ಮನ್ನು ಪ್ರತಿಫಲಿಸುವ ದಿನವಾಗಿದೆ. ನೀವು ಇಂದು ಅನಿರೀಕ್ಷಿತ ಸನ್ನಿವೇಶಗಳೊಂದಿಗೆ ವ್ಯವಹರಿಸಬೇಕಾಗಬಹುದು, ಆದ್ದರಿಂದ ನಿಮ್ಮ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟಾಗುತ್ತದೆ. ಆದರೆ, ಸದೃಢ ಹೆಜ್ಜೆ ಇರಿಸುವುದು ನಿಮ್ಮಲ್ಲಿನ ನಿಷ್ಠೆಯ ಮತ್ತು ಕಠಿಣ ನಿರ್ಧಾರದ ಭಾಗವನ್ನು ಹೊರತರುತ್ತದೆ.
ಮೀನ : ನಿಮಗೆ ತಂಡವೊಂದರ ಭಾಗವಾಗಲು ಮತ್ತು ಎರಡು ತಂಡಗಳ ಸದಸ್ಯರಾಗಿ ಕೆಲಸ ಮಾಡುವುದು ಕಷ್ಟ, ಆದರೆ, ಇಂದು ನಿಮಗೆ ಏನೆನ್ನಿಸುತ್ತದೋ ಅದನ್ನು ಮಾಡಲು ಸಾಧ್ಯವಾಗುತ್ತದೆ. ನೀವು ನಿಮ್ಮ ಪರಿಣಿತಿಯನ್ನು ನಿಮ್ಮ ತಂಡಕ್ಕೆ ಇಂದು ಪ್ರದರ್ಶಿಸಲು ಸಮರ್ಥರಾಗುತ್ತೀರಿ ಮತ್ತು ಅದಕ್ಕೆ ಎಲ್ಲರಿಂದ ಪ್ರಶಂಸೆ ಪಡೆಯುತ್ತೀರಿ. ಮಹಿಳೆಯರು ಇಂದು ಲಾಭ ಮಾಡುತ್ತಾರೆ ಮತ್ತು ಉತ್ತೇಜನದ ಭಾವನೆ ಹೊಂದುತ್ತಾರೆ.