ETV Bharat / bharat

ತಪ್ಪಿಸಿಕೊಂಡಿದ್ದ ನಮೀಬಿಯಾದ ಚಿರತೆ 'ಒಬಾನ್' ರಕ್ಷಣೆ

ತಪ್ಪಿಸಿಕೊಂಡ ಐದು ದಿನಗಳ ನಂತರ 'ಒಬಾನ್' ಎಂಬ ನಮೀಬಿಯಾ ಗಂಡು ಚಿರತೆಯನ್ನು ರಕ್ಷಿಸಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದೆ.

Namibian cheetah Oban
ನಮೀಬಿಯಾದ ಚಿರತೆ ಒಬಾನ್‌
author img

By

Published : Apr 7, 2023, 1:33 PM IST

ಶಿಯೋಪುರ್ (ಮಧ್ಯಪ್ರದೇಶ): ಕುನೋ ರಾಷ್ಟ್ರೀಯ ಉದ್ಯಾನವನದಿಂದ ತಪ್ಪಿಸಿಕೊಂಡು ಹಳ್ಳಿಯೊಂದರಲ್ಲಿ ಕಾಣಿಸಿಕೊಂಡಿದ್ದ ಗಂಡು ಚಿರತೆಯನ್ನು ಗುರುವಾರ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಯಿತು. ನಮೀಬಿಯಾದ ಗಂಡು ಚಿರತೆಗಳಲ್ಲಿ ಒಂದಾದ 'ಒಬಾನ್' ಕುನೋ ರಾಷ್ಟ್ರೀಯ ಉದ್ಯಾನವನದ ಗಡಿಯಿಂದ ತಪ್ಪಿಸಿಕೊಂಡಿತ್ತು. ಐದು ದಿನಗಳ ಹಿಂದೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಸಮೀಪದ ಹಳ್ಳಿಯೊಂದರಲ್ಲಿ ಕಾಣಿಸಿಕೊಂಡಿತ್ತು. ಅದನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಮರಳಿ ತರಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ನಮೀಬಿಯಾ ಚಿರತೆಯನ್ನು ಗುರುವಾರ ಸಂಜೆ ಶಿವಪುರಿ ಜಿಲ್ಲೆಯ ಅರಣ್ಯದಿಂದ ರಕ್ಷಿಸಲಾಗಿದೆ. "ಶಿವಪುರಿ ಜಿಲ್ಲೆಯ ಗಡಿಯಲ್ಲಿರುವ ಬೈರಾದ್ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶದಿಂದ ಸಂಜೆ 4-5 ರ ಸುಮಾರಿಗೆ ಒಬಾನ್ ಸಿಕ್ಕಿಬಿದ್ದಿದ್ದು, ಕುನೋ ರಾಷ್ಟ್ರೀಯ ಉದ್ಯಾನದ ಪಾಲ್ಪುರ ಅರಣ್ಯಕ್ಕೆ ಬಿಡಲಾಗಿದೆ" ಎಂದು ಕುನೋ ವನ್ಯಜೀವಿ ವಿಭಾಗದ ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಕಾಡಿಗೆ ಬಿಡುಗಡೆಯಾದ ನಾಲ್ಕು ನಮೀಬಿಯಾದ ಚಿರತೆಗಳಲ್ಲಿ 'ಒಬಾನ್' ಕೂಡ ಒಂದು. ಆಶಾ ಎಂಬ ಹೆಣ್ಣು ಚಿರತೆಯ ಜತೆಗೆ ಅದನ್ನು ಕಾಡಿಗೆ ಬಿಡಲಾಯಿತು. ನಂತರ, ಎಲ್ಟನ್ ಮತ್ತು ಫ್ರೆಡ್ಡಿ ಎಂಬ ಎರಡು ಗಂಡು ಚಿರತೆಗಳನ್ನು ಸಹ ಯಶಸ್ವಿಯಾಗಿ ಬಿಡುಗಡೆ ಮಾಡಲಾಯಿತು. ಆದರೆ 'ಒಬಾನ್' ಕುನೋ ರಾಷ್ಟ್ರೀಯ ಉದ್ಯಾನವನದಿಂದ ದಾರಿ ತಪ್ಪಿ ಏ.2 ರಂದು ಝಾರ್ ಬರೋಡಾ ಗ್ರಾಮವನ್ನು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ರಾಷ್ಟ್ರೀಯ ಉದ್ಯಾನದಿಂದ ಸುಮಾರು 20 ಕಿ.ಮೀ ದೂರದಲ್ಲಿ ಇದರ ಮೇಲೆ ನಿಗಾ ಇಡಲಾಗಿದೆ. ನಾಲ್ಕು ದಿನಗಳ ನಂತರವೂ ಓಬಾನ್ ರಾಷ್ಟ್ರೀಯ ಉದ್ಯಾನಕ್ಕೆ ಹಿಂತಿರುಗುವ ಯಾವುದೇ ಲಕ್ಷಣಗಳು ಗೋಚರಿಸಲಿಲ್ಲ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ರಕ್ಷಿಸಲು ಕಾರ್ಯಾಚರಣೆ ಪ್ರಾರಂಭಿಸಿದರು.

ಗುರುವಾರ ಕುನೋ ರಾಷ್ಟ್ರೀಯ ಉದ್ಯಾನದ ಗಡಿಯ ಹೊರಗೆ 'ಒಬಾನ್' ಪತ್ತೆ ಹಚ್ಚಲಾಯಿತು. ಶಿವಪುರಿ ಜಿಲ್ಲೆಯ ಗಡಿಯಲ್ಲಿರುವ ಕಾಡಿನಲ್ಲಿ ಚಿರತೆ ಅಲೆದಾಡುತ್ತಿತ್ತು. ಅದರ ಸ್ಥಳವನ್ನು ಆಧರಿಸಿ, ಚಿರತೆಯ ನಿಗಾ ತಂಡ ರಕ್ಷಿಸಿದೆ ಎಂದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಸೆ.17 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದ 8 ಚಿರತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು. 1952ರಲ್ಲಿ ಭಾರತದಲ್ಲಿ ಈ ಚಿರತೆ ಸಂತತಿ ನಾಶವಾಗಿತ್ತು. ಪ್ರಾಜೆಕ್ಟ್ ಚೀತಾ ಮತ್ತು ದೇಶದ ವನ್ಯಜೀವಿ ಮತ್ತು ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸಲು ಮತ್ತು ವೈವಿಧ್ಯಗೊಳಿಸಲು ಸರ್ಕಾರದ ಪ್ರಯತ್ನದ ಫಲವಾಗಿ 8 ಚಿರತೆಗಳನ್ನು (5 ಹೆಣ್ಣು ಮತ್ತು 3 ಗಂಡು) ಆಫ್ರಿಕಾದ ನಮೀಬಿಯಾದಿಂದ ದೇಶಕ್ಕೆ ತರಲಾಗಿತ್ತು.

70 ವರ್ಷಗಳ ಬಳಿಕ ಚಿರತೆಗಳು ಭಾರತದ ನೆಲಕ್ಕೆ ಮರಳಿದ್ದವು. 2 ಬ್ಯಾಚ್‌ಗಳಲ್ಲಿ ಒಟ್ಟು 20 ಚಿರತೆಗಳು ಭಾರತಕ್ಕೆ ಬಂದಿವೆ. ನಮೀಬಿಯಾದಿಂದ 8 ಚಿರತೆಗಳ ಮೊದಲ ಬ್ಯಾಚ್ ಸೆ.2022 ರಲ್ಲಿ ಬಂದಿದ್ದವು. ದಕ್ಷಿಣ ಆಫ್ರಿಕಾದಿಂದ ಫೆಬ್ರವರಿಯಲ್ಲಿ 2ನೇ ಬ್ಯಾಚ್ ನಲ್ಲಿ 12 ಚಿರತೆಗಳನ್ನು ಭಾರತಕ್ಕೆ ತರಲಾಗಿದೆ.

ಇದನ್ನೂ ಓದಿ: ಕುನೋ ಅಭಯಾರಣ್ಯದಿಂದ ತಪ್ಪಿಸಿಕೊಂಡ ಹೆಣ್ಣು ಚಿರತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.