ETV Bharat / bharat

ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಉಪಟಳ: ಕಡಿಮೆ ತೀವ್ರತೆಯ ಸ್ಫೋಟ, ಓರ್ವ ಉಗ್ರನ ಹತ್ಯೆ

author img

By

Published : Oct 27, 2022, 6:15 PM IST

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್​ ಜಿಲ್ಲೆಯಲ್ಲಿ ನಡೆದ ಎನ್​ಕೌಂಟರ್​​ನಲ್ಲಿ ಓರ್ವ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಸದೆಬಡೆದಿವೆ.

encounter-in-kulgam-district-one-terrorist-killed
ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಉಪಟಳ: ಕಡಿಮೆ ತೀವ್ರತೆಯ ಸ್ಫೋಟ, ಓರ್ವ ಉಗ್ರನ ಸದೆಬಡಿದ ಸೇನೆ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಭೇಟಿಯ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಉಪಟಳ ಮುಂದುವರೆಸಿದ್ದಾರೆ. ಕುಲ್ಗಾಮ್​ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಸಿಬ್ಬಂದಿ ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಿದ್ದಾರೆ.

ಇಲ್ಲಿನ ಕೌಸರ್​ನಾಗ್​ ಪ್ರದೇಶದ ಆಸ್ಥಾನ್ ಮಾರ್ಗ್​ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ​​ ನಡೆದಿದೆ. ಅವಿತು ಕುಳಿತ ಉಳಿದ ಉಗ್ರರಿಗೆ ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಜಮ್ಮು ರೈಲು ನಿಲ್ದಾಣದ ಸಮೀಪ 18 ಡಿಟೋನೇಟರ್‌ಗಳು ತುಂಬಿದ್ದ ಬ್ಯಾಗ್​ ಪತ್ತೆ

ಮತ್ತೊಂದೆಡೆ, ಬಂಡಿಪೋರ್​ ಜಿಲ್ಲೆಯಲ್ಲಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಅಲೂಸಾ ಪ್ರದೇಶದಲ್ಲಿ ಸೇನಾ ವಾಹನ ಸಂಚರಿಸಿದ ಕೆಲ ನಿಮಿಷಗಳಲ್ಲೇ ಘಟನೆ ನಡೆದಿದೆ. ಇದರಲ್ಲಿ ಯಾವುದೇ ಪ್ರಾಣಹಾನಿ ಹಾಗೂ ಗಾಯಗಳಾಗಿಲ್ಲ. ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ದೌಡಾಯಿಸಿದ್ದು, ಇಲ್ಲಿಯೂ ಕೂಡ ಶೋಧ ಕಾರ್ಯಾರಂಭಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಗಿಲ್ಗಿಟ್, ಬಾಲ್ಟಿಸ್ತಾನ್ ನಮಗೆ ಸೇರಿದಾಗಲೇ ಸಮಗ್ರ ಅಭಿವೃದ್ಧಿ: ಪಿಓಕೆ ಮರುವಶದ ಸುಳಿವು ನೀಡಿದ ರಾಜನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.