ETV Bharat / bharat

ಅಸ್ಸೋಂನ ಖಟ್ಖಾತಿಯಲ್ಲಿ ಗುಂಡಿನ ದಾಳಿ: ಹೆರಾಯಿನ್ ಸಮೇತ ಇಬ್ಬರು ಆರೋಪಿಗಳು ಅಂದರ್..!

author img

By

Published : Jul 6, 2023, 4:26 PM IST

Updated : Jul 6, 2023, 5:04 PM IST

ಲಹರಿಜನ್​ನಲ್ಲಿ 1.176 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ದಾಳಿಯ ವೇಳೆ ಡ್ರಗ್ ವಿತರಕರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಪೊಲೀಸರ ಗುಂಡಿಗೆ ಓರ್ವ ಡ್ರಗ್ ಡೀಲರ್ ಗಾಯಗೊಂಡಿದ್ದಾನೆ.

heroin seized in Khatkhati
ಅಸ್ಸಾಂನ ಖಟ್ಖಾತಿಯಲ್ಲಿ ಗುಂಡಿನ ದಾಳಿ: ಹೆರಾಯಿನ್ ಸಮೇತ ಇಬ್ಬರು ಆರೋಪಿಗಳು ಅಂದರ್..!

ದಿಪು (ಅಸ್ಸೋಂ ): ಅಸ್ಸೋಂನ ಹಲವಾರು ನೆರೆಯ ರಾಜ್ಯಗಳ ಗಡಿ ಪ್ರದೇಶಗಳು ಮಾದಕ ದ್ರವ್ಯ ಕಳ್ಳಸಾಗಣೆಯ ಕೇಂದ್ರಗಳಾಗಿ ಮಾರ್ಪಟ್ಟಿವೆ. ನಿನ್ನೆ ರಾತ್ರಿ ಅಸ್ಸೋಂನಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ.

ಪೊಲೀಸ್ ಎನಕೌಂಟರ್​ನಲ್ಲಿ ಗಾಯಗೊಂಡಿರುವ ಡ್ರಗ್ ಡೀಲರ್ ಶಾಹೀದ್​​ ಹುಸೇನ್ ಎಂದು ಗುರುತಿಸಲಾಗಿದೆ. ಆರೋಪಿ ಶಾಹೀದ್​ ಹುಸೇನ್​ನನ್ನು ಚಿಕಿತ್ಸೆಗಾಗಿ ದಿಫು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತು. ಪೊಲೀಸ್ ಹೇಳಿಕೆ ಪ್ರಕಾರ, ಕಳ್ಳಸಾಗಾಣಿಕೆದಾರನು ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಇಟ್ಟಿಗೆಗಳಿಂದ ದಾಳಿ ಮಾಡಿ ಪೊಲೀಸ್ ಬಂದೂಕನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಗುಂಡಿನ ದಾಳಿಯಲ್ಲಿ ಕಳ್ಳಸಾಗಣೆದಾರ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ದಿಫು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

  • On Wednesday, July 5, @karbianglongpol seized 94 cases of soap containing 1.176 kg of heroin at Laharijan along the Assam border from two drug dealers.

    The exemplary efforts of @assampolice in combating the drug menace are highly appreciated. Keep up the good work!… pic.twitter.com/yrSi8nUMSz

    — Himanta Biswa Sarma (@himantabiswa) July 6, 2023 " class="align-text-top noRightClick twitterSection" data=" ">

ಎಸ್​​​ಪಿ ಹೇಳಿದ್ದಿಷ್ಟು: ''ಬೊಕಾಜಾನ್‌ನಲ್ಲಿ ಡ್ರಗ್ ಮಾಫಿಯಾದ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಪೊಲೀಸರು ಆರೋಪಿಗೆ ಗುಂಡು ಹಾರಿಸಿದ್ದಾರೆ. ಬೋಕಜಾನ್ ಉಪವಿಭಾಗದ ಪೊಲೀಸರು ಸಿಆರ್‌ಪಿಎಫ್ ತಂಡದ ಸಹಯೋಗದೊಂದಿಗೆ ಖಟ್ಖಾತಿ ಪೊಲೀಸ್ ಠಾಣೆ ವ್ಯಾಪ್ತಿಯ ಲಹರಿಜನ್‌ನಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದರು. ಪೊಲೀಸರು ಮನೆಯಿಂದ 94 ಸೋಪ್ ಬಾಕ್ಸ್​ಗಳಲ್ಲಿ 1.176 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಅವರು ಹೆರಾಯಿನ್‌ನೊಂದಿಗೆ ಶಾಹಿದ್ ಹುಸೇನ್ (44) ಮತ್ತು ಲಹರಿಜನ್‌ನ ಮೋಜಿಬುರ್ ರೆಹಮಾನ್ ಅವರ ಮಗ ಅಶಾದುಲ್ಲಾ ರಹಮಾನ್ (27) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ‘‘ ಎಂದು ಕರ್ಬಿ ಆಂಗ್ಲಾಂಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಶೈಕಿಯಾ ಮಾಹಿತಿ ನೀಡಿದರು.

ಬಂಧಿತ ಶಾಹಿದ್ ಹುಸೇನ್​ ಪೊಲೀಸರ ಮೇಲೆ ಇಟ್ಟಿಗೆಗಳಿಂದ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದಾನೆ. ಆ ಕ್ಷಣದಲ್ಲಿ ಪೊಲೀಸರು ಕಳ್ಳಸಾಗಣೆದಾರನ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಕಳ್ಳಸಾಗಾಣಿಕೆದಾರನ ಮನೆಯಿಂದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಡಿಕ್ಷನರಿ ತರಹ ಕಾಣುವ ಮಿನಿಲಾಕರ್​ನಲ್ಲಿ ಡ್ರಗ್ಸ್ ಪತ್ತೆ: ಆರೋಪಿ ಪರಾರಿ

ಪೊಲೀಸರ ಕಾರ್ಯಕ್ಕೆ ಸಿಎಂ ಹಿಮಂತ ಬಿಸ್ವಾ ಶರ್ಮಾ ಮೆಚ್ಚುಗೆ: ಮಾದಕ ವ್ಯಸನದ ವಿರುದ್ಧ ಹೋರಾಡಲು ಅಸ್ಸೋಂ ಪೊಲೀಸರ ಪ್ರಯತ್ನಗಳನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶ್ಲಾಘಿಸಿದರು. "ಜುಲೈ 5, ಬುಧವಾರ, ಅಸ್ಸಾಂ ಗಡಿಯಲ್ಲಿರುವ ಲಹರಿಜನ್‌ನಲ್ಲಿ ಇಬ್ಬರು ಡ್ರಗ್ ಡೀಲರ್‌ಗಳಿಂದ 1.176 ಕೆಜಿ ಹೆರಾಯಿನ್ ಹೊಂದಿರುವ 94 ಸೋಪ್​ ಬಾಕ್ಸ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಮಾದಕ ವಸ್ತುಗಳ ಹಾವಳಿಯನ್ನು ಎದುರಿಸುವಲ್ಲಿ ಅಸ್ಸೋಂ ಪೊಲೀಸರ ಅವರ ಪ್ರಯತ್ನಗಳು ಹೆಚ್ಚು ಮೆಚ್ಚುಗೆ ಪಡೆದಿವೆ. ಉತ್ತಮ ಕಾರ್ಯವನ್ನು ಮುಂದುವರಿಸಿ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪೊಲೀಸರಿಂದ ಮಹಾರಾಷ್ಟ್ರದಲ್ಲಿ ಡ್ರಗ್ ಪೆಡ್ಲರ್ಸ್ ವಶಕ್ಕೆ ಪಡೆಯುವಾಗ ಹೈಡ್ರಾಮಾ: ಕೊನೆಗೂ ಆರೋಪಿಗಳ ಬಂಧನ

Last Updated : Jul 6, 2023, 5:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.