ETV Bharat / bharat

ವಾಯುಪಡೆ ಅಧಿಕಾರಿಗಳಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ; ತಪ್ಪಿದ ಅನಾಹುತ

ವಾಯುಸೇನಾ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್​ ತಾಂತ್ರಿಕ ದೋಷದಿಂದಾಗಿ ಕೊಲ್ಹಾಪುರದಲ್ಲಿ ತುರ್ತು ಭೂಸ್ಪರ್ಶಿಸಿದೆ. ಇದರಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ತಿಳಿದುಬಂದಿದೆ.

Emergency landing of helicoptor in Maharashtra

author img

By

Published : Jan 5, 2022, 3:57 PM IST

ಕೊಲ್ಹಾಪುರ(ಮಹಾರಾಷ್ಟ್ರ): ಬೆಳಗಾವಿಯಿಂದ ಮುಂಬೈಗೆ ತೆರಳುತ್ತಿದ್ದ ವಾಯುಸೇನೆಯ ಎಂಐ8 ಹೆಲಿಕಾಪ್ಟರ್ ತಾಂತ್ರಿಕ ತೊಂದರೆಯಿಂದಾಗಿ ಕೊಲ್ಹಾಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಹೆಲಿಕಾಪ್ಟರ್​​ನಲ್ಲಿ ವಾಯುಪಡೆಯ 9 ಅಧಿಕಾರಿಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಕೊಲ್ಹಾಪುರದ ವಿಮಾನ ನಿಲ್ದಾಣದಲ್ಲಿ​​​ ಎಂಐ8 ಹೆಲಿಕಾಪ್ಟರ್​​ ಭೂಸ್ಪರ್ಶ ಮಾಡಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಕಮಲ್​ ಕಟಾರಿಯಾ ತಿಳಿಸಿದ್ದಾರೆ.

ಭಾರತೀಯ ಸೇನಾಪಡೆಗಳ ಮೊದಲ ಮುಖ್ಯಸ್ಥ ಬಿಪಿನ್​ ರಾವತ್​ ಹಾಗು ಅವರ ಪತ್ನಿ ಸೇರಿದಂತೆ 13 ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡ​ ದುರಂತ ಇತ್ತೀಚೆಗೆ ತಮಿಳುನಾಡಿನಲ್ಲಿ ಸಂಭವಿಸಿತ್ತು.

ಇದನ್ನೂ ಓದಿ: 15-20 ನಿಮಿಷ ಫ್ಲೈಓವರ್​​​​ನಲ್ಲೇ ಸಿಲುಕಿಕೊಂಡ ಮೋದಿ; ಪಂಜಾಬ್‌ನಲ್ಲಿ ಬಹುದೊಡ್ಡ ಭದ್ರತಾ ಲೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.