ತ್ರಿಶೂರ್: ಜಿಲ್ಲೆಯ ದೇವಾಲಯವೊಂದರಲ್ಲಿ ಫೋಟೋ ಸೆಷನ್‌ಗಾಗಿ ತಲೆ ಎತ್ತುವಂತೆ ಆನೆಯೊಂದನ್ನು ಕ್ರೂರವಾಗಿ ಥಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾವುತ ಕಣ್ಣನ್ ಎಂಬಾತನನ್ನು ಬಂಧಿಸಲಾಗಿದೆ.
ಆನೆಯನ್ನು ಪಂಬಡಿ ಸುಂದರನ್ ಎಂದು ಗುರುತಿಸಲಾಗಿದೆ. ತೊಟ್ಟಿಪಾಲ್ ಮಹಾವಿಷ್ಣು ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಚಲಕ್ಕುಡಿ ಅರಣ್ಯ ಇಲಾಖೆ ಅಧಿಕಾರಿ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮಾವುತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಮಾವುತನನ್ನು ಬಂಧಿಸಿ ಇರಿಂಜಲಕುಡ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಓದಿ: ಮಹಿಳೆ ಸುಪ್ರೀಂನ ಮುಖ್ಯ ನ್ಯಾಯಮೂರ್ತಿಯಾಗುವ ಸಮಯ ಬಂದಿದೆ : ಸರ್ವೋನ್ನತ ನ್ಯಾಯಾಲಯ