ETV Bharat / bharat

ಎಂಟು ತಿಂಗಳ ಗರ್ಭಿಣಿ ಹೊಟ್ಟೆಗೆ ಒದ್ದ ಕಿರಾತಕರು: 7 ಜನರ ಬಂಧನ - ಎಂಟು ತಿಂಗಳ ಗರ್ಭಿಣಿ ಹೊಟ್ಟೆಗೆ ಒದೆಯಲಾಗಿದೆ

ಕಟ್ಟಡ ನಿರ್ಮಾಣ ವಿಚಾರಕ್ಕೆ ಗಲಾಟೆ ಸಂಭವಿಸಿದ್ದು, ಎಂಟು ತಿಂಗಳ ಗರ್ಭಿಣಿ ಹೊಟ್ಟೆಗೆ ಒದೆಯಲಾಗಿದೆ.

ಕೋಲ್ಕತ್ತಾದಲ್ಲಿ ಎಂಟು ತಿಂಗಳ ಗರ್ಭಿಣಿ  ಹೊಟ್ಟೆಗೆ ಒದ್ದ ಕಿರಾತಕರು: 7 ಜನರ ಬಂಧನ

author img

By

Published : Aug 22, 2022, 4:09 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕಟ್ಟಡ ನಿರ್ಮಾಣ ವಿಚಾರದಲ್ಲಿ ಜಗಳ ನಡೆದಿದ್ದು, ಎಂಟು ತಿಂಗಳ ಗರ್ಭಿಣಿ ಹೊಟ್ಟೆಗೆ ಒದೆಯಲಾಗಿದೆ. ಈ ಪ್ರಕರಣ ಭಾನುವಾರ ತಡರಾತ್ರಿ ನರ್ಕೆಲ್‌ದಂಗ ​​ಪ್ರದೇಶದಲ್ಲಿ ಜರುಗಿದೆ. ಘಟನೆ ಹಿನ್ನೆಲೆ ಗರ್ಭಿಣಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕೋಲ್ಕತ್ತಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಇತ್ತೀಚಿನ ಮಾಹಿತಿ ಪ್ರಕಾರ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ತೃಣಮೂಲ ಶಾಸಕ ಪರೇಶ್ ಪಾಲ್ ಮತ್ತು ಕೌನ್ಸಿಲರ್ ಸ್ವಪನ್ ಸಮದ್ದಾರ್ ಅವರ ಅನುಯಾಯಿಗಳು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ನರ್ಕೆಲದಂಗ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕೋಲ್ಕತ್ತಾ ಪೊಲೀಸ್ ಡಿಸಿ (ಇಎಸ್‌ಡಿ) ಪ್ರಿಯಬ್ರತಾ ರಾಯ್ ಮಾಹಿತಿ ನೀಡಿದ್ದಾರೆ.

ಈ ಘಟನೆಯಲ್ಲಿ ದೂರುದಾರರಾಗಿದ್ದ ತಂದೆ ಮತ್ತು ಮಗನನ್ನು ಈ ಹಿಂದೆ ಬೇರೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ನರ್ಕೆಲದಂಗ ನಿವಾಸಿ ಶಿಬ್ ಶಂಕರ್ ದಾಸ್ ಮತ್ತು ಅವರ ಪುತ್ರ ದೀಪಕ್ ದಾಸ್ ಮಾತನಾಡಿ, ಈ ಪ್ರದೇಶದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ದಂಧೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದೇವೆ. ಇದರಿಂದ ಸ್ಥಳೀಯರು ಭಾನುವಾರ ಪುರಸಭಾ ಸದಸ್ಯರನ್ನು ಭೇಟಿ ಮಾಡುತ್ತೇವೆ ಎಂದು ಅವರ ಅನುಯಾಯಿಗಳನ್ನು ಕೇಳಿಕೊಂಡರೂ ಪುರಸಭಾ ಸದಸ್ಯರ ಅನುಯಾಯಿಗಳು ಅದನ್ನು ನಿರಾಕರಿಸಿದರು. ನಂತರ ಸಂಜೆಯ ವೇಳೆಗೆ ಕೌನ್ಸಿಲರ್ ಮತ್ತು ಶಾಸಕರ ಅನುಯಾಯಿಗಳು ಮನೆಗೆ ನುಗ್ಗಿ ಥಳಿಸಿದ್ದಾರೆ ಎಂದು ದೂರಿದ್ದಾರೆ.

ಇನ್ನು ಘಟನೆಯಲ್ಲಿ ಮನೆಯ ಮಹಿಳೆಯರ ಮೇಲೂ ಹಲ್ಲೆ ಮಾಡಲಾಗಿದೆ. ಆ ವೇಳೆ ದೀಪಕ್ ಅವರ ಎಂಟು ತಿಂಗಳ ಗರ್ಭಿಣಿ ಪತ್ನಿಯ ಹೊಟ್ಟೆಗೆ ಒದೆಯಲಾಗಿದೆ. ಆಕೆ ಇನ್ನೂ ಚಿಂತಾಜನಕ ಸ್ಥಿತಿಯಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಈ ಕುರಿತು ಶಾಸಕ ಪರೇಶ್ ಪಾಲ್ ಪ್ರತಿಕ್ರಿಯಿಸಿ, ಆ ಪ್ರದೇಶದ ಯಾವುದೇ ಚಟುವಟಿಕೆಗಳು ನನಗೆ ತಿಳಿದುಬಂದಿಲ್ಲ. ಅಲ್ಲದೆ, ದೂರು ನೀಡುತ್ತಿರುವ ಬಗ್ಗೆಯೂ ಸಹ ನನಗೆ ಮಾಹಿತಿ ಗೊತ್ತಾಗಿಲ್ಲ. ಹೀಗಾಗಿ ಈ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಂತ್ರಸ್ತ ಕುಟುಂಬದ ಪ್ರಕಾರ, ಮನೆಯಲ್ಲಿ ಹಿಂಸಾಚಾರ ನಡೆಯುತ್ತಿರುವಾಗ ಅವರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರಂತೆ. ಆದರೆ, ನರ್ಕೆಲ್ದಂಗ ಪೊಲೀಸ್ ಠಾಣೆ ಪೊಲೀಸರು ಕ್ರಮ ಕೈಗೊಳ್ಳುವುದು ಇರಲಿ ಇವರನ್ನೇ ಬಂಧಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರಂತೆ.

ಘಟನೆ ನಂತರ ಕೋಲ್ಕತ್ತಾ ಪೊಲೀಸ್ ಅಧಿಕಾರಿಗಳು ರಾತ್ರಿಯೇ ಆ ಪ್ರದೇಶಕ್ಕೆ ಬಂದು ತನಿಖೆ ಆರಂಭಿಸಿದ್ದಾರೆ. ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಈವರೆಗೆ 7 ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಆಸ್ತಿಗೋಸ್ಕರ ಹೆತ್ತಮ್ಮನನ್ನು ಮನೆಯಿಂದ ಹೊರಹಾಕಿದ ಮಗ.. ಕಾನೂನು ಹೋರಾಟದಲ್ಲಿ ಗೆದ್ದ ತಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.