ETV Bharat / bharat

8 ತಿಂಗಳ ಕಂದಮ್ಮಗೆ HIV ಪಾಸಿಟಿವ್: ಬ್ಲಡ್ ಬ್ಯಾಂಕ್‌ ನಿರ್ಲಕ್ಷ್ಯವೇ ಕಾರಣ- ಸಂಬಂಧಿಕರ ಆರೋಪ - ಆರೋಗ್ಯ ಸಚಿವ ರಾಜೇಶ್ ತೋಪೆ

ಹೆಚ್‌ಐವಿ ಪಾಸಿಟಿವ್ ವ್ಯಕ್ತಿಯು ರಕ್ತದಾನ ಮಾಡಿದ್ದ ಪರಿಣಾಮವಾಗಿ ಎಂಟು ತಿಂಗಳ ಹೆಣ್ಣು ಮಗುವೊಂದು ಸೋಂಕಿಗೆ ತುತ್ತಾಗಿದೆ.

8 ತಿಂಗಳ ಕಂದಮ್ಮಗೆ HIV ಪಾಸಿಟಿವ್
8 ತಿಂಗಳ ಕಂದಮ್ಮಗೆ HIV ಪಾಸಿಟಿವ್
author img

By

Published : Sep 2, 2021, 8:03 PM IST

ಅಕೋಲಾ: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ಕೇವಲ ಎಂಟು ತಿಂಗಳ ಹೆಣ್ಣು ಮಗುವಿಗೆ ಹೆಚ್‌ಐವಿ ತಗುಲಿರುವುದು ದೃಢಪಟ್ಟಿದ್ದು, ಬ್ಲಡ್​ ಬ್ಯಾಂಕ್​ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿ ಮಗುವಿನ ಸಂಬಂಧಿಕರು ಆರೋಗ್ಯ ಸಚಿವ ರಾಜೇಶ್ ತೋಪೆ ಅವರಿಗೆ ದೂರು ನೀಡಿದ್ದಾರೆ.

ಬ್ಲಡ್​ ಬ್ಯಾಂಕ್ ಎಡವಟ್ಟಿನಿಂದಾಗಿ ಮಗುವಿಗೆ ಸೋಂಕುಳ್ಳ ರಕ್ತವನ್ನು ನೀಡಲಾಗಿದೆ ಎಂದು ಆರೋಪಿಸಿರುವ ಸಂಬಂಧಿಕರು, ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವರನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹೆಚ್​​ಐವಿ ಸೋಂಕಿತ ಕೋವಿಡ್ ರೋಗಿಗಳ ಅಪಾಯದ ಪ್ರಮಾಣ ಹೆಚ್ಚು: ಡಬ್ಲ್ಯೂಹೆಚ್​ಒ

ಹುಟ್ಟಿದ ಮೂರು ದಿನಗಳ ಬಳಿಕ ಮಗುವಿನ ಆರೋಗ್ಯ ಹದಗೆಟ್ಟಿತ್ತು. ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ರಕ್ತ ಕಣಗಳು ಕಡಿಮೆ ಇರುವುದು ಕಂಡು ಬಂದಿತ್ತು. ಹೀಗಾಗಿ ಶಿಶುವೈದ್ಯರ ಸಲಹೆ ಮೇರೆಗೆ ಅಕೋಲಾದ ಬಿಪಿ ಠಾಕ್ರೆ ಬ್ಲಡ್ ಬ್ಯಾಂಕ್​​ನಿಂದ ಪಡೆದ ರಕ್ತವನ್ನು ಮಗುವಿಗೆ ನೀಡಲಾಗಿತ್ತು.

ರಕ್ತ ಪಡೆದ ಬಳಿಕ ಮಗುವಿಗೆ ಪದೇ ಪದೇ ಜ್ವರ ಬರುತ್ತಿತ್ತು. ಅಮರಾವತಿಯ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಹೆಚ್‌ಐವಿ ತಗುಲಿರುವುದು ತಿಳಿದುಬಂದಿದೆ. ಇತ್ತ ಮಗುವಿನ ಪೋಷಕರ ವರದಿ ನೆಗೆಟಿವ್​ ಬಂದಿದೆ. ಹೀಗಾಗಿ ರಕ್ತನಿಧಿ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸಿದಾಗ ರಕ್ತದಾನ ಮಾಡಿದ್ದ ವ್ಯಕ್ತಿ ಹೆಚ್‌ಐವಿ ಪಾಸಿಟಿವ್​ ಆಗಿದ್ದನು ಎಂಬುದು ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.