ETV Bharat / bharat

ಮೇ. 14ರಂದು ಈದ್ ಉಲ್​​-ಫಿತರ್​​​: ಶಾಹಿ ಇಮಾಮ್ ಬುಖಾರಿ ಘೋಷಣೆ

author img

By

Published : May 12, 2021, 9:20 PM IST

ಮಹಾಮಾರಿ ಕೊರೊನಾ ವೈರಸ್ ಹಾವಳಿ ನಡುವೆ ಇದೀಗ ಮುಸ್ಲಿಂ ಬಾಂಧವರು ಮೇ. 14ರಂದು ಪವಿತ್ರ ಹಬ್ಬ ರಂಜಾನ್​ ಆಚರಣೆ ಮಾಡಲು ನಿರ್ಧರಿಸಿದ್ದಾರೆ.

Eid ul Fitr
Eid ul Fitr

ಹೈದರಾಬಾದ್​: ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾಗಿರುವ ಈದ್​ ಉಲ್​-ಫಿತರ್​(ರಂಜಾನ್) ಹಬ್ಬವನ್ನ ದೇಶಾದ್ಯಂತ ಮೇ. 14ರಂದು ಆಚರಣೆ ಮಾಡಲು ನಿರ್ಧರಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ದೆಹಲಿ ಜಮಾ ಮಸೀದಿಯ ಶಾಹಿ ಆಹ್ಮದ್​ ಬುಕಾರಿ ಘೋಷಣೆ ಮಾಡಿದ್ದಾರೆ. ಚಂದ್ರ ಕಾಣದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದು, ಬಿಹಾರ, ಒಡಿಶಾ, ಜಾರ್ಖಂಡ್​, ಹೈದರಬಾದ್​, ಲಖನೌ, ಆಂಧ್ರಪ್ರದೇಶ, ಉತ್ತರ ಪ್ರದೇಶದಲ್ಲಿ ಇದೇ ದಿನ ಆಚರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ರಂಜಾನ್ ವಿಶೇಷ ಪ್ರಾರ್ಥನೆಗಳನ್ನು ಮನೆಯಲ್ಲಿಯೇ ಮಾಡಿ; ಅಸಾದುದ್ದೀನ್ ಒವೈಸಿ ಕರೆ

ಆದರೆ, ಕರ್ನಾಟಕದ ಕರಾವಳಿ ಭಾಗದಲ್ಲಿ ಇಂದು ಚಂದ್ರದರ್ಶನವಾಗಿರುವ ಕಾರಣ ಮೇ 13ರಂದು ರಂಜಾನ್​ ಹಬ್ಬ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ದುಬೈನಲ್ಲಿ ಒಂದು ದಿನ ಮುಂಚಿತವಾಗಿ ಈ ಹಬ್ಬ ಆಚರಣೆ ಮಾಡಲಾಗುತ್ತದೆ. ವಿಶೇಷವೆಂದರೆ ಪ್ರತಿ ವರ್ಷ ಇಲ್ಲಿ ಇತರ ರಾಜ್ಯಗಳಿಗಿಂತಲೂ ಒಂದು ದಿನ ಮುಂಚಿತವಾಗಿ ಹಬ್ಬ ಆಚರಣೆ ಮಾಡುವುದು ವಿಶೇಷವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.