ETV Bharat / bharat

ಕಣ್ಣಿನ ಒತ್ತಡ ನಿಯಂತ್ರಿಸಲು ಇಲ್ಲಿವೆ ಪರಿಣಾಮಕಾರಿ ಕ್ರಮಗಳು - ಈಟಿವಿ ಭಾರತ್​ ಸುಖೀಭವ

ಎಲ್ಲವೂ ಡಿಜಿಟಲೀಕರಣಗೊಳ್ಳುವುದರೊಂದಿಗೆ ಜನ ಸ್ಕ್ರೀನಿಂಗ್​​ನಲ್ಲಿ ಹೆಚ್ಚೆಚ್ಚು ಸಮಯವನ್ನು ಕಳೆಯುತ್ತಿರುವುದರಿಂದ ಹಲವಾರು ಕಣ್ಣಿನ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿವೆ. ವಿಶೇಷವಾಗಿ ಕೋವಿಡ್​​ ಸಾಂಕ್ರಾಮಿಕ ರೋಗ ಲಗ್ಗೆ ಇಟ್ಟ ಬಳಿಕ ಜನರು ದಿನವಿಡೀ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಯ್ತು. ಹೀಗಾಗಿ ಆನ್‌ಲೈನ್ ಮೀಟಿಂಗ್​ಗಳು ಅಥವಾ ಮಕ್ಕಳು ಆನ್​ಲೈನ್​ ಕ್ಲಾಸ್​ ಕೇಳಲು ದಿನವಿಡೀ ಪರದೆಗಳನ್ನು ನೋಡುವುದು ಸಾಮಾನ್ಯವಾಯಿತು. ಇದೆಲ್ಲವೂ ಕಣ್ಣಿನ ಆಯಾಸವನ್ನು ಹೆಚ್ಚಿಸಲು ಕಾರಣವಾಗುತ್ತದೆ.

Digital Eye Strain
Digital Eye Strain
author img

By

Published : Oct 28, 2021, 9:18 PM IST

ಡಿಜಿಟಲ್ ಕಣ್ಣಿನ ಒತ್ತಡ(Digital Eye Strain)ವು ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು, ಟಿವಿ, ಟ್ಯಾಬ್ಲೆಟ್‌ಗಳು ಮತ್ತು ವಿಡಿಯೋ ಗೇಮ್‌ಗಳಂತಹ ಪರದೆಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವ ಯಾರಿಗಾದರೂ ಪರಿಣಾಮ ಬೀರಬಹುದು.

ಹೆಚ್ಚಿದ ಸಮಯ ಸ್ಕ್ರೀನಿಂಗ್​​ನಲ್ಲಿ ತೊಡಗುವುದು ಪೋಷಕರಲ್ಲಿ ಕಳವಳಕ್ಕೆ ಕಾರಣವಾಗಿದೆ ಮತ್ತು ಆನ್‌ಲೈನ್ ಶಿಕ್ಷಣ ಈ ಚಿಂತೆ ಹೆಚ್ಚಿಸಿದೆ. ಹೆಚ್ಚಿನ ಸಮಯ ಮೊಬೈಲ್​​, ಲ್ಯಾಪ್​ಟಾಪ್​ ಪರದೆಗಳ ಮೇಲೆ ದೃಷ್ಟಿ ನೆಟ್ಟಿರುವಂತಾಗಿರುವುದು ಮಕ್ಕಳು ತಲೆನೋವು, ಕಣ್ಣಿನ ನೋವು ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಿದೆ.

ಆನ್‌ಲೈನ್ ತರಗತಿಗಳು, ಹೋಮ್‌ವರ್ಕ್ ಮತ್ತು ಅಸೈನ್‌ಮೆಂಟ್‌ಗಳಿಗಾಗಿ ಈ ರೀತಿಯ ಸಾಧನಗಳ ಬಳಕೆಯ ಹೊರತಾಗಿ, ಮಕ್ಕಳು ಹೆಚ್ಚಾಗಿ ಸ್ನೇಹಿತರೊಂದಿಗೆ ಬೆರೆಯಲು ಮತ್ತು ಮನರಂಜನೆಗಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗೆ ಹೋಗುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ. ಇದು ನಿತ್ಯ 7-8 ಗಂಟೆಗಳಿಗಿಂತ ಹೆಚ್ಚು ಸಮಯ ಪರದೆ ವೀಕ್ಷಿಸುವಂತೆ ಮಾಡುತ್ತದೆ ಮತ್ತು ಅದರ ಪರಿಣಾಮ-ಡಿಜಿಟಲ್ ಕಣ್ಣಿನ ಒತ್ತಡ.

ಡಿಜಿಟಲ್ ಕಣ್ಣಿನ ಆಯಾಸದಿಂದ ಬಳಲುತ್ತಿರುವ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಕಣ್ಣಿನ ಆಯಾಸ, ಕಣ್ಣಿನ ಅನಾರೋಗ್ಯ, ತಲೆನೋವು, ಕಣ್ಣುಗಳು ಒಣಗಿದಂತಾಗುವುದು, ದೃಷ್ಟಿ ಮಸುಕಾಗುವುದು ಮತ್ತು ಕಣ್ಣೀರು ಸುರಿಯುವುದು ಮುಂತಾದವು.

ದೀರ್ಘಾವಧಿಯ ಕೆಲಸ ಮತ್ತು ಹೊರಗೆ ಕಳೆಯುವ ಸಮಯವನ್ನು ಕಡಿಮೆ ಮಾಡುವುದರಿಂದ ಚಿಕ್ಕ ಮಕ್ಕಳಲ್ಲಿ ಸಮೀಪದೃಷ್ಟಿ ದೋಷಕ್ಕೆ ಸಹ ಕಾರಣವಾಗುತ್ತದೆ. ಆದ್ದರಿಂದ, ಹೆಚ್ಚಿದ ಪರದೆಯ ಸಮಯದ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು, ಮನೆಯಲ್ಲಿ ಕಣ್ಣಿನ ಒತ್ತಡವನ್ನು ನಿರ್ವಹಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಮೊದಲ ಹಂತವಾಗಿ, ನಿಮ್ಮ ಮಗುವಿನ ವರ್ಚುಯಲ್ ಅಧ್ಯಯನ ವಾತಾವರಣವನ್ನು ಮೌಲ್ಯಮಾಪನ ಮಾಡಿ ಮತ್ತು ಅಗತ್ಯವಿದ್ದರೆ ಕೆಲವೊಂದು ಹೊಂದಾಣಿಕೆಗಳನ್ನು ಮಾಡಿ.

ಕಣ್ಣುಗಳು ಮತ್ತು ಸ್ಕ್ರೀನ್​ ನಡುವಿನ ಅಂತರ:

ಕಂಪ್ಯೂಟರ್ ಪರದೆಯು ನಿಮ್ಮ ಮಗು ಕುಳಿತಿರುವ ಸ್ಥಳದಿಂದ ಸುಮಾರು 1.5 ರಿಂದ 2 ಅಡಿ ಉದ್ದವಿದೆ ಎಂದು ಖಚಿತಪಡಿಸಿಕೊಳ್ಳಿ. ಪರದೆಯ ಮೇಲ್ಭಾಗವು ಕಣ್ಣಿನ ಮಟ್ಟದಲ್ಲಿ ಅಥವಾ ಸ್ವಲ್ಪ ಕೆಳಗಿರುವಂತೆ ಸಾಧನವನ್ನು ಹೊಂದಿಸಿ. ಪರದೆಯನ್ನು ವೀಕ್ಷಿಸಲು ನಿಮ್ಮ ಮಗ ಅಥವಾ ಮಗಳು ಕುತ್ತಿಗೆಯನ್ನು ಓರೆಯಾಗಿಸುತ್ತಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

ಸುತ್ತಮುತ್ತಲಿನ ಬೆಳಕನ್ನು ಹೊಂದಿಸಿ:

ಕೊಠಡಿಯಲ್ಲಿ ಚೆನ್ನಾಗಿ ಬೆಳಕು ಬರುವಂತಿರಬೇಕು. ಪರದೆಯ ಬೆಳಕು ಮತ್ತು ಕೋಣೆಯ ಬೆಳಕಿನ ನಡುವೆ ಹೆಚ್ಚು ವ್ಯತ್ಯಾಸ ಇರಬಾರದು. ಕತ್ತಲೆಯಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸದಂತೆ ನಿಮ್ಮ ಮಗುವಿಗೆ ಸಲಹೆ ನೀಡಿ. ಕಿಟಕಿಯಿಂದ ಅಥವಾ ಕೋಣೆಯಲ್ಲಿನ ಬೆಳಕಿನ ಮೂಲದಿಂದ ಬೆಳಕಿನ ಪ್ರತಿಫಲನದಿಂದಾಗಿ ಪರದೆ ಪ್ರಜ್ವಲಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.

ಸ್ಕ್ರೀನ್​ ಬ್ರೈಟ್​​ನೆಸ್​​ ಹೊಂದಿಸಿ:

ಸ್ಕ್ರೀನ್​ ಬ್ರೈಟ್​​ನೆಸ್​​ ಅತ್ಯುತ್ತಮವಾಗಿದೆ ಎಂದು ಪೋಷಕರು ಖಚಿತಪಡಿಸಿಕೊಳ್ಳಬೇಕು (ಸುತ್ತಮುತ್ತಲಿನ ಪ್ರದೇಶದ ಬೆಳಕಿಗಿಂತ ಹಗುರವಾಗಿರುವುದಿಲ್ಲ ಅಥವಾ ಗಾಢವಾಗಿರುವುದಿಲ್ಲ) ಮತ್ತು ಉತ್ತಮ ವೀಕ್ಷಣೆಗಾಗಿ ಕಾಂಟ್ರಾಸ್ಟ್ ಅನ್ನು ಹೆಚ್ಚಿಸಬೇಕು. ಇದು ಅನಗತ್ಯ ಒತ್ತಡವನ್ನು ಸಹ ತಪ್ಪಿಸುತ್ತದೆ.

ಫಾಂಟ್ ಗಾತ್ರವನ್ನು ಹೆಚ್ಚಿಸಿ:

ಫಾಂಟ್ ಗಾತ್ರ ಅಥವಾ ಆಬ್ಜೆಕ್ಟ್ ಕಾಣಿಸದಿದ್ದಾಗ ಫೋಕಸ್ ಮಾಡಲು ಆಯಾಸಪಡುವ ಬದಲು, ಪುಟವನ್ನು ಝೂಮ್ ಮಾಡಿ ಓದುವುದು ಸೂಕ್ತ.

ಕಲರ್​ ಸೆಟ್ಟಿಂಗ್‌ಗಳನ್ನು ಬಳಸಿ:

ಸಾಧನವನ್ನು ಮಲಗುವ ವೇಳೆ ಹತ್ತಿರ ಬಳಸಿದಾಗ ಪರದೆಯಿಂದ ಹೊರಸೂಸುವ ನೀಲಿ ಬೆಳಕು ನಿಮ್ಮ ಮಗುವಿನ ನಿದ್ರೆಗೆ ಅಡ್ಡಿಯಾಗಬಹುದು. ಸಂಜೆಯ ಪರದೆಯ ಸಮಯವನ್ನು ಕಡಿಮೆ ಮಾಡುವುದು ಮತ್ತು ಸಾಧನಗಳನ್ನು ರಾತ್ರಿ ಮೋಡ್‌ಗೆ ಹೊಂದಿಸುವುದು ನಿದ್ರಾ ಭಂಗವನ್ನು ತಡೆಯಲು ಸಹಾಯ ಮಾಡುತ್ತದೆ.

ಬಿಗ್​ ಸ್ಕ್ರೀನ್​ಗಳು ಉತ್ತಮ:

ಆನ್‌ಲೈನ್ ತರಗತಿಗಳಿಗೆ, ಸಾಧ್ಯವಾದಷ್ಟು ಸ್ಮಾರ್ಟ್‌ಫೋನ್‌ಗಳ ಬದಲಿಗೆ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ಗಳನ್ನು ಬಳಸಿ. ಮನರಂಜನೆಗಾಗಿ, ಟಿವಿ ವೀಕ್ಷಿಸುವುದು ಅಥವಾ ಸ್ಮಾರ್ಟ್‌ಫೋನ್‌ನಿಂದ ಟಿವಿಗೆ ಕನೆಕ್ಟ್​ ಮಾಡಿ ನೋಡುವುದು ಕಣ್ಣಿನ ಆಯಾಸವನ್ನು ತಡೆಯಲು ಉತ್ತಮ ಆಯ್ಕೆಯಾಗಿದೆ. ಉತ್ತಮ ಕಣ್ಣಿನ ವ್ಯಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ಕಣ್ಣಿನ ಆಯಾಸವನ್ನು ತಡೆಯಬಹುದು.

ಪರದೆ ಅಥವಾ ಸ್ಕ್ರೀನ್​ ಅನ್ನು ನಿರಂತರವಾಗಿ ನೋಡಬೇಡಿ; 20-20-20 ನಿಯಮ ಪಾಲಿಸಿ: ನಾವು ದೂರದಲ್ಲಿರುವ ವಸ್ತುಗಳನ್ನು ನೋಡಿದಾಗ ನಮ್ಮ ಕಣ್ಣಿನ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ನಾವು ನಿರಂತರವಾಗಿ ಪರದೆಯ ಮೇಲೆ ಕೆಲಸ ಮಾಡುವಾಗ ಹತ್ತಿರದ ದೂರದಲ್ಲಿ ಕೇಂದ್ರೀಕರಿಸಲು ಶ್ರಮಿಸುತ್ತೇವೆ.

ಆದ್ದರಿಂದ, ಪರದೆಗಳನ್ನು ಬಳಸುವಾಗ ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ವಿರಾಮವನ್ನು ತೆಗೆದುಕೊಳ್ಳಲು ನಿಮ್ಮ ಮಗುವಿಗೆ ನೆನಪಿಸುವುದು ಸಹಾಯ ಮಾಡುತ್ತದೆ. ಅವರು 20 ಸೆಕೆಂಡುಗಳ ಕಾಲ ತಮ್ಮ ಕಣ್ಣುಗಳನ್ನು ಮುಚ್ಚಬಹುದು ಅಥವಾ ತಮ್ಮ ಕಿಟಕಿಯ ಹೊರಗೆ 20 ಅಡಿ ಅಥವಾ ಅದಕ್ಕಿಂತ ಹೆಚ್ಚಿನ ದೂರ ಕಣ್ಣು ಹಾಯಿಸಬೇಕು. ಆಗಾಗ್ಗೆ ವಿರಾಮಗಳನ್ನು ಪಡೆಯುವುದು ಕಣ್ಣಿನ ಆಯಾಸವನ್ನು ತಡೆಯಲು ಸಹಾಯ ಮಾಡುತ್ತದೆ.

ಸಾಧನಗಳನ್ನು ಬಳಸುವಾಗ ಕಣ್ಣು ಮಿಟುಕಿಸಲು ಮರೆಯದಿರಿ: ಮಿಟುಕಿಸುವುದು ಕಣ್ಣಿನ ಮೇಲ್ಮೈಯನ್ನು ಕಣ್ಣೀರಿನಿಂದ ಕಾಪಾಡುತ್ತದೆ. ಆದಾಗ್ಯೂ, ಪರದೆಗಳನ್ನು ಬಳಸುವಾಗ ನಾವು ಅರ್ಧಕ್ಕಿಂತ ಕಡಿಮೆ ಬಾರಿ ಮಿಟುಕಿಸುತ್ತೇವೆ. ಕಣ್ಣುಗಳು ಶುಷ್ಕ, ಭಾರ, ದಣಿವು, ತುರಿಕೆ ಅಥವಾ ಕಿರಿಕಿರಿ ಉಂಟು ಮಾಡಬಹುದು. ಪ್ರಜ್ಞಾಪೂರ್ವಕವಾಗಿ ಕಣ್ಣು ಮಿಟುಕಿಸುವುದನ್ನು ನೆನಪಿಟ್ಟುಕೊಳ್ಳುವುದರಿಂದ ಶುಷ್ಕತೆ ಮತ್ತು ಕಣ್ಣಿನ ಕಿರಿಕಿರಿಯನ್ನು ತಡೆಯಬಹುದು. ಐ ಡ್ರಾಪ್​ಗಳು ಪರಿಹಾರವನ್ನು ನೀಡಬಹುದು ಮತ್ತು ನಿಮ್ಮ ಕಣ್ಣಿನ ವೈದ್ಯರ ಸಲಹೆಯಂತೆ ಅಗತ್ಯವಿದ್ದಾಗ ಅವುಗಳನ್ನು ಬಳಸಬಹುದು.

ಆಫ್-ಸ್ಕ್ರೀನ್ ಚಟುವಟಿಕೆ:ಕಣ್ಣುಗಳಿಗೆ ಸಾಕಷ್ಟು ವಿಶ್ರಾಂತಿ ನೀಡಲು ಆನ್‌ಲೈನ್ ತರಗತಿಗಳ ನಂತರ ಪರದೆಯಿಂದ ದೂರ ಕಳೆಯಿರಿ. ತೋಟಗಾರಿಕೆ, ಸೈಕ್ಲಿಂಗ್, ಒಳಾಂಗಣ ಆಟಗಳು ಇತ್ಯಾದಿ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ.

ಕನ್ನಡಕಗಳ ಅಗತ್ಯವಿದೆಯೇ ಎಂಬುದನ್ನು ಪತ್ತೆಹಚ್ಚಲು ನಿಯಮಿತ ಕಣ್ಣಿನ ತಪಾಸಣೆ ಅತ್ಯಗತ್ಯವಾಗಿರುತ್ತದೆ. ಸರಿಯಾದ ಪ್ರಿಸ್ಕ್ರಿಪ್ಷನ್ ಕನ್ನಡಕವನ್ನು ಧರಿಸುವುದು ಕಣ್ಣಿನ ಆಯಾಸವನ್ನು ತಡೆಯಲು ಸಹಾಯ ಮಾಡುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.