ETV Bharat / bharat

ಅಮ್ನೆಸ್ಟಿ ಇಂಡಿಯಾಗೆ 51 ಕೋಟಿ ರೂ.: ಮಾಜಿ ಸಿಇಒ ಆಕರ್ ಪಟೇಲ್​ಗೆ 10 ಕೋಟಿ ರೂ. ದಂಡ: ಕಾರಣ ?

author img

By

Published : Jul 8, 2022, 6:22 PM IST

ಎಫ್‌ಡಿಐ ಮಾರ್ಗವನ್ನು ಅನುಸರಿಸಿ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ತನ್ನ ಭಾರತೀಯ ಘಟಕಗಳ ಮೂಲಕ ದೊಡ್ಡ ಮೊತ್ತದ ಹಣವನ್ನು ರವಾನೆ ಮಾಡುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ಅಮ್ನೆಸ್ಟಿ ಇಂಡಿಯಾ ಮತ್ತು ಅದರ ಮಾಜಿ ಸಿಇಒ ಆಕರ್ ಪಟೇಲ್ ವಿರುದ್ಧ ಕ್ರಮ ಜರುಗಿಸಲಾಗಿದೆ.

ಅಮ್ನೆಸ್ಟಿ ಇಂಡಿಯಾಗೆ ಇಡಿ 51 ಕೋಟಿ ರೂ., ಮಾಜಿ ಸಿಇಒ ಆಕರ್ ಪಟೇಲ್ 10 ಕೋಟಿ ರೂ. ದಂಡ: ಕಾರಣ ?

ನವದೆಹಲಿ: ಅಮ್ನೆಸ್ಟಿ ಇಂಡಿಯಾ ಇಂಟರ್‌ನ್ಯಾಶನಲ್ ಪ್ರೈ. ಲಿಮಿಟೆಡ್ ಮತ್ತು ಅದರ ಮಾಜಿ ಸಿಇಒ ಆಕರ್ ಪಟೇಲ್ ಅವರಿಗೆ ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮವಾಗಿ 51.72 ಕೋಟಿ ಮತ್ತು 10 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಇಡಿ ಮಾಹಿತಿ ನೀಡಿದೆ.

ಅಮ್ನೆಸ್ಟಿ ಇಂಟರ್‌ನ್ಯಾಷನಲ್, ಎಫ್‌ಡಿಐ ಮಾರ್ಗವನ್ನು ಅನುಸರಿಸಿ ತನ್ನ ಭಾರತೀಯ ಘಟಕಗಳ ಮೂಲಕ (ಎಫ್‌ಸಿಆರ್‌ಎ ಅಲ್ಲದ ಕಂಪನಿಗಳು) ದೊಡ್ಡ ಮೊತ್ತದ ವಿದೇಶಿ ಕೊಡುಗೆಯನ್ನು ರವಾನಿಸುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ಇಬ್ಬರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಇಡಿ ಹೇಳಿದೆ.

ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಫೌಂಡೇಶನ್ ಟ್ರಸ್ಟ್ (ಎಐಐಎಫ್‌ಟಿ) ಮತ್ತು ಎಫ್‌ಸಿಆರ್‌ಎ ಅಡಿಯಲ್ಲಿರುವ ಇತರ ಟ್ರಸ್ಟ್‌ಗಳಿಗೆ ಗೃಹ ವ್ಯವಹಾರಗಳ ಸಚಿವಾಲಯವು ಪೂರ್ವ ನೋಂದಣಿ ಅಥವಾ ಅನುಮತಿಗಳನ್ನು ನಿರಾಕರಿಸಿದ ಹೊರತಾಗಿಯೂ ಇಷ್ಟೆಲ್ಲಾ ಘಟನೆ ಜರುಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ನಿಬಂಧನೆಗಳನ್ನು ಉಲ್ಲಂಘಿಸಿದ ಹಣವನ್ನು ಸ್ವೀಕರಿಸಿದ ಕಾರಣ ದಂಡದ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಇದನ್ನೂ ಓದಿ: ದಲಿತ ವಿದ್ಯಾರ್ಥಿಗೆ ಒಲಿದ ಅದೃಷ್ಟ: ಅಮೆರಿಕದ ಕಾಲೇಜ್​ನಿಂದ 2.5 ಕೋಟಿ ರೂ. ಶಿಷ್ಯವೇತನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.