ಮುಜಾಫರ್‌ಪುರ(ಬಿಹಾರ): ಬಂಧಿತ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಮತ್ತು ಇತರರನ್ನು ಒಳಗೊಂಡ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು, ಜಾರ್ಖಂಡ್ ಮತ್ತು ಬಿಹಾರದ ಸುಮಾರು ಏಳು ಸ್ಥಳಗಳಲ್ಲಿ ಮಂಗಳವಾರ ದಾಳಿ ನಡೆಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಸೆಕ್ಷನ್‌ಗಳ ಅಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಧ್ಯವರ್ತಿಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಜಿಲ್ಲೆಯ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಹುಲ್ ನಗರದಲ್ಲಿರುವ ತ್ರಿವೇಣಿ ಚೌಧರಿ ಎಂಬುವವರ ನಿವಾಸದ ಮೇಲೆ ದಾಳಿ ನಡೆದಿದೆ. ಮುಜಾಫರ್‌ಪುರದ ತ್ರಿವೇಣಿ ಚೌಧರಿ ಅವರ ಪುತ್ರ ಜಾರ್ಖಂಡ್‌ನಲ್ಲಿ ಕಾಲೇಜು ನಡೆಸುತ್ತಿದ್ದ ಎನ್ನಲಾಗಿದೆ. ಐಎಎಸ್ ಪೂಜಾ ಸಿಂಘಾಲ್ ಮತ್ತು ಅವರ ಸಿಎ ಜೊತೆ ಇವರು ಉತ್ತಮ ಸಂಬಂಧವನ್ನು ಹೊಂದಿದ್ದರು.
ಇದನ್ನೂ ಓದಿ: 'Proud of you Bhagwant' : ಪಂಜಾಬ್ ಆರೋಗ್ಯ ಸಚಿವರ ಬಂಧನದ ಬೆನ್ನಲ್ಲೇ ಕೇಜ್ರಿವಾಲ್ ಮೆಚ್ಚುಗೆ!
ತ್ರಿವೇಣಿ ಚೌಧರಿ ಅವರೊಂದಿಗೆ ಯಾವ ರೀತಿಯ ಸಂಬಂಧವಿದೆ ಎಂದು ಅಧಿಕೃತವಾಗಿ ದೃಢಪಡಿಸಲಾಗಿಲ್ಲವಾದರೂ, ಇಂದು ಬಿಹಾರ - ಜಾರ್ಖಂಡ್ ಸೇರಿದಂತೆ 7 ಸ್ಥಳಗಳಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ, ಕೆ. ಮುಜಾಫರ್‌ಪುರದಲ್ಲಿರುವ ಪೂಜಾ ಸಿಂಘಾಲ್ ಅವರ ಮಾವ ಮತ್ತು ಪತಿ ನಿವಾಸದ ಮೇಲೂ ED ದಾಳಿಯನ್ನು ನಡೆಸಿತ್ತು. ಇದರಲ್ಲಿ MNREGA ಗೆ ಸಂಬಂಧಿಸಿದ ಹಗರಣಗಳ ತನಿಖೆ ನಡೆಸಲಾಯಿತು.
44 ವರ್ಷದ ಸಿಂಘಾಲ್ ಅವರನ್ನು ಈ ತಿಂಗಳ ಆರಂಭದಲ್ಲಿ ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ MNREGA ನಿಧಿಯ ದುರುಪಯೋಗ ಮತ್ತು ಇತರ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದ ಪ್ರಕಣದಲ್ಲಿ ಇಡಿ ಬಂಧಿಸಿತ್ತು. ನಂತರ ರಾಜ್ಯ ಸರ್ಕಾರವು ಅವರನ್ನು ಅಮಾನತುಗೊಳಿಸಿದ್ದು, ಪ್ರಸ್ತುತ ಅವರು ತನಿಖಾ ಸಂಸ್ಥೆಯ ವಶದಲ್ಲಿದ್ದಾರೆ.