ETV Bharat / bharat

ತೆಲಂಗಾಣ ಸಿಎಂ ಪುತ್ರಿಗೆ 10 ತಾಸು ಇಡಿ ವಿಚಾರಣೆ; ಇಂದು ಮತ್ತೆ ಬುಲಾವ್​

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ಪುತ್ರಿ ಕವಿತಾ ಅವರನ್ನು ಇಡಿ ನಿನ್ನೆ 10 ಗಂಟೆಗೂ ಹೆಚ್ಚು ಕಾಲ ಪ್ರಶ್ನಿಸಿದೆ. ಇಂದು ಕೂಡ ವಿಚಾರಣೆಗೆ ಬರುವಂತೆ ಸೂಚಿಸಿದೆ.

ದೆಹಲಿ ಅಬಕಾರಿ ನೀತಿ ಕೇಸ್​
ದೆಹಲಿ ಅಬಕಾರಿ ನೀತಿ ಕೇಸ್​
author img

By

Published : Mar 21, 2023, 7:36 AM IST

ನವದೆಹಲಿ: ದೆಹಲಿಯ ಅಬಕಾರಿ ನೀತಿ ಸಂಬಂಧಿತ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್​ ರಾವ್ ಅವರ ಪುತ್ರಿ ಹಾಗು ಬಿಆರ್‌ಎಸ್ ಪಕ್ಷದ ನಾಯಕಿ ಕೆ.ಕವಿತಾ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಸೋಮವಾರ 10 ಗಂಟೆಗಳಿಗೂ ಹೆಚ್ಚು ಕಾಲ ಪ್ರಶ್ನಿಸಿದೆ. ಅಲ್ಲದೇ, ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.

ನಿನ್ನೆ(ಸೋಮವಾರ) ದಿಲ್ಲಿಯಲ್ಲಿನ ಇಡಿ ಕಚೇರಿಗೆ ಬೆಳಗ್ಗೆ 10:30ಕ್ಕೆ ಆಗಮಿಸಿದ್ದ ಕವಿತಾ ಅವರಿಂದ ಅಧಿಕಾರಿಗಳು 11 ಗಂಟೆಯಿಂದಲೇ ಹೇಳಿಕೆ ದಾಖಲಿಸಿಕೊಳ್ಳಲು ಶುರು ಮಾಡಿದ್ದರು. ಪ್ರಕರಣದಲ್ಲಿ ಕವಿತಾ ಆರೋಪಿಯಾಗಿರುವ ಕಾರಣ ಅವರ ಪ್ರತಿಯೊಂದು ಹೇಳಿಕೆಯನ್ನೂ ಅಧಿಕಾರಿಗಳು ಅಚ್ಚುಕಟ್ಟಾಗಿ ದಾಖಲಿಸಿಕೊಂಡಿದ್ದಾರೆ. 10 ಗಂಟೆಗೂ ಅಧಿಕ ಕಾಲ ಪ್ರಶ್ನಿಸಿದ ಇಡಿ ರಾತ್ರಿ 9:15 ರ ಬಳಿಕ ಬಿಟ್ಟಿತು.

  • #WATCH | Delhi: BRS MLC K Kavitha leaves from ED office.

    She arrived at the ED office earlier today after the agency summoned her in connection with the Delhi liquor policy case. pic.twitter.com/beIs8v2yW1

    — ANI (@ANI) March 20, 2023 " class="align-text-top noRightClick twitterSection" data=" ">

ಭಾರತ್​ ರಾಷ್ಟ್ರ ಸಮಿತಿ(ಬಿಆರ್​ಎಸ್​) ಎಂಎಲ್​ಸಿ ಕವಿತಾ ಅವರು ವಿಚಾರಣೆಯ ಬಳಿಕ ಇಡಿ ಕಚೇರಿಯಿಂದ ಹೊರಬರುತ್ತಿದ್ದಾಗ ವಿಜಯದ ಸಂಕೇತವನ್ನು ಪತ್ರಕರ್ತರತ್ತ ತೋರಿಸುತ್ತಾ ನಗುಮುಖದಿಂದಲೇ ಕಾರಿನ ಕಡೆಗೆ ಹೆಜ್ಜೆ ಹಾಕಿದರು. ಇದಕ್ಕೂ ಮೊದಲು ಮಾರ್ಚ್ 11 ರಂದು ಸುಮಾರು 9 ಗಂಟೆಗಳ ಕಾಲ ಇವರನ್ನು ಇಡಿ ಮೊದಲ ಬಾರಿಗೆ ಪ್ರಶ್ನಿಸಿತ್ತು. ನಂತರ ಮಾರ್ಚ್ 16 ರಂದು 2ನೇ ಬಾರಿಗೆ ವಿಚಾರಣೆ ನಡೆಸಲಾಗಿತ್ತು.

ಕವಿತಾ ವಿರುದ್ಧದ ಆರೋಪವೇನು?: ಮದ್ಯ ನೀತಿ ಹಗರಣದಲ್ಲಿ ಕವಿತಾ ಅನೇಕ ಮೊಬೈಲ್ ಫೋನ್‌ ಕರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಬೇನಾಮಿ ಆಸ್ತಿಯನ್ನೂ ಹೊಂದಿದ್ದಾರೆ ಎಂಬುದು ಇಡಿ ಅಧಿಕಾರಿಗಳ ಆರೋಪ. ಇದೇ ಪ್ರಕರಣ ಸಂಬಂಧ ಹೈದರಾಬಾದ್ ಮೂಲದ ಉದ್ಯಮಿ, ಕವಿತಾ ಅವರ ಆಪ್ತ ಅರುಣ್ ರಾಮಚಂದ್ರನ್ ಪಿಳ್ಳೈ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ. ಹಗರಣದಲ್ಲಿ ನಡೆದ ವಹಿವಾಟುಗಳ ಬಗ್ಗೆ ಕವಿತಾರನ್ನು ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ತಮ್ಮನ್ನು ಇಡಿ ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಿ ವಿಚಾರಣೆ ನಡೆಸುತ್ತಿದೆ ಎಂದು ಕವಿತಾ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು. ಪದೇ ಪದೆ ಕಚೇರಿಗೆ ಕರೆಯುತ್ತಿದ್ದಾರೆ. ಮಹಿಳೆಯನ್ನು ಜಾರಿ ನಿರ್ದೇಶನಾಲಯದ ಕಚೇರಿಗೆ ಹೀಗೆ ಕರೆಸಬಹುದೇ ಎಂದು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಮದ್ಯ ನೀತಿ ಹಗರಣ ವಿವಾದ: ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರ 2021-22 ರ ಸಾಲಿನ ಅಬಕಾರಿ ನೀತಿಯನ್ನು ರೂಪಿಸಿತ್ತು. ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿದೆ ಮತ್ತು ಅದಕ್ಕಾಗಿ ಲಂಚವನ್ನು ಕೆಲವು ಡೀಲರ್‌ಗಳಿಂದ ಪಡೆಯಲಾಗಿದೆ. ಅವರಿಗೆ ಅಕ್ರಮವಾಗಿ ಪರವಾನಗಿ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಹಗರಣದ ತನಿಖೆ ನಡೆಸಬೇಕು ಎಂದು ದೆಹಲಿ ಲೆಫ್ಟಿನೆಂಟ್​ ಜನರಲ್​ ಸಿಬಿಐಗೆ ಮನವಿ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ತನಿಖಾ ಸಂಸ್ಥೆ ದೆಹಲಿ ಸರ್ಕಾರದ ಮಾಜಿ ಉಪಮುಖ್ಯಮಂತ್ರಿ, ಅಬಕಾರಿ ಸಚಿವ ಮನೀಶ್​ ಸಿಸೋಡಿಯಾರನ್ನು ಈಗಾಗಲೇ ವಶಕ್ಕೆ ಪಡೆದು, ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಇದಲ್ಲದೇ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ 12 ಮಂದಿಯನ್ನು ಬಂಧಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಇಡಿ ಕೂಡ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಆದರೆ, ಕೇಳಿಬಂದ ಹಗರಣವನ್ನು ಆಡಳಿತಾರೂಢ ಆಮ್​ ಆದ್ಮಿ ಪಕ್ಷ ಬಲವಾಗಿ ನಿರಾಕರಿಸುತ್ತಿದೆ.

ಇದನ್ನೂ ಓದಿ: ತೆಲಂಗಾಣ ಸಿಎಂ ಕೆಸಿಆರ್‌ ಪುತ್ರಿ ಕವಿತಾ ಇಡಿ ವಿಚಾರಣೆಗೆ ಹಾಜರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.