ETV Bharat / bharat

ಅಬಕಾರಿ ನೀತಿ ಹಗರಣ: ಉದ್ಯಮಿ ವಿರುದ್ಧ 3 ಸಾವಿರ ಪುಟಗಳ ED ಚಾರ್ಜ್ ಶೀಟ್: ಇಲ್ಲಿಯೂ DCM ಸಿಸೋಡಿಯಾ ಹೆಸರಿಲ್ಲ - ಸಿಎಂ ಅರವಿಂದ್ ಕೇಜ್ರಿವಾಲ್

ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಉದ್ಯಮಿ ಸಮೀರ್ ಮಹೇಂದ್ರು ವಿರುದ್ಧ ಮೂರು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿರುವ ಜಾರಿ ನಿರ್ದೇಶನಾಲಯವು ಬಂಧಿತ ಇತರ ಆರೋಪಿಗಳ ವಿರುದ್ಧ ಶೀಘ್ರವೇ ಪೂರಕ ಆರೋಪ ಪಟ್ಟಿ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ.

ed-files-3000-page-chargesheet-against-businessman-sameer-mahendru-in-delhi-excise-policy-scam-case
ಅಬಕಾರಿ ನೀತಿ ಹಗರಣ: ಉದ್ಯಮಿ ವಿರುದ್ಧ 3 ಸಾವಿರ ಪುಟಗಳ ED ಚಾರ್ಜ್ ಶೀಟ್, ಇಲ್ಲಿಯೂ DCM ಸಿಸೋಡಿಯಾ ಹೆಸರಿಲ್ಲ
author img

By

Published : Nov 26, 2022, 9:23 PM IST

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಉದ್ಯಮಿ ಸಮೀರ್ ಮಹೇಂದ್ರು ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಮೂರು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ನಿನ್ನೆಯಷ್ಟೇ ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಚಾರ್ಜ್​​ಶೀಟ್​ ಸಲ್ಲಿಸಿತ್ತು. ಆದರೆ, ಎರಡೂ ತನಿಖಾ ಸಂಸ್ಥೆಗಳ ದೋಷಾರೋಪ ಪಟ್ಟಿಯಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೆಸರಿನ ಉಲ್ಲೇಖವಿಲ್ಲ.

ದೆಹಲಿಯ ಆಡಳಿತಾರೂಢ ಆಮ್​ ಆದ್ಮಿ ಪಕ್ಷದ ಸರ್ಕಾರ ಜಾರಿಗೆ ತಂದಿದ್ದ ಹೊಸ ಅಬಕಾರಿ ನೀತಿ ಸಾಕಷ್ಟು ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿತ್ತು. ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ತನಿಖಾ ಸಂಸ್ಥೆಗಳು ವಿಚಾರಣೆಗೂ ಒಳಪಡಿಸಿದ್ದವು. ಅಲ್ಲದೇ, ಬಿಜೆಪಿ ನೇರವಾಗಿ ದೆಹಲಿ ಸರ್ಕಾರ ವಿರುದ್ಧ ಟೀಕಾ ಪ್ರಹಾರ ನಡೆಸಿತ್ತು. ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು.

  • ED की चार्जशीट में भी मनीष जी का नाम नहीं

    शिक्षा क्रांति से दुनिया में भारत का नाम रोशन करने वाले मनीष जी को झूठे केस में फँसाने के लिए क्या मोदी जी को देश से माफ़ी नहीं माँगनी चाहिए?

    अच्छा काम करने वालों को जेल में डालने से क्या देश आगे बढ़ेगा?

    — Arvind Kejriwal (@ArvindKejriwal) November 26, 2022 " class="align-text-top noRightClick twitterSection" data=" ">

ಮೂರು ಸಾವಿರ ಪುಟಗಳ ಇಡಿ ಚಾರ್ಜ್ ಶೀಟ್: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಶುಕ್ರವಾರ ಸಿಬಿಐ 10 ಸಾವಿರ ಪುಟಗಳ ಚಾರ್ಜ್​ ಶೀಟ್​ ಸಲ್ಲಿಸಿತ್ತು. ತನ್ನ ಚಾರ್ಜ್​ ಶೀಟ್​ನಲ್ಲಿ ಏಳು ಆರೋಪಿಗಳನ್ನು ಹೆಸರಿಸಿತ್ತು. ಈಗಾಗಲೇ ಬಂಧಿತ ಇಬ್ಬರು ಉದ್ಯಮಿಗಳು, ಸುದ್ದಿ ವಾಹಿನಿಯ ಮುಖ್ಯಸ್ಥ, ಹೈದರಾಬಾದ್ ಮೂಲದ ಮದ್ಯ ಉದ್ಯಮಿ, ದೆಹಲಿ ಮೂಲದ ಮದ್ಯ ವಿತರಕ ಮತ್ತು ಅಬಕಾರಿ ಇಲಾಖೆಯ ಇಬ್ಬರು ಅಧಿಕಾರಿಗಳ ಹೆಸರನ್ನು ಸಿಬಿಐ ತನ್ನ ಚಾರ್ಜ್​ ಶೀಟ್​ನಲ್ಲಿ ಉಲ್ಲೇಖಿಸಿತ್ತು. ಇದೀಗ ಜಾರಿ ನಿರ್ದೇಶನಾಲಯ ಮೂರು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ.

  • ये मेरे लिए बेहद गर्व की बात है कि इनकी तमाम साज़िशों और झूठी FIRs के बाद भी ये मेरे ऊपर कोई आरोप नहीं लगा पा रहे. 800 अफ़सरों की टीम ने 500 जगह रेड कर जो चार्जशीट बनाई है उसमें मेरा नाम नहीं है.

    CBI और ED की चार्जशीट ने साबित कर दिया कि कोई शराब घोटाला नहीं हुआ. https://t.co/IO0jI1zGvc

    — Manish Sisodia (@msisodia) November 26, 2022 " class="align-text-top noRightClick twitterSection" data=" ">

ಚಾರ್ಜ್ ಶೀಟ್ ಸಲ್ಲಿಕೆಗೆ ಇದ್ದ 60 ದಿನಗಳ ಕಾಲಾವಧಿ ಮುಕ್ತಾಯವಾಗಿತ್ತು. ನಿಬಂಧನೆಯ ಪ್ರಕಾರ, ಆರೋಪಿಯನ್ನು ಬಂಧಿಸಿದ 60 ದಿನಗಳಲ್ಲಿ ತನಿಖಾ ಸಂಸ್ಥೆಯು ಚಾರ್ಜ್ ಶೀಟ್ ಸಲ್ಲಿಸುವುದು ಕಡ್ಡಾಯವಾಗಿದೆ. ಇಂದು ಉದ್ಯಮಿ ಸಮೀರ್ ಮಹೇಂದ್ರು ವಿರುದ್ಧ ಮೂರು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿರುವ ಜಾರಿ ನಿರ್ದೇಶನಾಲಯವು ಬಂಧಿತ ಇತರ ಆರೋಪಿಗಳ ವಿರುದ್ಧ ಶೀಘ್ರವೇ ಪೂರಕ ಆರೋಪ ಪಟ್ಟಿ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ.

ಯಾವುದೇ ಮದ್ಯ ಹಗರಣ ನಡೆದಿಲ್ಲ ಎಂದು ಸಾಬೀತು: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾರಿ ನಿರ್ದೇಶನಾಲಯದ ಚಾರ್ಜ್ ಶೀಟ್‌ ವಿಷಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಪ್ರತಿಕ್ರಿಯೆ ನೀಡಿದ್ದು, ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಹಗರಣ ನಡೆದಿಲ್ಲ ಎಂಬುವುದು ಇಡಿ ಚಾರ್ಜ್ ಶೀಟ್​ನಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.

ಜಾರಿ ನಿರ್ದೇಶನಾಲಯದ ಚಾರ್ಜ್ ಶೀಟ್‌ನಲ್ಲಿಯೂ ಮನೀಶ್ ಜಿ ಹೆಸರು ಇಲ್ಲ. ಶಿಕ್ಷಣ ಕ್ರಾಂತಿಯ ಮೂಲಕ ಭಾರತಕ್ಕೆ ವಿಶ್ವಮಟ್ಟದಲ್ಲಿ ಕೀರ್ತಿ ತಂದ ಮನೀಷ್ ಜಿ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ ಮೋದಿಯವರು ದೇಶದ ಕ್ಷಮೆ ಕೇಳಬೇಕಲ್ಲವೇ?. ಒಳ್ಳೆಯ ಕೆಲಸ ಮಾಡುವವರನ್ನು ಜೈಲಿಗೆ ಹಾಕುವುದರಿಂದ ದೇಶ ಪ್ರಗತಿಯಾಗುತ್ತದೆಯೇ ಎಂದು ಪ್ರಶ್ನಿಸಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್​ ಮಾಡಿದ್ದಾರೆ.

ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಟ್ವೀಟ್ ಮಾಡಿ, ಎಲ್ಲ ಪಿತೂರಿಗಳು ಮತ್ತು ಸುಳ್ಳು ಎಫ್‌ಐಆರ್‌ಗಳ ನಂತರವೂ ನನ್ನ ವಿರುದ್ಧ ಯಾವುದೇ ಆರೋಪಗಳನ್ನು ಮಾಡಲು ಸಾಧ್ಯವಾಗದಿರುವುದು ನನಗೆ ತುಂಬಾ ಹೆಮ್ಮೆಯ ವಿಷಯವಾಗಿದೆ. 800 ಅಧಿಕಾರಿಗಳ ತಂಡ 500 ಕಡೆ ದಾಳಿ ನಡೆಸಿ ಸಿದ್ಧಪಡಿಸಿರುವ ಚಾರ್ಜ್​​ ಶೀಟ್ ನಲ್ಲಿ ನನ್ನ ಹೆಸರಿಲ್ಲ. ಸಿಬಿಐ ಮತ್ತು ಇಡಿ ಚಾರ್ಜ್ ಶೀಟ್​ನಿಂದ ಯಾವುದೇ ಮದ್ಯ ಹಗರಣ ನಡೆದಿಲ್ಲ ಎಂದು ಸಾಬೀತಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಮದ್ಯ ಹಗರಣ: 10 ಸಾವಿರ ಪುಟಗಳ ಚಾರ್ಜ್​ಶೀಟ್​, ಡಿಸಿಎಂ ಸಿಸೋಡಿಯಾ ಹೆಸರಿಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.