ಚೆನ್ನೈ, ತಮಿಳುನಾಡು: ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಾಚರಣೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿದ ನಂತರ, ಜಾರಿ ಇಲಾಖೆಯು ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶಾಖೆಗಳ ಕಾರ್ಯನಿರ್ವಾಹಕರ ಕಚೇರಿಗಳ ಮೇಲೆ ಸತತ ದಾಳಿ ನಡೆಸುತ್ತಿದೆ. ಭಯೋತ್ಪಾದಕ ಸಂಬಂಧಗಳಿವೆ ಎಂದು ಆರೋಪಿಸಿ, ರಾಷ್ಟ್ರೀಯ ಗುಪ್ತಚರ ಸಂಸ್ಥೆಗಳು ದಾಳಿ ಮತ್ತು ಬಂಧನ ನಡೆಸುತ್ತಿವೆ ಮತ್ತು ಆರೋಪಪಟ್ಟಿ ಸಲ್ಲಿಸುತ್ತಿವೆ.
![ED Conducts Raids at PFI Former State President PFI Former State President Ismail Chennai Money Laundering Probe ಅಕ್ರಮ ಹಣ ವರ್ಗಾವಣೆ ಪಿಎಫ್‌ಐನ ಕಾರ್ಯನಿರ್ವಹಕರಿಬ್ಬರ ಮೇಲೆ ದಾಳಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಿರ್ವಾಹಕರ ಆವರಣದ ಮೇಲೆ ಜಾರಿ ಇಲಾಖೆ ದಾಳಿ ಐದು ವರ್ಷಗಳ ಕಾಲ ನಿಷೇಧ ರಾಷ್ಟ್ರೀಯ ಗುಪ್ತಚರ ಸಂಸ್ಥೆ ಕಾರ್ಯನಿರ್ವಾಹಕರ ಕಚೇರಿಗಳ ಮೇಲೆ ಸತತ ದಾಳಿ](https://etvbharatimages.akamaized.net/etvbharat/prod-images/27-07-2023/19112585_894_19112585_1690459090303.png)
ರಾಷ್ಟ್ರೀಯ ಗುಪ್ತಚರ ಸಂಸ್ಥೆಗಳು ಅಕ್ರಮ ಹಣ ವರ್ಗಾವಣೆಗಾಗಿ ಪಾಪ್ಯುಲರ್ ಫ್ರಂಟ್ ಸಂಘಟನೆಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸಂಬಂಧಿಸಿದ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ಗಮನಕ್ಕೆ ಬಾರದೇ ವಿದೇಶದಿಂದ ಹಣ ಬಂದಿರುವುದನ್ನು ಪತ್ತೆ ಹಚ್ಚಲು ಜಾರಿ ಇಲಾಖೆ ನಿರಂತರವಾಗಿ ಈ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಕೆಲವೆಡೆ ರಾಷ್ಟ್ರೀಯ ಗುಪ್ತಚರ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಈ ಶೋಧ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳುತ್ತಿವೆ.
ಇದರ ಬೆನ್ನಲ್ಲೇ 10ಕ್ಕೂ ಹೆಚ್ಚು ಜಾರಿ ಅಧಿಕಾರಿಗಳು ಎರಡು ವಾಹನಗಳಲ್ಲಿ ಚೆನ್ನೈನ ವೆಪ್ಪೇರಿಯ ಥಕ್ಕರ್ ಸ್ಟ್ರೀಟ್‌ನಲ್ಲಿ ವಾಸವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಾಜಿ ರಾಜ್ಯಾಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ಅವರ ಮನೆ ಮೇಲೆ ದಾಳಿ ಮಾಡಿವೆ. ಅದೇ ರೀತಿ ಪೆರಿಯಮೇಡುವಿನ ಬೇಕರ್ಸ್ ರಸ್ತೆಯಲ್ಲಿರುವ ನ್ಯೂ ಡಾನ್ ಪತ್ರಿಕೆಯ ಕಚೇರಿಯಲ್ಲಿ ಹಾಗೂ ಜ್ಯೋತಿ ವೆಂಕಟಾಚಲಂ ಬೀದಿಯಲ್ಲಿರುವ ನ್ಯೂ ಡಾನ್ ಪತ್ರಿಕೆಯ ಸಂಪಾದಕ ಮತ್ತು ಉದ್ಯಮಿ ಇಬ್ರಾಹಿಂ ಅಸ್ಕರ್ ಅವರ ಮನೆಯ ಮೇಲೆ ದಾಳಿ ಮಾಡಿರುವ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಇಸ್ಮಾಯಿಲ್ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರು ಆಗಿದ್ದಾಗ ಸಂಸ್ಥೆಗೆ ಬಂದ ಹಣದ ಬಗ್ಗೆ ದಾಖಲೆಗಳನ್ನು ನೀಡುವಂತೆ ವಿಚಾರಣೆ ನಡೆಸಿದ್ದರು. ದಾಳಿ ವೇಳೆ, ಎಸ್ಬಿಐ ಬ್ಯಾಂಕ್ ಅಧಿಕಾರಿಗಳೂ ಇದ್ದರು ಎನ್ನಲಾಗಿದೆ. ಸುಮಾರು 4 ಗಂಟೆಗಳ ವಿಚಾರಣೆಯ ನಂತರ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡರು ಮತ್ತು ದಾಳಿಯ ನಂತರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಾಜಿ ರಾಜ್ಯಾಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ಮತ್ತು ಡಾನ್ ಪತ್ರಿಕೆಯ ಸಂಪಾದಕ ಇಬ್ರಾಹಿಂ ಅಸ್ಗರ್ ಅವರನ್ನು ಜಾರಿ ಅಧಿಕಾರಿಗಳ ಕಚೇರಿಗೆ ಕರೆದೊಯ್ಯಲಾಯಿತು. ಇಬ್ಬರ ಬಗ್ಗೆಯೂ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷವೆಂದರೆ, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ, ರಾಷ್ಟ್ರೀಯ ಗುಪ್ತಚರ ಸಂಸ್ಥೆ ಅಧಿಕಾರಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿ ಮತ್ತು ಚೆನ್ನೈನಲ್ಲಿರುವ ಇಸ್ಮಾಯಿಲ್ ಅವರ ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಜಾರಿ ನಿರ್ದೇಶನಾಲಯವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಆಪಾದಿತ ಮನಿ ಲಾಂಡರಿಂಗ್ ಚಟುವಟಿಕೆಗಳ ತನಿಖೆಯನ್ನು ಶ್ರದ್ಧೆಯಿಂದ ನಡೆಸುತ್ತಿದೆ. ಇಸ್ಮಾಯಿಲ್ ಅವರ ನಿವಾಸ ಮತ್ತು ಇತರ ಸಂಬಂಧಿತ ಸ್ಥಳಗಳ ಮೇಲಿನ ದಾಳಿಗಳು ಸಂಸ್ಥೆಯೊಳಗಿನ ಸಂಭಾವ್ಯ ಹಣಕಾಸಿನ ಅಕ್ರಮಗಳು ಮತ್ತು ಅಕ್ರಮ ವಹಿವಾಟುಗಳನ್ನು ಬಹಿರಂಗಪಡಿಸುವ ದೊಡ್ಡ ಪ್ರಯತ್ನದ ಭಾಗವಾಗಿದೆ.
ತನಿಖೆ ಮುಂದುವರಿದಂತೆ, ಯಾವುದೇ ಕಾನೂನುಬಾಹಿರ ಚಟುವಟಿಕೆಗಳ ಪ್ರಮಾಣವನ್ನು ನಿರ್ಧರಿಸಲು ಸಂಪೂರ್ಣ ಮತ್ತು ನಿಷ್ಪಕ್ಷಪಾತ ಪರೀಕ್ಷೆಯನ್ನು ನಡೆಸಲು ಅಧಿಕಾರಿಗಳು ಬದ್ಧರಾಗಿದ್ದಾರೆ.
ಓದಿ: ಶಿವಮೊಗ್ಗ: ಹಾಫ್ ಹೆಲ್ಮೆಟ್ ವಶಕ್ಕೆ; ಹೆಲ್ಮೆಟ್ ಅಂಗಡಿಗಳ ಮೇಲೆ ಸಂಚಾರಿ ಪೊಲೀಸರ ದಾಳಿ