ರಾಯ್ಪುರ (ಛತ್ತೀಸ್‌ಗಢ): ಛತ್ತೀಸ್‌ಗಢದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಉಪ ಕಾರ್ಯದರ್ಶಿ ಹಾಗೂ ಐಎಎಸ್ ಅಧಿಕಾರಿ ಸೇರಿದಂತೆ ಇತರರಿಗೆ ಸೇರಿದ 152 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಸಿಎಂ ಭೂಪೇಶ್ ಬಘೇಲ್ ಅವರ ಉಪ ಕಾರ್ಯದರ್ಶಿ ಸೌಮ್ಯ ಚೌರಾಸಿಯಾ, ಅಮಾನತುಗೊಂಡ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ ಮತ್ತು ಕಲ್ಲಿದ್ದಲು ಉದ್ಯಮಿ ಸೂರ್ಯಕಾಂತ್ ತಿವಾರಿ ಅವರಿಗೆ ಸೇರಿದ ಆಸ್ತಿ ಇದಾಗಿದೆ. ಇದರಲ್ಲಿ ನಗದು, ಆಭರಣಗಳು, ಫ್ಲಾಟ್‌ಗಳು, ಕಲ್ಲಿದ್ದಲು ವಾಷರಿಸ್ ಮತ್ತು ಜಮೀನುಗಳು ಸಹ ಸೇರಿವೆ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ಬಳಿಕ ಇಡಿ ಅಧಿಕಾರಿಗಳು ಒಟ್ಟಾರೆ ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
-
ED has provisionally attached movable & 91 immovable properties worth ₹152.31 Cr belonging to Suryakant Tiwari, Ms Saumya Chaurasia, Sameer Vishnoi IAS, Sunil Agarwal & ors. The properties include cash, jewellery, flats, coal Washeries & plots of land located in the Chhattisgarh
— ED (@dir_ed) December 10, 2022 " class="align-text-top noRightClick twitterSection" data="
">ED has provisionally attached movable & 91 immovable properties worth ₹152.31 Cr belonging to Suryakant Tiwari, Ms Saumya Chaurasia, Sameer Vishnoi IAS, Sunil Agarwal & ors. The properties include cash, jewellery, flats, coal Washeries & plots of land located in the Chhattisgarh
— ED (@dir_ed) December 10, 2022ED has provisionally attached movable & 91 immovable properties worth ₹152.31 Cr belonging to Suryakant Tiwari, Ms Saumya Chaurasia, Sameer Vishnoi IAS, Sunil Agarwal & ors. The properties include cash, jewellery, flats, coal Washeries & plots of land located in the Chhattisgarh
— ED (@dir_ed) December 10, 2022
ಇದನ್ನೂ ಓದಿ: ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳ ಪೌರೋಹಿತ್ಯದಲ್ಲಿ ₹500 ಕೋಟಿ ಕಲ್ಲಿದ್ದಲು ಹಗರಣ
ಇದೇ ವೇಳೆ ಸೌಮ್ಯ ಚೌರಾಸಿಯಾ ಬಂಧನ ಅವಧಿಯನ್ನು ನ್ಯಾಯಾಲಯ ಡಿಸೆಂಬರ್ 14ರವರೆಗೆ ವಿಸ್ತರಿಸಿದೆ. ಉಳಿದ ನಾಲ್ವರು ಆರೋಪಿಗಳನ್ನು ಜನವರಿ 13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಕಲ್ಲಿದ್ದಲು ಸಾಗಣೆಯಿಂದ ಸುಮಾರು 540 ಕೋಟಿ ರೂಪಾಯಿ ಹಣ ಸುಲಿಗೆ ಆರೋಪದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: ಜಿಲ್ಲಾಧಿಕಾರಿ ಮನೆ ಮೇಲೆ ಇಡಿ ದಾಳಿ