ಮುಂಬೈ: ಮಮತಾ ಬ್ಯಾನರ್ಜಿ ಅವರಿಗೆ 24 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ತಡೆ ನೀಡಿರುವ ಚುನಾವಣಾ ಆಯೋಗದ ನಿರ್ಧಾರ ಬಿಜೆಪಿಯ ಆದೇಶದ ಮೇರೆಗೆ ತೆಗೆದುಕೊಳ್ಳಲಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ. ಇದು "ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ" ಮತ್ತು ದೇಶದ ಸ್ವತಂತ್ರ ಸಂಸ್ಥೆಗಳ ದುರುಪಯೋಗ ಎಂದು ರಾವತ್ ಟ್ವೀಟ್ ಮಾಡಿದ್ದಾರೆ.
ಮಮತಾ ಬ್ಯಾನರ್ಜಿ ಅವರನ್ನು ಬಂಗಾಳದ ಹುಲಿ ಎಂದು ಸಂಬೋಧಿಸಿದ ರಾವತ್, ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಶಿವಸೇನೆ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಬೆಂಬಲ ಸೂಚಿಸಿದೆ.
-
ECI has imposed a ban on Mamta didi for 24 hours. This is clearly done at the behest of BJP, ruling party in India. It is a direct attack on democracy and sovereignty of independent institutions of India. solidarity with Bengal Tigress, @MamataOfficial
— Sanjay Raut (@rautsanjay61) April 13, 2021 " class="align-text-top noRightClick twitterSection" data="
@derekobrienmp pic.twitter.com/oGxPJZdrSL
">ECI has imposed a ban on Mamta didi for 24 hours. This is clearly done at the behest of BJP, ruling party in India. It is a direct attack on democracy and sovereignty of independent institutions of India. solidarity with Bengal Tigress, @MamataOfficial
— Sanjay Raut (@rautsanjay61) April 13, 2021
@derekobrienmp pic.twitter.com/oGxPJZdrSLECI has imposed a ban on Mamta didi for 24 hours. This is clearly done at the behest of BJP, ruling party in India. It is a direct attack on democracy and sovereignty of independent institutions of India. solidarity with Bengal Tigress, @MamataOfficial
— Sanjay Raut (@rautsanjay61) April 13, 2021
@derekobrienmp pic.twitter.com/oGxPJZdrSL
ಓದಿ : ದೀದಿ ಚುನಾವಣಾ ರ‍್ಯಾಲಿಗೆ ನಿರ್ಬಂಧ.. ಧರಣಿ ಕುಳಿತ ಟಿಎಂಸಿ ನಾಯಕಿ
ಕೇಂದ್ರ ಪಡೆಗಳ ವಿರುದ್ಧ ಮತ್ತು ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಮಮತಾ ಬ್ಯಾನರ್ಜಿ ಅವರು 24 ಗಂಟೆ ಚುನಾವಣಾ ಪ್ರಚಾರ ಮಾಡದಂತೆ ಚುನಾವಣಾ ಆಯೋಗ ತಡೆ ನೀಡಿದೆ.
ಏಪ್ರಿಲ್ 12 ರ ರಾತ್ರಿ 8 ರಿಂದ ಏಪ್ರಿಲ್ 13 ರ ರಾತ್ರಿ 8 ರವರೆಗೆ ಪ್ರಚಾರ ಮಾಡದಂತೆ ಚುನಾವಣಾ ಆಯೋಗ ವಿಧಿಸುವ 24 ಗಂಟೆಗಳ ತಡೆಯನ್ನು ವಿರೋಧಿಸಿ ಮಮತಾ ಬ್ಯಾನರ್ಜಿ ಕೋಲ್ಕತ್ತಾದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರು.