ETV Bharat / bharat

ಶಿಂದೆ ಬಣಕ್ಕೆ 'ಎರಡು ಕತ್ತಿ ಮತ್ತು ಗುರಾಣಿ' ಚಿಹ್ನೆ ಹಂಚಿಕೆ ಮಾಡಿದ ಚುನಾವಣಾ ಆಯೋಗ

ಅಂಧೇರಿ ಪೂರ್ವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿಂಧೆ ನೇತೃತ್ವದ ಬಣವು ಇಂದು ಬೆಳಗ್ಗೆ ಚುನಾವಣಾ ಆಯೋಗಕ್ಕೆ ಮೂರು ಚುನಾವಣಾ ಚಿಹ್ನೆಗಳ ಆಯ್ಕೆಯನ್ನು ಸಲ್ಲಿಸಿತ್ತು. ಸದ್ಯ ಆಯೋಗವು ಅವರ ಪಕ್ಷಕ್ಕೆ ಚಿಹ್ನೆಗಳನ್ನು ನೀಡಿದೆ. ಹಾಗಾಗಿ ಪಕ್ಷವನ್ನು ಸಕ್ರಿಯಗೊಳಿಸಲು ಆಯೋಗ ಮಧ್ಯಂತರ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರಿಂದ ಸದ್ಯಕ್ಕೆ ವಿವಾದ ತಟಸ್ಥಗೊಂಡಿದೆ.

ECI allots 'two swords and shield' symbol to Shinde-led Balasahebanchi Shiv Sena
ಶಿಂಧೆ ಬಣಕ್ಕೆ 'ಎರಡು ಕತ್ತಿಗಳು ಮತ್ತು ಗುರಾಣಿ' ಚಿಹ್ನೆ ಹಂಚಿಕೆ ಮಾಡಿದ ಚುನಾವಣಾ ಆಯೋಗ
author img

By

Published : Oct 11, 2022, 8:25 PM IST

ಮುಂಬೈ/ನವದೆಹಲಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಬಾಳಾಸಾಹೆಬಂಚಿ ಶಿವಸೇನೆ ಪಕ್ಷಕ್ಕೆ ಚುನಾವಣಾ ಆಯೋಗವು ಇಂದು (ಮಂಗಳವಾರ) 'ಎರಡು ಕತ್ತಿಗಳು ಮತ್ತು ಗುರಾಣಿ' ಚಿಹ್ನೆಯನ್ನಾಗಿ ಹಂಚಿಕೆ ಮಾಡಿದೆ. ಮುಂಬರುವ ಅಂಧೇರಿ (ಪೂರ್ವ) ಉಪಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ನಿನ್ನೆ ‘ಬಾಳಾಸಾಹೆಬಂಚಿ ಶಿವಸೇನಾ’ ಎಂಬ ಹೆಸರನ್ನು ನೀಡಿತ್ತು. ಇಂದು ಹೊಸ ಚಿಹ್ನೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂಧೇರಿ ಪೂರ್ವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಹಾಕುವ ಸಂಬಂಧ ಏಕನಾಥ್ ಶಿಂಧೆ ನೇತೃತ್ವದ ಬಣವಾದ ಬಾಳಾಸಾಹೆಬಂಚಿ ಶಿವಸೇನಾ ಮಂಗಳವಾರ ತನ್ನ ಮೂರು ಚುನಾವಣಾ ಚಿಹ್ನೆಗಳ ಪಟ್ಟಿಯನ್ನು ಆಯ್ಕೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು. ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಚುನಾವಣಾ ಆಯೋಗವು ಎರಡು ಕತ್ತಿಗಳು ಮತ್ತು ಗುರಾಣಿಅನ್ನು ಹಂಚಿಕೆ ಮಾಡಿದೆ.

  • This 'Two Swords & Shield symbol' is an identity of Chhatrapati Shivaji Maharaj and people know about it. Balasaheb's Shiv Sainiks are happy today. We will contest election on this symbol and we will win: Maharashtra CM Eknath Shinde on symbol allotted to their faction by ECI pic.twitter.com/fitBkZYPNn

    — ANI (@ANI) October 11, 2022 " class="align-text-top noRightClick twitterSection" data=" ">

ಇನ್ನು ಇತ್ತೀಚೆಗೆ ಚುನಾವಣಾ ಆಯೋಗವು ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಎರಡೂ ಸೇನಾ ಬಣಗಳ ನಡುವಿನ ವೈಷಮ್ಯದ ನಂತರ ಮಧ್ಯಂತರ ಅವಧಿಗೆ 'ಬಿಲ್ಲು ಮತ್ತು ಬಾಣ' ಚಿಹ್ನೆ ಸ್ಥಗಿತಗೊಳಿಸಿತ್ತು. ಅಲ್ಲದೇ 'ಶಿವಸೇನೆ' ಎಂಬ ಹೆಸರನ್ನು ಬಳಸದಂತೆ ಎರಡು ಕಡೆಯವರಿಗೂ ಆದೇಶಿಸಿತ್ತು.

ಶಿವಸೇನೆಯ ಎರಡು ಬಣಗಳ ನಡುವಿನ ವಿವಾದವನ್ನು ಚುನಾವಣಾ ಆಯೋಗವು ನಿರ್ಣಯಿಸುವವರೆಗೂ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೇ ಚುನಾವಣಾ ಆಯೋಗವು ನಿನ್ನೆ ಶಿವಸೇನೆಯ ಠಾಕ್ರೆ ಬಣಕ್ಕೆ ಜ್ಯೋತಿಯನ್ನು (ಪಂಚು) ಚುನಾವಣಾ ಚಿಹ್ನೆಯನ್ನಾಗಿ ಮಂಜೂರು ಮಾಡಿದ್ದು ಈ ಬಣಕ್ಕೆ 'ಶಿವಸೇನಾ - ಉದ್ಧವ್ ಬಾಳಾಸಾಹೇಬ್ ಠಾಕ್ರೆ' ಎಂಬ ಹೆಸರನ್ನು ಸಹ ನೀಡಿದೆ.

ಏಕನಾಥ್ ಶಿಂಧೆ ನೇತೃತ್ವದ ಬಾಳಾಸಾಹೆಬಂಚಿ ಶಿವಸೇನೆ ಪಕ್ಷವು 'ಹೊಳೆಯುತ್ತಿರುವ ಸೂರ್ಯ', 'ಗುರಾಣಿ ಮತ್ತು ಕತ್ತಿ' ಮತ್ತು 'ಆಲದ ಮರ' ಚಿಹ್ನೆಗಳ ಪಟ್ಟಿ ಸಲ್ಲಿಸಿದ್ದರೆ ಉದ್ಧವ್ ಠಾಕ್ರೆ ಬಣವು ತ್ರಿಶೂಲ್ ಅನ್ನು ಪಕ್ಷದ ಚಿಹ್ನೆಯಾಗಿ ಬೇಕೆಂದು ಸೂಚಿಸಿದ್ದರು. ಧಾರ್ಮಿಕ ಕಾರಣಗಳನ್ನು ಉಲ್ಲೇಖಿಸಿ ಈ ಬೇಡಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಸದ್ಯ ವಿವಾದ ತಿಳಿಗೊಳಿಸಲು ಹೊಸ ಚಿಹ್ನೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಹತ್ತು ದಿನದಲ್ಲಿ ದೇವಸ್ಥಾನ ಖಾಲಿ ಮಾಡಿ: ಹನುಮ ದೇವರಿಗೆ ರೈಲ್ವೆ ಇಲಾಖೆ ನೋಟಿಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.