ನವದೆಹಲಿ: ಚುನಾವಣಾ ಆಯೋಗವು ಇಂದು ಪತ್ರಿಕಾಗೋಷ್ಠಿಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮಧ್ಯಾಹ್ನ 3 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ಆರಂಭವಾಗಲಿದೆ.
ಗುಜರಾತ್ ಸರ್ಕಾರದ ಅವಧಿಯು ಮುಂದಿನ ವರ್ಷ ಫೆಬ್ರವರಿ 18 ರಂದು ಮತ್ತು ಹಿಮಾಚಲ ಪ್ರದೇಶದ ಸರ್ಕಾರದ ಅವಧಿಯು ಜನವರಿ 8, 2023 ರಂದು ಕೊನೆಗೊಳ್ಳುತ್ತದೆ. ಆಯೋಗವು ಇತ್ತೀಚೆಗೆ ಗುಜರಾತ್ ಮತ್ತು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು, ಎರಡು ರಾಜ್ಯಗಳು ಚುನಾವಣೆಗೆ ಎಷ್ಟು ಸಿದ್ಧವಾಗಿವೆ ಎಂಬುದನ್ನು ಗಮನಿಸಿತ್ತು. ಇನ್ನು ಎರಡು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ದಿನ ಸನಿಹಕ್ಕೆ ಬರುತ್ತಿದ್ದಂತೆ ಎಲ್ಲ ಪಕ್ಷದವರು ಮತದಾರರನ್ನು ಸೆಳೆಯಲು ಅನೇಕ ಯೋಜನೆಗಳು ಹಾಕಿಕೊಂಡಿದ್ದಾರೆ.
ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆಗೆ ದಿನ ಸನ್ನಿಹಿತವಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಅದಕ್ಕೆ ತಯಾರಿಯನ್ನು ತೀವ್ರಗೊಳಿಸಿದೆ. ರಾಜಕೀಯ ಪಡಸಾಲೆಯಲ್ಲಿ ಚುನಾವಣಾ ತಂತ್ರಗಳನ್ನು ಹೆಣೆಯುತ್ತಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಸಂಘಟನಾ ಲೋಪದಿಂದ ಬಿಜೆಪಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಇದೀಗ 2023ರಲ್ಲಿ ಅದೇ ತಪ್ಪನ್ನು ಪುನರಾವರ್ತಿಸಲು ಪಕ್ಷ, ಪಕ್ಷದಲ್ಲಿನ ನಾಯಕರು ಸಿದ್ಧರಿಲ್ಲ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ.
ಓದಿ: ಶಿಂದೆ ಬಣಕ್ಕೆ 'ಎರಡು ಕತ್ತಿ ಮತ್ತು ಗುರಾಣಿ' ಚಿಹ್ನೆ ಹಂಚಿಕೆ ಮಾಡಿದ ಚುನಾವಣಾ ಆಯೋಗ