ETV Bharat / bharat

ಕೋಮು ನೆಲೆಯಲ್ಲಿ ಮತಯಾಚನೆ ಆರೋಪ: ದೀದಿಗೆ ಚುನಾವಣೆ ಆಯೋಗದ ನೋಟಿಸ್​ ಜಾರಿ

author img

By

Published : Apr 7, 2021, 10:59 PM IST

ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷ ಉತ್ತೇಜಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ಚುನಾವಣಾ ಮುಖಂಡರ ನಿಯೋಗ ಅಧಿಕಾರಿಗಳನ್ನು ಭೇಟಿಯಾಗಿ ಒತ್ತಾಯಿಸಿದೆ. ಜನರ ಪ್ರಾತಿನಿಧ್ಯ ಕಾಯ್ದೆ ಮತ್ತು ಮಾದರಿ ಸಂಹಿತೆ ನಿಬಂಧನೆ ಉಲ್ಲಂಘಿಸಿದ ಆಪಾದನೆಯಡಿ ಭಾಷಣ ಮಾಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ ನೋಟಿಸ್​ಗೆ ಉತ್ತರ ನೀಡುವಂತೆ ಚುನಾವಣೆ ಆಯೋಗ ಕೋರಿದೆ.

Mamata Banerjee
Mamata Banerjee

ನವದೆಹಲಿ: ತೃಣಮೂಲ ಕಾಂಗ್ರೆಸ್​ಗೆ (ಟಿಎಂಸಿ) ಒಗ್ಗೂಡಿ ಮತ ಚಲಾಯಿಸುವಂತೆ ಮುಸ್ಲಿಮರನ್ನು ಒತ್ತಾಯಿಸುವ ಮೂಲಕ ಮಾದರಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ಜನರ ಪ್ರಾತಿನಿಧ್ಯ ಕಾಯ್ದೆ ಮತ್ತು ಮಾದರಿ ಸಂಹಿತೆ ನಿಬಂಧನೆ ಉಲ್ಲಂಘಿಸಿದ ಆಪಾದನೆಯಡಿ ಭಾಷಣ ಮಾಡಲಾಗಿದೆ. ಮುಂದಿನ 48 ಗಂಟೆಗಳಲ್ಲಿ ನೋಟಿಸ್​ಗೆ ಉತ್ತರ ನೀಡುವಂತೆ ಆಯೋಗ ಕೋರಿದೆ.

ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷ ಉತ್ತೇಜಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಜೆಪಿ ಚುನಾವಣಾ ಮುಖಂಡರ ನಿಯೋಗ ಅಧಿಕಾರಿಗಳನ್ನು ಭೇಟಿಯಾಗಿ ಒತ್ತಾಯಿಸಿದೆ.

ಮುಸ್ಲಿಂ ಮತದಾರರಿಗೆ ತಮ್ಮ ಮತಗಳನ್ನು ವಿಭಜಿಸಲು ಬಿಡಬೇಡಿ ಎಂದು ಮಮತಾ ಚುನಾವಣೆ ಪ್ರಚಾರದಲ್ಲಿ ಮನವಿ ಮಾಡಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ: ಪರೀಕ್ಷೆಯಲ್ಲಿ ವಿಫಲವಾದರೆ, ಅದು ಜೀವನದ ಸೋಲು ಅಲ್ಲ: ವಿದ್ಯಾರ್ಥಿಗಳಿಗೆ ನಮೋ ಕಿವಿ ಮಾತು!

ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್ ದಿಯೋಧರ್, ಹಿರಿಯ ನಾಯಕ ಜಿ.ವಿ.ಎಲ್. ನರಸಿಂಹ ರಾವ್ ಮತ್ತು ಇತರರು ಚುನಾವಣೆ ಆಯೋಗದ ಸಮಿತಿ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.

ಏಪ್ರಿಲ್ 3 ರಂದು ತರ್ಕೇಶ್ವರದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಬ್ಯಾನರ್ಜಿ ಅವರು ಮುಸ್ಲಿಂ ಮತದಾರರಿಗೆ ತಮ್ಮ ಮತಗಳನ್ನು ವಿವಿಧ ರಾಜಕೀಯ ಪಕ್ಷಗಳ ನಡುವೆ ವಿಭಜಿಸಲು ಬಿಡದಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು.

ತಾರ್ಕೇಶ್ವರದಲ್ಲಿ ನಡೆದ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿಎಂ, ಮುಸ್ಲಿಮರನ್ನು ಭಾರತೀಯ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಅಬ್ಬಾಸ್ ಸಿದ್ದಿಕಿ ಮತ್ತು ಎಐಎಂಐಎಂ ಅಸಾದುದ್ದೀನ್ ಒವೈಸಿ ಅವರ ಮಾತುಗಳಿಗೆ ಕಿವಿಗೊಡಬಾರದು. ನಿಮ್ಮ ಮತಗಳು ವಿಭಜನೆ ಆಗಬಾರದು ಎಂದಿದ್ದಾರೆ ಎಂಬ ಮಾತುಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.