ETV Bharat / bharat

Earthquake.. ದೆಹಲಿ ಸೇರಿ ಉತ್ತರ ಭಾರತದಲ್ಲಿ ಕಂಪಿಸಿದ ಭೂಮಿ.. 5.4 ತೀವ್ರತೆ ದಾಖಲು!

author img

By

Published : Jun 13, 2023, 2:23 PM IST

Updated : Jun 13, 2023, 2:32 PM IST

Earthquake tremors felt: ಮಧ್ಯಾಹ್ನ ರಾಷ್ಟ್ರರಾಜಧಾನಿ ಸೇರಿ ಇಡೀ ಉತ್ತರ ಭಾರತದಲ್ಲಿ ಭೂಮಿ ಕಂಪಿಸಿದೆ. ಜಮ್ಮು ಮತ್ತು ಕಾಶ್ಮೀರದ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದ್ದು, ರಿಕ್ಟರ್​ ಮಾಪದಲ್ಲಿ 5.4 ತೀವ್ರತೆ ದಾಖಲಾಗಿರುವುದಾಗಿ ತಿಳಿದು ಬಂದಿದೆ.

Earthquake tremors felt in Delhi  Earthquake tremors felt in parts of north India  Earthquake tremors felt  ಉತ್ತರ ಭಾರದಲ್ಲಿ ಭೂಮಿ ಕಂಪಿಸಿದೆ  ಜಮ್ಮು ಮತ್ತು ಕಾಶ್ಮೀರದ ಭೂಕಂಪನ  ಉತ್ತರ ಭಾರದಲ್ಲಿ ಕಂಪನಿಸಿದ ಭೂಮಿ  ಭೂಕಂಪದ ತೀವ್ರತೆ ರಿಕ್ಟರ್ ಮಾಪಕ  ಕೆಲವು ನಗರಗಳಲ್ಲಿಯೂ ಭೂಕಂಪನದ ಅನುಭವ
ಉತ್ತರ ಭಾರದಲ್ಲಿ ಕಂಪನಿಸಿದ ಭೂಮಿ

ನವದೆಹಲಿ: ದೆಹಲಿ - ಎನ್‌ಸಿಆರ್ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಮಂಗಳವಾರ ಮಧ್ಯಾಹ್ನ 1.30 ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ಶ್ರೀನಗರ ಮತ್ತು ಪಂಜಾಬ್‌ನ ಕೆಲವು ನಗರಗಳಲ್ಲಿಯೂ ಭೂಮಿ ಕಂಪಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಂಪನದ ತೀವ್ರತೆಯು ತುಂಬಾ ಕಡಿಮೆಯಾಗಿದೆ.

ಆದರೆ ಅನೇಕ ಜನರು ಕಂಪನವನ್ನು ಅನುಭವಿಸಿರುವುದರ (Earthquake tremors felt) ಬಗ್ಗೆ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಭೂಕಂಪದ ಕೇಂದ್ರಬಿಂದು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನ ಆಗ್ನೇಯಕ್ಕೆ 30 ಕಿಮೀ ದೂರದಲ್ಲಿದೆ ಎಂದು ಹೇಳಲಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.4 ದಾಖಲಾಗಿದೆ ಎಂದು ವರದಿಯಾಗಿದೆ.

  • #WATCH | An earthquake of magnitude 5.4 on the Richter scale hit Doda, J&K at 1:33 pm this afternoon.

    A local from Srinagar says, "The earthquake scared school children. People in shops rushed out. It was scary. This was more intense than the tremors last week..." pic.twitter.com/c08L07mz6i

    — ANI (@ANI) June 13, 2023 " class="align-text-top noRightClick twitterSection" data=" ">

ಶ್ರೀನಗರದ ಸ್ಥಳೀಯರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, "ಭೂಕಂಪದಿಂದಾಗಿ ಶಾಲಾ ಮಕ್ಕಳು ಭಯಭೀತರಾಗಿದ್ದಾರೆ. ಅಂಗಡಿಗಳಲ್ಲಿದ್ದ ಜನರು ಹೊರಗೆ ಧಾವಿಸಿದರು. ಇದು ಭಯಭೀತವಾಗಿತ್ತು. ಇದು ಕಳೆದ ವಾರದ ಕಂಪನಕ್ಕಿಂತ ಹೆಚ್ಚು ತೀವ್ರವಾಗಿತ್ತು ಎಂದು ಮಾಹಿತಿ ನೀಡಿದರು.

ಶ್ರೀನಗರದ ಮತ್ತೊಬ್ಬ ಸ್ಥಳೀಯರಾದ ಬಶೀರ್ ಮಾತನಾಡಿ, 1.30 ಸುಮಾರಿಗೆ ಭೂಮಿ ಕಂಪಿಸಿತು. ನಡುಕ ಸಾಕಷ್ಟು ಪ್ರಬಲವಾಗಿತ್ತು. ನಾವೂ ಕೂಡ ಹೊರಗೆ ಧಾವಿಸಿದೆವು. ಭೂ ಕಂಪನಿಂದಾಗಿ ಎಲ್ಲರೂ ಭಯಭೀತರಾಗಿದ್ದೇವೆ. ಮಕ್ಕಳು ಮತ್ತು ಮಹಿಳೆಯರು ಭಯಭೀತರಾಗಿದ್ದರು. ಭೂಕಂಪನಿಂದಾಗಿ ಕಟ್ಟಡಗಳು ಸಹ ಬೀಳುತ್ತವೆ ಎಂಬ ಭಯದಲ್ಲಿದ್ದೆವು. ದೇವರ ದಯದಿಂದ ಅಂತಹ ಅನಾಹುತಗಳು ಸಂಭವಿಸಲಿಲ್ಲ ಎಂದು ಹೇಳಿದರು. ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಓದಿ: ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನ: ವಿಡಿಯೋ

ಫೆಬ್ರುವರಿ ಸಂಭವಿಸಿತ್ತು ಭೀಕರ ಭೂಕಂಪ: ಫೆಬ್ರವರಿ 6 ರಂದು ದಕ್ಷಿಣ ಟರ್ಕಿಯ 11 ಪ್ರಾಂತ್ಯಗಳು ಮತ್ತು ಉತ್ತರ ಸಿರಿಯಾದ ಹಲವು ಭಾಗಗಳಲ್ಲಿ 7.8 ತೀವ್ರತೆಯ ಭೂಕಂಪದ ಉಂಟಾಗಿತ್ತು. ಇದರಿಂದ 50 ಸಾವಿರಕ್ಕೂ ಅಧಿಕ ಜನರು ಸಾವಿಗೀಡಾಗಿದ್ದರು. 44 ಸಾವಿರಕ್ಕೂ ಅಧಿಕ ಜನರು ಟರ್ಕಿಯೊಂದರಲ್ಲೇ ಪ್ರಾಣ ಕಳೆದುಕೊಂಡಿದ್ದರೆ, ಸಿರಿಯಾದಲ್ಲಿ 6 ಸಾವಿರಕ್ಕೂ ಹೆಚ್ಚು ಸಾವಾಗಿತ್ತು. ಇನ್ನು ಟರ್ಕಿಯಲ್ಲಿ 1.73 ಲಕ್ಷ ಕಟ್ಟಡಗಳು ಭಾಗಶಃ ಮತ್ತು ಸಂಪೂರ್ಣ ಹಾನಿಗೀಡಾಗಿದ್ದವು.

ಟರ್ಕಿ ಭೂಪ್ರದೇಶವೇ ದೋಷಪೂರಿತ: ಟರ್ಕಿಯಲ್ಲಿ ನಿರಂತರವಾಗಿ ಭೂಕಂಪನಗಳು ಉಂಟಾಗುತ್ತವೆ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ದೋಷಪೂರಿತ ಭೂಪ್ರದೇಶ. ಟರ್ಕಿಯು ಅನಾಟೋಲಿಯನ್ ಟೆಕ್ಟೋನಿಕ್ ಪ್ಲೇಟ್‌ನಲ್ಲಿದೆ. ಇದು ದೋಷಪೂರಿತ ಪದರವಾಗಿದ್ದು, ಇಲ್ಲಿ ಸತತವಾಗಿ ಕಂಪನ ಉಂಟಾಗುತ್ತಿರುತ್ತದೆ. ಭೂಮಿಯ ಶಿಲಾ ಪದರವು ಟೆಕ್ಟೋನಿಕ್ ಪ್ಲೇಟ್‌ಗಳು ಎಂದು ಕರೆಯಲ್ಪಡುವ ಸುಮಾರು 15 ಪ್ರಮುಖ ಚಪ್ಪಡಿಗಳಿಂದ ಕೂಡಿರುತ್ತದೆ. ಈ ಪ್ಲೇಟ್​ಗಳ ನಡುವೆ ತಿಕ್ಕಾಟ ಸಹಜ. ಶಿಲಾ ಪದರಗಳ ಘರ್ಷಣೆಯಿಂದ ಮುರಿತ ಉಂಟಾಗಿ ಹಠಾತ್​ ಚಲನೆಯಿಂದ ಭೂಕಂಪನ ಉಂಟಾಗುತ್ತದೆ ಎಂದು ಬ್ರಿಟಿಷ್ ಪುರಾತತ್ವ ಸಮೀಕ್ಷೆ ಹೇಳಿತ್ತು.

Last Updated : Jun 13, 2023, 2:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.