ನವದೆಹಲಿ: ಭಾರತ, ನೇಪಾಳದಲ್ಲಿ ಸರಣಿ ಭೂಕಂಪನ ಸಂಭವಿಸಿದೆ. ಉತ್ತರಾಖಂಡದ ರಿಷಿಕೇಶದಲ್ಲಿ 3.4 ಪ್ರಮಾಣದ ಭೂಕಂಪನ ಸಂಭವಿಸಿದ ಬಳಿಕ, ದೆಹಲಿಯಲ್ಲೂ ಭೂಮಿ ನಡುಗಿದೆ. ನೇಪಾಳದಲ್ಲಿ 5.4 ನಷ್ಟು ಬಲವಾದ ನಡುಕ ಉಂಟಾಗಿದೆ. ನೇಪಾಳದಲ್ಲಿ 7.57 ನಿಮಿಷಕ್ಕೆ ಭೂಮಿ ಅಲುಗಾಡಿದರೆ, ದೆಹಲಿಯಲ್ಲಿ 7.59 ರ ಸುಮಾರಿನಲ್ಲಿ ದಾಖಲಾಗಿದೆ.
ದೆಹಲಿಗೆ ವಾರದಲ್ಲಿ ಎರಡನೇ ಎಫೆಕ್ಟ್: ದೆಹಲಿ ನಿವಾಸಿಗಳಿಗೆ ಪ್ರಕೃತಿ ವಾರದಲ್ಲಿ ಎರಡನೇ ಬಾರಿಗೆ ಶಾಕ್ ನೀಡಿದೆ. ನವೆಂಬರ್ 16 ರಂದು ನೇಪಾಳದಲ್ಲಿ 6.3 ರಷ್ಟು ಪ್ರಬಲ ಭೂಕಂಪನ ಸಂಭವಿಸಿ ಭಾರಿ ನಷ್ಟ ಉಂಟು ಮಾಡಿತ್ತು. ಇದರ ಪ್ರಭಾವ ದೆಹಲಿಯಲ್ಲಿ ಕಾಣಿಸಿಕೊಂಡು, ಇಲ್ಲಿಯೂ ಧರೆ ನಡುಗಿತ್ತು. ಇಂದು ಮತ್ತೆ ರಾತ್ರಿ 7.59 ಗಂಟೆ ಸುಮಾರಿಗೆ ಧಾತ್ರಿ ಕಂಪಿಸಿದೆ.
-
Earthquake of Magnitude:3.4, Occurred on 12-11-2022, 16:25:28 IST, Lat: 29.76 & Long: 78.96, Depth: 5 Km ,Location: 76km ESE of Rishikesh, Uttarakhand, India for more information Download the BhooKamp App https://t.co/FkqoF4e69P pic.twitter.com/589MsywsIR
— National Center for Seismology (@NCS_Earthquake) November 12, 2022 " class="align-text-top noRightClick twitterSection" data="
">Earthquake of Magnitude:3.4, Occurred on 12-11-2022, 16:25:28 IST, Lat: 29.76 & Long: 78.96, Depth: 5 Km ,Location: 76km ESE of Rishikesh, Uttarakhand, India for more information Download the BhooKamp App https://t.co/FkqoF4e69P pic.twitter.com/589MsywsIR
— National Center for Seismology (@NCS_Earthquake) November 12, 2022Earthquake of Magnitude:3.4, Occurred on 12-11-2022, 16:25:28 IST, Lat: 29.76 & Long: 78.96, Depth: 5 Km ,Location: 76km ESE of Rishikesh, Uttarakhand, India for more information Download the BhooKamp App https://t.co/FkqoF4e69P pic.twitter.com/589MsywsIR
— National Center for Seismology (@NCS_Earthquake) November 12, 2022
ನಡುಗಿದ ಅನುಭವವಾದಾಗ ತಕ್ಷಣ ಜನರು ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ. ಸುಮಾರು 30 ರಿಂದ 40 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಇದರ ಪ್ರಮಾಣ ಎಷ್ಟಿತ್ತು ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಅಲ್ಲದೇ, ಯಾವುದೇ ಸಾವು ನೋವಿನ ಬಗ್ಗೆಯೂ ವರದಿಯಾಗಿಲ್ಲ.
ಉತ್ತರಾಖಂಡದಲ್ಲಿ ನಡುಗಿದ ಧರೆ: ದೆಹಲಿಗೂ ಮೊದಲು ಉತ್ತರಾಖಂಡದಲ್ಲೂ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ. ಋಷಿಕೇಶ ಪ್ರದೇಶದಲ್ಲಿ ಇದು ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.4 ರಷ್ಟು ದಾಖಲಾಗಿದೆ. ಚಮೋಲಿಯಲ್ಲಿ ಲಘುವಾಗಿ ಭೂಮಿ ನಡುಗಿದೆ. ಹಿಮಾಲಯದ ತಪ್ಪಲಿನ ಒಳಭಾಗದಲ್ಲಿ ಉಂಟಾಗುವ ಬದಲಾವಣೆಗಳಿಂದ ಈ ಭಾಗದಲ್ಲಿ ಆಗಾಗ್ಗೆ ಭೂಮಿ ಕಂಪಿಸುವುದು ಸಹಜವಾಗಿದೆ.
ನೇಪಾಳದಲ್ಲಿ ನಿಲ್ಲದ ಪ್ರಕೃತಿಯಾಟ: ನೇಪಾಳದಲ್ಲಿ 3 ದಿನಗಳ ಹಿಂದಷ್ಟೇ 6.3 ರಷ್ಟು ಪ್ರಬಲವಾಗಿ ಭೂಮಿ ಕಂಪಿಸಿ ಭಾರಿ ಹಾನಿ ಮಾಡಿದ್ದ ಬೆನ್ನಲ್ಲೇ ಇಂದು ರಾತ್ರಿ 7.57 ರ ಸುಮಾರಿನಲ್ಲಿ ಮತ್ತೆ ಧರೆ ನಡುಗಿದೆ. 10 ಕಿಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಓದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಆರು ಮಂದಿ ಅಪರಾಧಿಗಳು ಜೈಲಿನಿಂದ ರಿಲೀಸ್