ನವದೆಹಲಿ : ಈಶಾನ್ಯ ಭಾರತದ ಹಲವೆಡೆ ಭೂಕಂಪನ ಸಂಭವಿಸಿದೆ. ಸಿಕ್ಕೀಂ-ನೇಪಾಳ ಭಾಗದಲ್ಲಿ ಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ.
ಇದಲ್ಲದೆ ಅಸ್ಸೋಂ, ಬಿಹಾರ ಮತ್ತು ಪಶ್ವಿಮ ಬಂಗಾಳದಲ್ಲೂ ಭೂಮಿ ಕಂಪಿಸಿರುವ ಅನುಭವವಾಗಿದೆ.
ಈ ಘಟನೆಯಲ್ಲಿ ಯಾವುದೇ ಹಾನಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ.