ಗೌಹಾಟಿ : ಅಸ್ಸೋಂನ ಸೋನಿತ್ಪುರ ಜಿಲ್ಲೆಯಲ್ಲಿ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.7ರಷ್ಟು ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದೆ.
ಗೌಹಾಟಿಯ ವಿಪತ್ತು ನಿರ್ವಹಣಾ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಈವರೆಗೆ ಯಾವುದೇ ಪ್ರಾಣ ಅಥವಾ ಆಸ್ತಿಪಾಸ್ತಿ ಹಾನಿಯ ಬಗ್ಗೆ ವರದಿಯಾಗಿಲ್ಲ. ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಪ್ರಕಾರ ಬುಧವಾರ ಸಂಜೆ 5.54ಕ್ಕೆ, ಸುಮಾರು ಹತ್ತು ಕಿಲೋಮೀಟರ್ ಆಳದಲ್ಲಿ ಭೂಕಂಪನ ಜರುಗಿದೆ.
ಇದನ್ನೂ ಓದಿ: ನಡು ರಸ್ತೆಯಲ್ಲೇ ಹೈಕೋರ್ಟ್ ವಕೀಲ ದಂಪತಿ ಭೀಕರ ಹತ್ಯೆ... ಬೆಚ್ಚಿಬಿದ್ದ ತೆಲಂಗಾಣ!
ಗುಡ್ಡಗಾಡುಗಳಿಂದ ಕೂಡಿರುವ ಈಶಾನ್ಯ ರಾಜ್ಯಗಳು, ವಿಶೇಷವಾಗಿ ಮಿಜೋರಾಂ ಮತ್ತು ಮಣಿಪುರದಲ್ಲಿ ಜರುಗುತ್ತಿರುವ ಭೂಕಂಪನಗಳು ಆತಂಕ ಸೃಷ್ಟಿಸಿವೆ. ಆಗಾಗ ಭೂಕಂಪನಗಳಿಗೆ ಈಶಾನ್ಯ ರಾಜ್ಯಗಳು ಸಾಕ್ಷಿಯಾಗುತ್ತವೆ.
ಹಾಗಾಗಿ, ಕಟ್ಟಡ ನಿರ್ಮಾಣ ಗುತ್ತಿಗೆದಾರರು ಮತ್ತು ಉದ್ಯಮಿಗಳಿಗೆ ಭೂಕಂಪನ ತಡೆದುಕೊಳ್ಳಬಲ್ಲ ಕಟ್ಟಡಗಳ ನಿರ್ಮಾಣ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ.