ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನ ಸಂಭವಿಸಿದೆ. ಚಳಿಯ ಜೊತೆ ದೆಹಲಿಗರಿಗೆ ಭೂಕಂಪನದ ಅನುಭವವೂ ಆಗಿದೆ.
ದೆಹಲಿಯ ನಂಗೋಲಿ ಭಾಗದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.3ರಷ್ಟು ತೀವ್ರತೆ ದಾಖಲಲಾಗಿದೆ. ಇಂದು ಮುಂಜಾನೆ 5 ಗಂಟೆ 2 ನಿಮಿಷದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದೆ. ಈವರೆಗೆ ಯಾವುದೇ ಆಸ್ತಿ-ಪಾಸ್ತಿ ನಷ್ಟ ಹಾಗೂ ಪ್ರಾಣಾಪಾಯದ ವರದಿಯಾಗಿಲ್ಲ.
ಫಿಲಿಫೈನ್ಸ್ನಲ್ಲೂ ಭೂಕಂಪನ : ಫಿಲಿಫೈನ್ಸ್ನ ಮನಿಲಾದಲ್ಲಿ 6.2 ತೀವ್ರತೆಯ ಭೂಕಂಪನವಾಗಿದೆ. ಇಂದು ಮುಂಜಾನೆ 5:13ರ ವೇಳೆ ಭೂಕಂಪನ ಸಂಭವಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.