ಉತ್ತರಕಾಶಿ: ಉತ್ತರಾಖಂಡ್ದಲ್ಲಿ 10 ದಿನಗಳ ಅಂತರದಲ್ಲಿ ಎರಡನೇ ಬಾರಿ ಮತ್ತೆ ಭೂಕಂಪನ ಸಂಭವಿಸಿದೆ ಉತ್ತರ ಕಾಶಿಯಲ್ಲಿ ನಿನ್ನೆ ಮಧ್ಯರಾತ್ರಿ ಭೂಮಿ ಕಂಪಿಸಿದೆ. ಮಧ್ಯರಾತ್ರಿ ಸುಮಾರು 2. 19ಕ್ಕೆ ಭೂ ಕಂಪನ ಆಗಿದ್ದು, ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ದಾಖಲಾಗಿದೆ.
ಮಧ್ಯರಾತ್ರಿ ಭೂ ಕಂಪನ: ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅನುಸಾರ ಉತ್ತರ ಕಾಶಿಯಲ್ಲಿ ರಿಕ್ಟರ್ ಮಾಪಕದ ಅನುಸಾರ 3.1 ರ ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರಬಿಂದು ಅಕ್ಷಾಂಶ 30.87 ಮತ್ತು ರೇಖಾಂಶ 78.19 ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ವರದಿ ಮಾಡಿದೆ. ಭೂಕಂಪದ ಆಳವು 5 ಕಿ.ಮೀ ಇದ್ದು, ಈ ಘಟನೆಯಿಂದ ಯಾವುದೇ ಪ್ರಾಣ ಹಾನಿ, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿ ಆಗಿಲ್ಲ.
-
Uttarakhand | An earthquake of 3.1 magnitudes jolted Uttarkashi at 2.19 am (IST)
— ANI UP/Uttarakhand (@ANINewsUP) December 27, 2022 " class="align-text-top noRightClick twitterSection" data="
">Uttarakhand | An earthquake of 3.1 magnitudes jolted Uttarkashi at 2.19 am (IST)
— ANI UP/Uttarakhand (@ANINewsUP) December 27, 2022Uttarakhand | An earthquake of 3.1 magnitudes jolted Uttarkashi at 2.19 am (IST)
— ANI UP/Uttarakhand (@ANINewsUP) December 27, 2022
ನೇಪಾಳದಲ್ಲಿ ಎರಡು ಬಾರಿ ಭೂಕಂಪನ: ಇನ್ನು, ನೆರೆಯ ನೇಪಾಳದಲ್ಲಿ ನಿನ್ನೆ ರಾತ್ರಿ ಎರಡು ಬಾರಿ ಭೂಮಿ ಕಂಪಿಸಿದೆ. ರಾತ್ರಿ ಸ್ಥಳೀಯ ಕಾಲಮಾನ ಅನುಸಾರ 1 ಮತ್ತು 2 ಗಂಟೆಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.7 ಮತ್ತು 5.3 ದಾಖಲಾಗಿದೆ.
ವಲಯ ಐದರಲ್ಲಿ ಉತ್ತರಕಾಶಿ: ಉತ್ತರಾಖಂಡದ ಪಿತೋರಗಢ, ಬಾಗೇಶ್ವರ, ಉತ್ತರಕಾಶಿ, ಚಮೋಲಿ ಮತ್ತು ರುದ್ರಪ್ರಯಾಗ ಜಿಲ್ಲೆಗಳು ವಲಯ 5ರ ಅಡಿಯಲ್ಲಿ ಬರುತ್ತವೆ. ಭೂಕಂಪನ ಕೇಂದ್ರೀಕೃತವಾಗಿರುವ ಪ್ರದೇಶವನ್ನು ವಿವರಿಸಲು ಭೂಕಂಪನ ವಲಯವನ್ನು ಬಳಸಲಾಗುತ್ತದೆ.
ಇದನ್ನೂ ಓದಿ: ಸ್ಟೌನಿಂದ ಸುಟ್ಟು ಭಸ್ಮವಾದ ಮನೆ: ಒಂದೇ ಕುಟುಂಬದ ಐವರು ಸಜೀವ ದಹನ