ಚಂಬಾ: ಹಿಮಾಚಲ ಪ್ರದೇಶದ ಚಂಬಾದಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 2.6 ಎಂದು ನಮೂದಾಗಿದೆ. ಮಂಗಳವಾರ ಬೆಳಗ್ಗೆ 5:54 ಗಂಟೆಗೆ ಭೂಕಂಪನ ಸಂಭವಿಸಿದ್ದು, ಪ್ರಸ್ತುತ ಯಾವುದೇ ಜೀವ ಹಾನಿ ಸಂಭವಿಸಿರುವುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ಇದಕ್ಕೂ ಮೊದಲು ಜುಲೈ 15 ರಂದು ರಾಜಧಾನಿ ಶಿಮ್ಲಾದಲ್ಲಿ ಭೂಕಂಪನ ಸಂಭವಿಸಿತ್ತು. ಭೂಕಂಪದ ಪ್ರಮಾಣವು ರಿಕ್ಟರ್ ಮಾಪಕದಲ್ಲಿ 3.6 ದಾಖಲಾಗಿತ್ತು. ಕಾಂಗ್ರಾ, ಚಂಬಾ, ಲಾಹೌಲ್, ಕುಲ್ಲು ಮತ್ತು ಮಂಡಿ ಭೂಕಂಪದ ದೃಷ್ಟಿಕೋನದಿಂದ ಅತ್ಯಂತ ಸೂಕ್ಷ್ಮ ಪ್ರದೇಶಗಳಾಗಿವೆ.
2021 ರಲ್ಲಿ ಹಿಮಾಚಲದಲ್ಲಿ ಇದುವರೆಗೆ 40 ಕ್ಕೂ ಹೆಚ್ಚು ಭೂಕಂಪನ ಸಂಭವಿಸಿದೆ. ಹಿಮಾಚಲವು ಈಗಾಗಲೇ ಭೂಕಂಪದ ಭೀಕರ ದುರಂತವನ್ನು ಅನುಭವಿಸಿದೆ. 1905 ರಲ್ಲಿ ಕಾಂಗ್ರಾದಲ್ಲಿ ತೀವ್ರ ಭೂಕಂಪನದಿಂದಾಗಿ 20 ಸಾವಿರ ಜನರು ಸಾವನ್ನಪ್ಪಿದ್ದರು. ಅಂತೆಯೇ, 1975 ರಲ್ಲಿ ಕಿನ್ನೌರ್ನಲ್ಲಿ ಸಹ ಭಾರೀ ಅವಘಡ ಸಂಭವಿಸಿತ್ತು. ಇತ್ತೀಚೆಗೆ ಕಿನ್ನೌರ್ನಲ್ಲಿ ಭೂಕುಸಿತ ಸಂಭವಿಸಿ 9 ಜನ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯವಾಗಿತ್ತು. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.